ಶಿವಮೊಗ್ಗ, ಆಗಸ್ಟ್ 06 :ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಶಿವಮೊಗ್ಗ ಇಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ(ಸಿಎಂಕೆಕೆವೈ)ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಎಲ್ಲಾ ವರ್ಗದ ನಿರುದ್ಯೋಗಿ ಯುವಕ/ಯುವತಿಯರಿಗೆ ಉಚಿತವಾಗಿ ವಿವಿಧ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ಸಿಎನ್ಸಿ ಆಪರೇಟರ್/ವರ್ಟಿಕಲ್ ಮಷಿನಿಂಗ್ ಸೆಂಟರ್ ತರಬೇತಿಗೆ ವಿದ್ಯಾರ್ಹತೆ ಐಟಿಐ ಆಗಿರಬೇಕು. ಸಿಎನ್ಸಿ ಪ್ರೊಗ್ರಾಮರ್/ಪ್ರೊ-ಇ/ಆಟೋಕ್ಯಾಡ್ ತರಬೇತಿಗೆ ಡಿಪ್ಲೊಮಾ/ಬಿಇ ಆಗಿರಬೇಕು ಹಾಗೂ ಮಿಲ್ಲರ್/ಟರ್ನರ್ ತರಬೇತಿಗೆ ಎಸ್ಎಸ್ಎಲ್ಸಿ ಆಗಿರಬೇಕು. ಅರ್ಜಿ ಸಲ್ಲಿಸಲು ಆಗಸ್ಟ್ 19 ಕಡೆಯ ದಿನವಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ವಯಸ್ಸು, ವಿದ್ಯಾರ್ಹತೆಯ ದಾಖಲಾತಿಗಳು ಹಾಗೂ ವೈಯಕ್ತಿಕ ವಿವರಗಳೊಂದಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. ಸಿಎ 38, ನಿದಿಗೆ ಇಂಡಸ್ಟ್ರಿಯಲ್ ಏರಿಯಾ, ಮಾಚೇನಹಳ್ಳಿ, ಶಿವಮೊಗ್ಗ ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ: 08182-246054, ಮೊ.ಸಂ.9945616114, 9449286543 ನ್ನು ಸಂಪರ್ಕಿಸಬಹುದೆಂದು ಜಿಟಿಟಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ.