ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣ, ಶಿವಮೊಗ್ಗ ಇಲ್ಲಿ 2 ದಿನಗಳ “ಜಾನುವಾರುಗಳ ರೋಗ ಪತ್ತೆಯಲ್ಲಿ ಇತ್ತೀಚಿನ ಆವಿಷ್ಕಾರಗಳು” ಎಂಬ ಶಿರ್ಷಿಕೆಯ ತಾಂತ್ರಿಕ ಕಾರ್ಯಾಗಾರವನ್ನು ದಿನಾಂಕ 25-26 ಫೆಬ್ರವರಿ 2021 ರಂದು ಏರ್ಪಡಿಸಿದ್ದು, ಇದರಲ್ಲಿ ಜಾನುವಾರುಗಳಿಗೆ ಬರುವ ವಿವಿಧ ಕಾಯಿಲೆಗಳ ರೋಗ ಪತ್ತೆ ವಿಧಾನದ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳ ಸಮೇತ ತರಬೇತಿಯನ್ನು ವಿಷಯ ತಜ್ಞರಿಂದ ಒದಗಿಸಲಾಯಿತು. ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 30 ಪಶುವೈದ್ಯರು ಭಾಗವಹಿಸಿದ್ದು ಕ್ಷೇತ್ರ ಮಟ್ಟದ ಪಶುವೈದ್ಯರ ಜ್ಞಾನ ಹೆಚ್ಚಿಸುವುದರಲ್ಲಿ ಇದು ಸಹಕಾರಿಯಾಗಲಿದೆ ಎಂದು ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರಾಗಿರುವ ಡಾ: ಎನ್.ಬಿ.ಶ್ರೀಧರ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಮುಲ್ನ ವ್ಯವಸ್ಥಾಪಕ ನಿರ್ದೇಶಕರಾದ ಡಾ: ಬಸವರಾಜ್ ಕೆ ಎಸ್ ಇವರು ಭಾಗವಹಿಸಿ, ಹಾಲಿನ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮತ್ತು ಹಾಲಿನಲ್ಲಿ ಜೀವನಿರೋಧಕಗಳು ಹಾಗೂ ಶಿಲೀಂದ್ರ ವಿಷಗಳನ್ನು ಕಡಿಮೆ ಮಾಡುವಲ್ಲಿ ಪಶುವೈದ್ಯರ ಪಾತ್ರ ಮಹತ್ವದ್ದಾಗಿದ್ದು, ಪಶುವೈದ್ಯರು ರೈತರ ಒಳಿತಿಗಾಗಿ ಶ್ರಮಿಸಬೇಕೆಂದರು. ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಡೀನ್ರವರಾದ ಡಾ: ಪ್ರಕಾಶ್ ನಡೂರ್ ಮಾತನಾಡುತ್ತಾ ಪಶುಚಿಕಿತ್ಸೆಯಲ್ಲಿ ಔಷಧಗಳನ್ನು ಎಚ್ಚರಿಕೆಯೆಂದು ಬಳಸಬೇಕೆಂದು, ಜೀವನಿರೋಧಕ ಮತ್ತು ಜಂತುನಾಶಕಗಳ ಶೇಷವು ಹಾಲಿನಲ್ಲಿ ಅತ್ಯಂತ ಕಡಿಮೆಯಿರುವಂತೆ ಪಶುಚಿಕಿತ್ಸೆ ಮಾಡಬೇಕೆಂದು ಕರೆಯಿತ್ತರು. ಡಾ: ಸುನಿಲಚಂದ್ರ ಕಾರ್ಯಕ್ರಮ ನಿರೂಪಿಸಿದರೆ, ಡಾ: ಪವನ್ ವಂದನಾರ್ಪಣೆ ಮಾಡಿದರು. ಡಾ: ಕವಿತಾ ರಾಣಿ, ಡಾ: ಪ್ರದೀಪ್, ಡಾ: ಮಂಜುನಾಥ್, ಡಾ: ಪ್ರಶಂತ್, ಡಾ:ಸಂತೋಷ್ ಸಜ್ಜನ್, ಡಾ:ಸುಂದರೇಶನ್, ಡಾ:ಶೀಲಾ, ಡಾ:ಪಟೇಲ್ ಸುರೇಶ್ ರೇವಣ್ಣ, ಡಾ: ಸಜ್ಜನ್, ಡಾ: ಮಾಧವಪ್ರಸಾದ್, ಡಾ:ಜಯರಾಮು, ಡಾ:ಅರುಣ್, ಡಾ:ಶಂಬುಲಿ0ಗಪ್ಪ, ಡಾ:ಕೊಟ್ರೇಶ್ ಇವರು ವಿಷಯ ತಜ್ಞರು ಮತ್ತು ಸಂಪೂನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.