ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ ಆಯೋಜಿಸಿದ್ದ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕಬ್ಬಡಿ, ಕುಸ್ತಿ ಸೇರಿದಂತೆ ದೇಶದ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಪ್ರಯತ್ನ ನಡೆಸಬೇಕಿದೆ. ದೇಸಿ ಕ್ರೀಡೆ ಉಳಿಸಲು ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಗಣಪತಿಕೆರೆ ಸಮಗ್ರ ಅಭಿವೃದ್ಧಿ: ಸಾಗರದ ಗಣಪತಿಕೆರೆ ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗುತ್ತಿದೆ. ಇನ್ನೂ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಸರ್ಕಾರದಿಂದ ಅನುದಾನ ತರುವ ಮೂರು ವರ್ಷದೊಳಗೆ ಕೆಲಸ ಪೂರ್ಣಗೊಳಿಸಲಾಗುವುದು. ಸ್ವಚ್ಛ ಆಗಿರುವ ಗಣಪತಿಕೆರೆ ಪ್ರವಾಸೋದ್ಯಮ ದೃಷ್ಠಿಯಿಂದಲೂ ಅಭಿವದ್ಧಿ ಮಾಡಲಾಗುವುದು. ಇನ್ನೆಂದು ಕೆರೆಯು ಕಲುಷಿತವಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ ಎಂದರು.
113 ಅಡಿ ಎತ್ತರದ ಬಾವುಟ: ಗಣಪತಿಕೆರೆ ಮೇಲ್ಭಾಗದ ಆವರಣದಲ್ಲಿ 113 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡಲಾಗುವುದು. ವರ್ಷದ ಎಲ್ಲ ದಿನಗಳಲ್ಲಿ ರಾಷ್ಟ್ರಧ್ವಜ ಹಾರಿಸಲಾಗುವುದು. ಅಲ್ಲದೇ ಎಲ್ಲರೂ ಸೇರಿಕೊಂಡು ಸಾಗರ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸೋಣ ಎಂದು ಹೇಳಿದರು.
ಇನ್ನೂ ಎರಡು ದಿನ: ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯು ಸಾಗರದ ಜಾತ್ರೆ ಪ್ರಯುಕ್ತ ಇನ್ನೂ ಎರಡು ದಿನ ನಡೆಯಲಿದೆ. ರಾಜ್ಯ, ರಾಷ್ಟ್ರಮಟ್ಟದ ಕುಸ್ತಿಮಲ್ಲರ ಪಂದ್ಯಗಳು ರೋಚಕತೆಯಿಂದ ಕೂಡಿರಲಿದೆ. ಮೊದಲ ದಿನದ ಪಂದ್ಯಗಳು ಸಹ ಉತ್ತಮ ಹಣಾಹಣಿಯಿಂದ ಕೂಡಿತ್ತು. ಫೆ. 23ರ ಭಾನುವಾರ ಮಧ್ಯಾಹ್ನ 3ರಿಂದ ಮಹಿಳಾ ಕುಸ್ತಿ ಪಂದ್ಯವಾಳಿ ಏರ್ಪಡಿಸಲಾಗಿದೆ.
ಹೊಳೆಹೊನ್ನೂರು ರಮೇಶ್ ಹಾಗೂ ಕೊಲ್ಲಾಪುರದ ಅಜಿತ್ ಪಾಟೀಲ್ ನಡುವಿನ ಮೊದಲ ಪಂದ್ಯವು ಉತ್ತಮ ಪಟ್ಟುಗಳಿಂದ ಕೂಡಿತ್ತು. ಪರಸ್ಪರ ಗೆಲುವಿಗೆ ಹೆಚ್ಚಿನ ಸಮಯ ಸೆಣಸಾಡಿದರು. ಹೆಚ್ಚುವರಿ 2 ನಿಮಿಷದ ಸಮಯದಲ್ಲಿ ಅಂತಿಮವಾಗಿ ಹೊಳೆಹೊನ್ನೂರಿನ ರಮೇಶ್ ವಿಜಯಶಾಲಿಯಾಗಿ 4,000 ರೂ. ನಗದು ಬಹುಮಾನ ಮತ್ತು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.
ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ಗಣೇಶ್‍ಪ್ರಸಾದ್, ತುಕರಾಂ, ಶ್ರೀ ಮಾರಿಕಾಂಬ ವ್ಯವಸ್ಥಾಪಕ ಸಮಿತಿ ಉಪಾಧ್ಯಕ್ಷ ಯು.ಎಲ್.ಮಂಜಪ್ಪ, ಕುಸ್ತಿ ಸಮಿತಿ ಸಂಚಾಲಕ ಸುಂದರ್‍ಸಿಂಗ್, ಸಹಸಂಚಾಲಕ ಎಂ.ಎಸ್.ಶಶಿಕಾಂತ್, ಎಸ್.ಅಶೋಕ್, ಪಾಣಿ ರಾಜಪ್ಪ, ದೇವೆಂದ್ರಪ್ಪ, ಗೋಪಾಲ್ ಗರಡಿಮನೆ ಮತ್ತಿತರರು ಹಾಜರಿದ್ದರು.
——
ಸಾಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸಿದರು.
——