ಶಿವಮೊಗ್ಗ, ಸೆಪ್ಟೆಂಬರ್ 14:
ಗ್ರಾಮೀಣ ಕೈಗಾರಿಕೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 2021-22ನೇ ಸಾಲಿನ ಜಿಲ್ಲಾ ವಲಯದ ಕಾರ್ಯಕ್ರಮದಡಿಯಲ್ಲಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೊಳಪಡುವ ಗ್ರಾಮೀಣ ಪ್ರದೇಶದ 18 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಾಲ್ಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಛೇರಿ ಅಥವಾ ಉಪನಿರ್ದೇಶಕ ಕಚೇರಿ, ಗ್ರಾಮೀಣ ಕೈಗಾರಿಕೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಶಿವಮೊಗ್ಗ ಅಥವಾ ಗ್ರಾ.ಪಂ ಗಳಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸೆ.23 ರೊಳಗೆ ಸಲ್ಲಿಸಬೇಕು.
ಬಂಡವಾಳ ಹೂಡಿಕೆ ಸಹಾಯಧನ:- ಬಂಡವಾಳ ಹೂಡಿಕೆ ಸಹಾಯಧನ ಕಾರ್ಯಕ್ರಮವು ಗ್ರಾಮೀಣ ಪ್ರದೇಶದಲ್ಲಿ ವೃತ್ತಿಪರ ಕುಶಲಕರ್ಮಿಗಳಿಗೆ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುವಂತೆ ಯೋಜನಾ ವೆಚ್ಚದ ಮೇಲೆ ಶೇಕಡಾ 60 ರಷ್ಟು ಅಥವಾ ಗರಿಷ್ಟ ರೂ. 10,000/-ರವರೆಗೆ ಸಹಾಯಧನ ಹಾಗೂ ಉಳಿಕೆ ಯೋಜನಾ ವೆಚ್ಚವು ಬ್ಯಾಂಕಿನ ಸಾಲ ಹಾಗೂ ಕುಶಲ ಕರ್ಮಿಯ ವಂತಿಕೆಯಿಂದ ಪೂರೈಸುವುದು. ಈ ಸಂಬಂಧ ವೆಚ್ಚವು ರೂ. 30,000/-ಕ್ಕಿಂತ ಮೀರಬಾರದು ಹಾಗೂ ಮಾರ್ಗಸೂಚಿಯಲ್ಲಿರುವಂತೆ ನಿಯಮಾನುಸಾರ ವೆಚ್ಚ ಮಾಡಬೇಕು.
ತರಬೇತಿ:- ಜಿಲ್ಲೆಯಾದ್ಯಂತ 150 ಗ್ರಾಮೀಣ ಫಲಾನುಭವಿಗಳಿಗೆ ಹೊಲಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗ ಪ್ರಾರಂಭಿಸಲು ಉಚಿತವಾಗಿ ಹೊಲಿಗೆ ಯಂತ್ರವನ್ನು(ಹೊಲಿಗೆ ಯಂತ್ರದ ಮೌಲ್ಯ ರೂ. 5,000/-ದೊಳಗೆ ಇರುತ್ತದೆ) ನೀಡಲಾಗುವುದು.
ಸಾಗರದ ಕುಶಲ ಕರ್ಮಿ ತರಬೇತಿ ಸಂಸ್ಥೆ(ಮಲ್ಟಿ ಸ್ಕಿಲ್ ಟ್ರೈನಿಂಗ್)ನಲ್ಲಿ 60 ಫಲಾನುಭವಿಗಳಿಗೆ ಇಂಡಸ್ಟ್ರಿಯಲ್ ಸೀವಿಂಗ್ ಮಷಿನ್ ತರಬೇತಿ ಮಾತ್ರ (ಉಚಿತ ಉಪಕರಣ ಹೊರತುಪಡಿಸಿ) ಹಾಗೂ 30 ಫಲಾನುಭವಿಗಳಿಗೆ ಕಂಪ್ಯೂಟರ್ ಆಧಾರಿತ ತರಬೇತಿಗೆ ಮಾತ್ರ (ಉಚಿತ ಉಪಕರಣ ಹೊರತುಪಡಿಸಿ) ತರಬೇತಿ ನೀಡಲಾಗುವುದು.
ಮುಂದುವರೆದು ಹೊಲಿಗೆ ಯಂತ್ರ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ತಾವು ಈಗಾಗಲೇ ಸರ್ಕಾರದ ವಿವಿಧ ಯೋಜನೆಯಡಿ ವಿವಿಧ ಸಂಸ್ಥೆಗಳಿಂದ ತರಬೇತಿ ಪಡೆದಿರುವ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸುವುದು.