
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಾಗೂ ಈದ್ ಮಿಲಾದ್ ಹಬ್ಬದ ಸಂದರ್ಭ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ಬುಧವಾರ ಡಿಎಆರ್ ಸಭಾಂಗಣದಲ್ಲಿ ಶಿವಮೊಗ್ಗ ಸರ್ಜಿ ಫೌಂಡೇಷನ್ ವತಿಯಿಂದ 3 ಸಾವಿರ ಕುಡಿಯುವ ನೀರಿನ ವಾಟರ್ ಬಾಟಲ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಿವೈಎಸ್ಪಿ ಕೃಷ್ಣಮೂರ್ತಿ, ಸರ್ಜಿ ಫೌಂಡೇಷನ್ನ ಟ್ರಸ್ಟಿಗಳಾದ ಈಶ್ವರ್ ಸರ್ಜಿ, ಹರ್ಷ ಸರ್ಜಿ, ಸರ್ಜಿ ಆಸ್ಪತ್ರೆಗಳ ಸಮೂಹದ ಆಡಳಿತಾಧಿಕಾರಿ ಕೆ.ಆರ್.ಪುರುಷೋತ್ತಮ್ ಹಾಗೂ ಚಂದ್ರು ಮಲವಗೊಪ್ಪ ಮುಂತಾದವರು ಹಾಜರಿದ್ದರು.