ಶಿವಮೊಗ್ಗ, : ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕ್ಷಿಪ್ರ ಪರಿಹಾರ ಒದಗಿಸಲು ಜಲಸೇವಾ ನಿಯಂತ್ರಣ ಕೊಠಡಿಗಳನ್ನು ಆರಂಭಿಸಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶಿವರಾಮೇಗೌಡ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು 24ಗಂಟೆ ಕಾಲ ಈ ಕೊಠಡಿ ಕಾರ್ಯನಿರ್ವಹಿಸಲಿವೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ದೂರು, ಅಹವಾಲುಗಳನ್ನು ಸೇವಾ ಜಾಲದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದಾಖಲಿಸಬಹುದಾಗಿದೆ. ಸೇವಾ ಜಾಲದ ಅಂಗವಾಗಿ ಆರಂಭಿಸಲಾಗಿರುವ ನಿಯಂತ್ರಣ ಕೊಠಡಿಗಳ ದೂರವಾಣಿ ಸಂಖ್ಯೆ ಈ ಕೆಳಗಿನಂತಿವೆ.
ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿಯ ಸಂಪರ್ಕಾಧಿಕಾರಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಶಿವಮೊಗ್ಗ ಆಗಿದ್ದು, 08182-228048, 9880633271 ಸಂಪರ್ಕಿಸಬಹುದು. ತಾಲೂಕು ಮಟ್ಟದಲ್ಲಿ ಸಂಪರ್ಕಾಧಿಕಾರಿಯಾಗಿ ಆಯಾ ತಾಲೂಕಿನ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರನ್ನು ನೇಮಿಸಲಾಗಿದೆ. ಸಂಪರ್ಕ ಸಂಖ್ಯೆ ಇಂತಿವೆ. ಶಿವಮೊಗ್ಗ 08182-250270, 9481492685, ಭದ್ರಾವತಿ 08282-269694, 8217096849/9448921707, ತೀರ್ಥಹಳ್ಳಿ 08181-229767, 9448173120, ಸಾಗರ 08183-228212, ಹೊಸನಗರ 08185-221138, 9591389166, ಶಿಕಾರಿಪುರ 08187-223122, 9480151123, ಸೊರಬ 08184-272071, 9480876128.
ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ದೂರುಗಳನ್ನು ಸದರಿ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದಾಖಲಿಸಬಹುದಾಗಿದ್ದು, ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

error: Content is protected !!