ಶಿವಮೊಗ್ಗ, ಫೆಬ್ರವರಿ 16, : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ 2022-23 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಗುರುಶಿಷ್ಯ ಪರಂಪರೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಗುರುಶಿಷ್ಯ ಪರಂಪರೆ ಅಕಾಡೆಮಿ ವ್ಯಾಪ್ತಿಯೊಳಗೆ ಬರುವ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯ (ಭರತನಾಟ್ಯ,ಕಥಕ್,ಕೂಚಿಪುಡಿ), ಕಥಾಕೀರ್ತನ ಮತ್ತು ಗಮಕ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ಸಂಸ್ಥೆಯ ಗುರುಗಳ ಮೂಲಕ 5 ತಿಂಗಳ ಸಂಗೀತ ನೃತ್ಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳು 16 ರಿಂದ 30 ವರ್ಷದ ಒಳಗಿರಬೇಕು. ಗುರುಗಳ ಬಳಿ ಕನಿಷ್ಠ 2 ವರ್ಷ ಅಭ್ಯಾಸ ಮಾಡಿರಬೇಕು. ಗುರುಗಳ ಪ್ರಮಾಣ ಪತ್ರ ಲಗತ್ತಿಸಬೇಕು. ಓದು ಬರಹ ಬಲ್ಲವರಾಗಿರಬೇಕು. ಪ್ರತಿಷ್ಠಿತ ಸಂಸ್ಥೆಗಳು ಅರ್ಜಿ ಸಲ್ಲಿಸಲು ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರಬೇಕು. ಸಂಸ್ಥೆ ನೊಂದಣಿ ಹಾಗೂ ನವೀಕರಣ ಪತ್ರ ಲಗತ್ತಿಸಬೇಕು.