ಶಿವಮೊಗ್ಗ, ಜುಲೈ-22 ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನಸಾಂದ್ರತೆ ಹೆಚ್ಚಾಗಿರುವ ಹಳೇ ಶಿವಮೊಗ್ಗ ಭಾಗದ ವಾರ್ಡ್ ನಂ.: 12,13 ಮತ್ತು 33 ಭಾಗಶಃ ಪ್ರದೇಶ ಹಾಗೂ 22,23,29 ಮತ್ತು 30 ವಾರ್ಡ್ಗಳನ್ನು ಸಂಪೂರ್ಣವಾಗಿ ಜುಲೈ 23ರ ಬೆಳಿಗ್ಗೆ 5ರಿಂದ ಜುಲೈ 29ರ ರಾತ್ರಿ 9ಗಂಟೆಯವರೆಗೆ ಕ್ಲಸ್ಟರ್ ಕಂಟೋನ್ಮೇಂಟ್ ಏರಿಯಾ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಆದೇಶಿಸಿರುತ್ತಾರೆ. ಕ್ಲಸ್ಟರ್ ಕಂಟೈನ್ಮೆಂಟ್ ಏರಿಯಾ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಸೀಲ್ಡೌನ್ ಆಗಲಿರುವ ಪ್ರದೇಶಗಳ ವಿವರ ಇಂತಿದೆ: ಪೆನ್ಷನ್ ಮೊಹಲ್ಲಾ, ಓಲ್ಡ್ಬಾರ್ಲೈನ್ ರಸ್ತೆ, ಪೊಲೀಸ್ ವಸತಿಗೃಹ, ಕೋಟೆರಸ್ತೆ, ಅಶೋಕ ರಸ್ತೆ, ಅವಲಕ್ಕಿ ಕೇರಿ, ಯಾಲಕಪ್ಪನ ಕೇರಿ, ಅರೆದುರ್ಗಮ್ಮನ ಕೇರಿ, ಲಷ್ಕರ್ ಮೊಹಲ್ಲಾ, ಅಲೆಮಾನ್ ಕೇರಿ, ಸೋಮೇಶ್ವರ ಬಡಾವಣೆ, ಗಾಂಧಿ ಬಜಾರ್, ಸಾವರ್ಕರ್ನಗರ, ಧರ್ಮರಾಯನ ಕೇರಿ, ಆನವೇರಪ್ಪನ ಕೇರಿ, ಕೊಲ್ಲುರಯ್ಯನ ಬೀದಿ, ಸುಣ್ಣಗಾರ ಬೀದಿ, ತಿರುಪಾಳ್ಳಯ್ಯನ ಬೀದಿ, ಬ್ಯಾಡರಕೇರಿ, ಅಗಸರಕೇರಿ, ಎಸ್.ಪಿ.ಎಂ.ರಸ್ತೆ, ಎಂ.ಕೆ.ಕೆ.ರಸ್ತೆ, ಸಿನಿಮಾ ರಸ್ತೆ, ನಾಗಪ್ಪನಕೇರಿ, ತಿರುಪಳಯ್ಯನ ರಸ್ತೆ, ಗಾಲೀಬ್ ಸಾಬ್ ರಸ್ತೆ, ತುಳಜಾ ಭವಾನಿ ರಸ್ತೆ, ಕೊಲ್ಲೂರಯ್ಯನ ಕೇರಿ, ಗಂಗಾಪರಮೇಶ್ವರಿ ದೇವಸ್ಥಾನ ರಸ್ತೆ, ವಿನಾಯಕ ರಸ್ತೆ, ತಿಗಳರ ಕೇರಿ, ಶಿವಾಜಿ ರಸ್ತೆ, ಕೆ.ಆರ್.ಪುರಂ ಮುಖ್ಯರಸ್ತೆ, ಓ.ಟಿ.ರಸ್ತೆ, ಬಿ.ಹೆಚ್.ರಸ್ತೆ, ಪಂಚವಟಿ ಕಾಲೋನಿ, ಗೌಡ ಸಾರಸ್ವತ ಕಲ್ಯಾಣ ಮಂಟಪ ಏರಿಯಾ, ಆಜಾದ್ನಗರ, ರವಿವರ್ಮ ಬೀದಿ, ರಾಮಮಂದಿರ ಸುತ್ತಮುತ್ತಲಿನ ಏರಿಯಾ, ಎನ್.ಟಿ.ರಸ್ತೆ 7ನೇ ತಿರುವು, ಪಿ.ಡಬ್ಲ್ಯೂ.ಡಿ. ಕ್ವಾಟ್ರಸ್, ಗುರುದೇವ ರಸ್ತೆಯ 5,6 &7ನೇ ಕ್ರಾಸ್ಗಳು, ಕ್ಲಾರ್ಕ್ ಪೇಟೆ, ಎಸ್.ವಿ.ತಿಮ್ಮಯ್ಯ ರಸ್ತೆ, ಭಾರತಿ ಕಾಲೋನಿ, ರವಿವರ್ಮ ಬೀದಿ ಬಲಭಾಗ, ಸಿದ್ದಯ್ಯ ರಸ್ತೆ ಬಲಭಾಗ, ತಿಮ್ಮಪ್ಪನ ಕೊಪ್ಪಲು, ಟಿ.ಎಸ್.ಆರ್.ರಸ್ತೆ, ಕೆರೆದುರ್ಗಮ್ಮನ ಕೇರಿ, ಕೆಂಚರಾಯನ ಬೀದಿ, ಕುಂಬಾರಬೀದಿ, ಬ್ರಾಹ್ಮಣರ ಬೀದಿ, ಸತ್ಯ ಪ್ರಮೋದದಿಂದ ಅಂತರ್ಘಟ್ಟಮ್ಮ ದೇವಸ್ಥಾನದವರೆಗೆ, ಮಂಡಕ್ಕಿ ಭಟ್ಟಿ, ರವಿವರ್ಮ ಬೀದಿಯಿಂದ ಸಿದ್ದಪ್ಪ ಡಾಬಾದವರೆಗೆ, ಭಾರತಿ ಕಾಲೋನಿ, ಇಮಾಂಬಾಡ, ಮುರಾದ್ನಗರ ಮತ್ತು ಅಹಮ್ಮದ್ ನಗರ ಈ ಎಲ್ಲಾ ಏರಿಯಾಗಳು ಕಂಟೋನ್ಮೆಂಟ್ ಏರಿಯಾಗಳೆಂದು ಘೋಷಿಸಲಾಗಿದೆ.