ಶಿವಮೊಗ್ಗ. ಮೇ 24 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ ಚಾರ್ಲಿ ಚಾಪ್ಲಿನ್ ಅಭಿನಯ ಹಾಗೂ ನಿರ್ದೇಶನದ “ಸರ್ಕಸ್” ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾ ಭವನದ ಎರಡನೇ ಮಹಡಿಯ ಮಿನಿ ಚಿತ್ರಮಂದಿರದಲ್ಲಿ ದಿ: 25.05.19ರ ಶನಿವಾರದಂದು ಸಂಜೆ 5.30ಕ್ಕೆ ಆರಂಭವಾಗಲಿದೆ.
1928ರಲ್ಲಿ ತೆರೆಕಂಡ ಸರ್ಕಸ್ ಚಿತ್ರವು ಪ್ರೇಕ್ಷಕರ ಮನ್ನಣೆ ಪಡೆದು ಇಂದಿಗೂ ಚಿತ್ರ ಪ್ರೇಕ್ಷಕ ಜನಮಾನಸದಲ್ಲಿ ಹಸಿರಾಗಿದೆ. ಚಿತ್ರವು ಸಂಪೂರ್ಣ ಹಾಸ್ಯಮಯ ಮೂಕಿ ಚಿತ್ರವಾಗಿದೆ. ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್, ಅಲ್ ಎರ್ನಿಸ್ಟ್ ಗಾರ್ಸಿಯಾ, ಮೆರ್ನಾ ಕೆನಡಿ, ಹೆನ್ರಿ ಬರ್ಗಮನ್ ಮುಂತಾದವರಿದ್ದು, ಚಿತ್ರಕ್ಕೆ ರೋಲ್ಯಾಂಡ್ ಛಾಯಾಗ್ರಹಣ, ಆರ್ಥುರ್ ಕೇ ಸಂಗೀತವಿದೆ. ಸರ್ಕಸ್ ಚಿತ್ರಕ್ಕೆ ಚಾಪ್ಲಿನ್‍ರವರಿಗೆ ಅತ್ಯುತ್ತಮ ನಿರ್ದೇಶಕ, ಬರಹಗಾರ, ಅಭಿನಯ, ನಿರ್ಮಾಪಕ ಎಂದು ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಚಿತ್ರ ಪ್ರದರ್ಶನ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲು ಕೋರಲಾಗಿದೆ. ಚಿತ್ರದ ಒಟ್ಟು ಅವಧಿ 65 ನಿಮಿಷಗಳು.

error: Content is protected !!