News Next

ಶಿವಮೊಗ್ಗ, ಜುಲೈ 15: ಶಿವಮೊಗ್ಗ ನಗರದ ಗೋಪಿಶೆಟ್ಟಿ ಕೊಪ್ಪ ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ರಾಜೀವ್‍ಗಾಂಧಿ ಗ್ರಾಮೀಣ ನಿಗಮ, ಬೆಂಗಳೂರು ಇವರ ಆದೇಶದಂತೆ ನಗರ ಆಶ್ರಯ ಸಮಿತಿ ತೀರ್ಮಾನಿಸಿರುವ ಪ್ರಕಾರ ಜಿ+ ಮಾದರಿಯ ಮನೆಗಳನ್ನು ಶಿವಮೊಗ್ಗ ನಗರದ ನಿವೇಶನರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿಗಳನ್ನು Shivಚಿmoggಚಿಛಿiಣಥಿಛಿoಡಿಠಿ.oಡಿg ಜಾಲತಾಣದ ‘ಂshಡಿಚಿಥಿಚಿ ಙoರಿಚಿಟಿಚಿ ಂಠಿಟಟiಛಿಚಿಣoಟಿ’ ಮೆನುವಿನಲ್ಲಿ ಆನ್‍ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಅವಧಿ ಜುಲೈ 1 ರಿಂದ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕಡೆಯ ದಿನವಾಗಿದೆ. ಹಾಗೂ ಬ್ಯಾಂಕ್ ಮೂಲಕ ನಿಗದಿತ ಶುಲ್ಕವನ್ನು ಪಾವತಿಸಲು ಅಕ್ಟೋಬರ್ 05 ಕಡೆಯ ದಿನವಾಗಿದೆ.     18 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. (ಮಾಜಿ ಸೈನಿಕ, ವಿಕಲಚೇತನ, ವಿಧುರ ಹಾಗೂ ಹಿರಿಯ ನಾಗರೀಕ ಪುರಷ ಅಭ್ಯರ್ಥಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ.)
    ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಾಗಿರಬೇಕು. ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರಬೇಕು. ಅರ್ಜಿದಾರರು ಮತ್ತು ಅವರ ಕುಟುಂಬದವರು ಸ್ವಂತ ನಿವೇಶನ/ಮನೆಯನ್ನು ಹೊಂದಿರಬಾರದು. ಬೇರೆ ಯಾವುದೇ ಯೋಜನೆಯಡಿಯಲ್ಲಿ ನಿವೇಶನ/ವಸತಿ ಸೌಲಭ್ಯವನ್ನು ಪಡೆದಿರಬಾರದು. ಹಾಗೂ ಈ ಹಿಂದೆ ಯಾವುದಾದರು ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ವಿವರ ನೀಡುವುದು. ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ(ರೂ.86,700 ಕ್ಕಿಂತ ಕಡಿಮೆ ಆದಾಯ)ಹೊಂದಿರಬೇಕು. ತೃತೀಯ ಲಿಂಗಿಗಳೂ(ಟ್ರಾನ್ಸ್‍ಜೆಂಡರ್) ಸಹ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಶುಲ್ಕ : ಸಾಮಾನ್ಯ ಪ್ರವರ್ಗ1, 2(ಎ), 2(ಬಿ), 3(ಬಿ) ಗೆ ಸೇರಿದ ಅರ್ಜಿದಾರರಿಗೆ ಅರ್ಜಿ ಶುಲ್ಕ 200 ಇಎಂಡಿ ಮೊತ್ತ ರೂ.8000 ಒಟ್ಟು ರೂ.8200 ಆಗಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರಿಗೆ ಅರ್ಜಿ ಶುಲ್ಕ ರೂ.100 ಇಎಂಡಿ ಮೊತ್ತ 5000 ಒಟ್ಟು 5100 ಆಗಿರುತ್ತದೆ. ಆನ್‍ಲೈನ್‍ನಲ್ಲಿ ಅರ್ಜಿ ತುಂಬಿದ ನಂತರ ಜನರೇಟೆಡ್ ಚಲನ್‍ನೊಂದಿಗೆ ನಿಗದಿತ ಶುಲ್ಕವನ್ನು ಕೆನರಾ ಬ್ಯಾಂಕ್ ಎಲ್ಲಾ ಶಾಖೆಗಳು/ಬ್ಯಾಂಕ್ ಆಫ್ ಬರೋಡದ ಎಸ್.ಆರ್.ಶಾಖೆಗಳು/ಇಂಡಿಯನ್ ಬ್ಯಾಂಕ್‍ನ ಮಹಾನಗರಪಾಲಿಕೆ ಶಾಖೆ ಹಾಗೂ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದು ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.
ಮೀಸಲಾತಿ ವಿವರ : ಪರಿಶಿಷ್ಟ ಜಾತಿ ಶೇ.30, ಪರಿಶಿಷ್ಟ ಪಂಗಡ ಶೇ.10, ಅಲ್ಪಸಂಖ್ಯಾತರು ಶೇ.10, ಸಾಮಾನ್ಯ ವರ್ಗ ಶೇ.50 ಆಗಿರುತ್ತದೆ.
    ಅರ್ಜಿದಾರರ ಪಾಸ್‍ಪೋರ್ಟ್ ಸೈಜಿನ ಇತ್ತೀಚಿನ ಕಲರ್ ಭಾವಚಿತ್ರ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಜಾತಿ/ಇತರೆ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‍ಬುಕ್, ವಾರ್ಷಿಕ ಆದಾಯ ಪ್ರಮಾಣ ಪತ್ರದ ಮೂಲ ದಾಖಲಾತಿಗಳು ಹಾಗೂ ದಾಖಲಾತಿಗಳ ಸಂಖ್ಯೆಗಳ ಮಾಹಿತಿಯನ್ನು ಸ್ಪಷ್ಟವಾಗಿ ತುಂಬಿ ಆನ್‍ಲೈನ್‍ನಲ್ಲಿ ಸಲ್ಲಿಸಬೇಕು. ಅಪೂರ್ಣ ವಿವರ ನೀಡಿದಲ್ಲಿ ಅಥವಾ ತಪ್ಪು ಮಾಹಿತಿ ನೀಡಿದಲ್ಲಿ ತಿಳುವಳಿಕೆಯನ್ನು ನೀಡದೇ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ಮಹಾನಗರಪಾಲಿಕೆಯ ನಗರ ಆಶ್ರಯ ಸಮಿತಿ ಅಧ್ಯಕ್ಷರು ಹಾಗೂ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!