ನೀಡಿದ ಶ್ರೀ ಸತ್ಯಾತ್ಮ ತೀರ್ಥರುಆಯುರಾತ್ಮ ಆಯುರ್ವೇದ ತಪಾಸಣಾ ಶಿಬಿರ

ಹೊಳೆಹೊನ್ನೂರು : ಆಯುರಾತ್ಮ ಆಯುರ್ವೇದ ತಪಾಸಣಾ ಮತ್ತು ಉಚಿತ ಚಿಕಿತ್ಸಾ ಶಿಬಿರಕ್ಕೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಭಾನುವಾರ ಚಾಲನೆ ನೀಡಿದರು.
ಚಾತುರ್ಮಾಸ್ಯ ಕಾಲದ ಪ್ರತೀ ಭಾನುವಾರದಂದು ಈ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಉದ್ಘಾಟನೆಯ ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಶರೀರವನ್ನು ನಾವು ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳಬೇಕು. ಆಗ ಮಾತ್ರ ಸಾಧನ ಮಾರ್ಗದಲ್ಲಿ ಸಾಗಲು ಸಾಧ್ಯ. ಇಂದಿನ ನಮ್ಮ ಪಾಶ್ಚಾತ್ಯ ಅನುಕರಣೀಯ ಜೀವನ ಶೈಲಿ ಅನೇಕ ಒತ್ತಡಕ್ಕೆ ಕಾರಣವಾಗುತ್ತಿದೆ. ಯೋಗ, ಪ್ರಾಣಾಯಾಮವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಚಾತುರ್ಮಾಸ್ಯ ವ್ಯವಸ್ಥಾಪನಾ ಸಮಿತಿಯ ನವರತ್ನ ಶ್ರೀನಿವಾಸಾಚಾರ್ಯ ಮಾತನಾಡಿ, ಶ್ರೀಪಾದಂಗಳವರ ಆಜ್ಞಾನುಸಾರ ಈ 80 ದಿನಗಳ ಅವಧಿಯಲ್ಲಿ ವಿವಿಧ ಸೇವಾ ಕಾರ್ಯಗಳನ್ನೂ ನಡೆಸುತ್ತಿz್ದÉೀವೆ ಎಂದರು.
ನಂತರ ಭಾಗವಹಿಸಿದ್ದ ಅನೇಕ ಭಕ್ತರು ಇದರ ಪ್ರಯೋಜನ ಪಡೆದರು. ಬಿಪಿ, ಶುಗರ್ ತಪಾಸಣೆ ನಡೆಸಲಾಯಿತು. ಸ್ರ್ತೀ ಆರೋಗ್ಯ ಸಮಸ್ಯೆಯ ಕುರಿತು ಅನೇಕ ಮಹಿಳೆಯರು ಸಲಹೆ ಪಡೆದರು. ಇದೇ ವೇಳೆ ಅಗತ್ಯ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು.
ವೈದ್ಯರಾದ ಬಿಜಾಪುರದ ಡಾ. ಲೋಕನಾಥ ಅವಧಾನಿ, ಆಲ್ಮೇಲ್‍ನ ಡಾ. ಹರೀಶ್ ದೇಶಪಾಂಡೆ, ಡಾ. ಸಂಜನಾ ದೇಶಪಾಂಡೆ, ಯಾದಗಿರಿಯ ಡಾ. ಪ್ರಸಾದ ಕುಲಕರ್ಣಿ, ಗುರುಮಿಠಕಲ್‍ನ ಡಾ. ಅಶ್ವತ್ಥ್ ಮಠ್ ತಪಾಸಣೆ ನಡೆಸಿದರು. ಎಎಲ್‍ಎನ್ ರಾವ್ ಮೆಮೋರಿಯಲ್ ಆಯುರ್ವೇದ ಕಾಲೇಜಿನ ಕೊನೆಯ ವರ್ಷದ ವಿದ್ಯಾರ್ಥಿನಿಯರಾದ ಸಂಜನಾ ರಾವ್, ಸ್ನೇಹಾ, ಮಧುರಾ ಹಾಜರಿದ್ದರು.

Contact: Tile Joint filling epoxy grout application information & details : Mr. Pradeep kumar: 9972282763

ಸಜ್ಜನರ ಅಪಹಾಸ್ಯದಿಂದ ಅನರ್ಥ: ಸ್ವಾಮೀಜಿ
ಒಬ್ಬ ವ್ಯಕ್ತಿ ಅತ್ಯಂತ ಸುಖವಾಗಿ, ನೆಮ್ಮದಿಯಿಂದ ಆದರ್ಶ ಜೀವನ ನಡೆಸಲು ಯಾವ ಸಂದೇಶಗಳುಗಳು ಬೇಕೋ ಎಲ್ಲವನ್ನೂ ಶ್ರೀಮದ್ ಭಾಗವತ ನಮಗೆ ತಿಳಿಸುತ್ತದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.
ಭಾನುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಇಂದು ಸಮಾಜದಲ್ಲಿ ಸಜ್ಜನರು, ಧಾರ್ಮಿಕರನ್ನು ನೋಡಿ ಅಪಹಾಸ್ಯ ಮಾಡುವ ವಿಕೃತಿ ಹೆಚ್ಚಾಗುತ್ತಿದೆ. ಇಂತಹ ನಿಂದೆ, ಆಕ್ಷೇಪಗಳಿಂದ ಅನರ್ಥವೇ ಹೊರತು ಯಾವ ಪ್ರಯೋಜನಗಳಿಲ್ಲ ಎಂದರು.
ಸಭಾ ಕಾರ್ಯಕ್ರಮದಲ್ಲಿ ಅಜಯಾಚಾರ್ಯ ಜೋಷಿ ಪ್ರವಚನ ನೀಡಿದರು. ಸಭೆಯಲ್ಲಿ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಖಜಾಂಚಿ ರಾಮಧ್ಯಾನಿ ಅನಿಲ್, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕೃಷ್ಣಾಚಾರ್ಯ ರಾಯಚೂರು ಮೊದಲಾದವರಿದ್ದರು.

ಆಯುರಾತ್ಮ ಆಯುರ್ವೇದ ತಪಾಸಣಾ ಮತ್ತು ಉಚಿತ ಚಿಕಿತ್ಸಾ ಶಿಬಿರಕ್ಕೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಭಾನುವಾರ ಚಾಲನೆ ನೀಡಿದರು.

error: Content is protected !!