ಪ್ರಾಣಿಜನ್ಯ ಆಹಾರಗಳಾದ ಹಾಲು, ಮಾಂಸ, ಮೊಟ್ಟೆ ಮತ್ತು ಅವುಗಳ ಉತ್ಪನ್ನಗಳು ಮೂಲಭೂತವಾಗಿ ಮನುಷ್ಯನಿಗೆ ಬೇಕಾಗುವ ಎಲ್ಲಾ ರೀತಿಂiÀi ಪೋಷಕಾಂಶಗಳನ್ನು ಸುಲಭವಾಗಿ ಜೀರ್ಣವಾಗುವ ರೀತಿಯಲ್ಲಿ ಹೊಂದಿರುವ ಆಹಾರ ಪದಾರ್ಥಗಳಾಗಿದ್ದು, ಮಾನವನ ಆಹಾರ ಸರಪಳಿಯಲ್ಲಿ ಬಹುಮುಖ್ಯ ಪಾತ್ರವಹಿಸಿವೆ. ಇದರಿಂದಾಗಿ ಪ್ರಾಣಿಜನ್ಯ ಆಹಾರ ಉತ್ಪನ್ನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು, ಪ್ರಾಣಿಗಳಿಗೆ ಬೇಕಾಗುವ ಆಹಾರ ಪದಾರ್ಥಗಳ ಉತ್ಪಾದನೆ ಮತ್ತು ಪೂರೈಕೆ ಮಾತ್ರ ಇಳಿಮುಖವಾಗುತ್ತಿದೆ. ಈ ಕಾರಣದಿಂದ ಪ್ರಾಣಿಗಳ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಪ್ರಾಣಿಜನ್ಯ ಆಹಾರ ಉತ್ಪಾದನಾ ವೆಚ್ಚವು ಹೆಚ್ಚಾಗುತ್ತಿದೆ.
ಕೋಳಿಗಳು ಆಹಾರವನ್ನು ಜೀರ್ಣಿಸಿ ಅದರಲ್ಲಿರುವ ಪೋಷಕಾಂಶಗಳನ್ನು ಮಾಂಸ ಅಥವಾ ಮೊಟ್ಟೆಯಾಗಿ ಪರಿವರ್ತಿಸುವ ಅತಿ ಹೆಚ್ಚಿನ ಸಾಮಥ್ರ್ಯವನ್ನು ಹೊಂದಿವೆ. ಕೋಳಿಗಳಿಗೆ 38 ವಿವಿಧ ಬಗೆಯ ಪೋಷಕಾಂಶಗಳ ಅಗತ್ಯವಿದೆ. ಅವುಗಳು ಆವಶ್ಯಕ ಪ್ರಮಾಣದಲ್ಲಿ ಮತ್ತು ಉತ್ತಮ ಗುಣಮಟ್ಟದಲ್ಲಿ ಲಭ್ಯವಾಗಲು ಅನೇಕ ಕಚ್ಚಾ ಅಹಾರ ಪದಾರ್ಥಗಳನ್ನು ನಿಗದಿತ ಪ್ರಮಾದಲ್ಲಿ ಬೆರೆಸಿ ಸಮತೋಲನ ಆಹಾರವನ್ನಾಗಿ ಮಾಡಬೇಕು. ಹೀಗೆ ತಯಾರು ಮಾಡಿದ ಸಮತೋಲನ ಆಹಾರವು ರೈತರ ಆರ್ಥಿಕ ಸ್ಥಿತಿಗೆ ತಕ್ಕುದಾಗಿಯೂ ಇರಬೇಕು. ಇಂದಿನ ದಿನಗಳಲ್ಲಿ ಕೋಳಿ ಆಹಾರವು ಅತ್ಯಂತ ದುಬಾರಿಯಾಗಿರುವುದರಿಮದ ಕೋಳಿ ಸಾಕಣೆಯಿಂದ ಲಾಭಾಂಶ ತೀವ್ರವಾಗಿ ಇಳಿಮುಖವಾಗಿದೆ. ಹೀಗಾಗಿ ಗುಣಮಟ್ಟದ ಕೋಳಿ ಆಹಾರದ ವೆಚ್ಚವನ್ನು ತಗ್ಗಿಸುವುದೂ ಒಂದು ಪ್ರಮುಖವಾದ ನಿರ್ವಹಣೆಯ ಪದ್ಧತಿ.
ಕೋಳಿ ಸಾಕಾಣಿಕೆ ಲಾಭದಾಯಕ ಉದ್ಯಮವಾಗಿದು,್ದ ದಿನಬಳಕೆಯಲ್ಲಿರುವ ಏಕದಳ ಧಾನ್ಯಗಳಾದ ಜೋಳ, ಮುಸುಕಿನ ಜೋಳ ಮುಂತಾದ ಧಾನ್ಯಗಳನ್ನು ಸೇವಿಸಿ ಪೌಷ್ಠಿಕ ಮಾಂಸ ಮತ್ತು ಮೊಟ್ಟೆಗಳನ್ನು ಉತ್ಪಾದನೆ ಮಾಡುವ ಪ್ರಾಣಿಗಳಲ್ಲಿ ಕೋಳಿ ಪ್ರಥಮ ಸ್ಥಾನದಲ್ಲಿದೆ. ವಿಶ್ವದ ಇತರೇ ಪ್ರಾಣಿ ಆಹಾರ ಉತ್ಪಾದನೆಗೆ ಹೋಲಿಸಿದರೆ ಕೋಳಿ ಆಹಾರ ಉತ್ಪಾದನೆಯದೇ ಸಿಂಹಪಾಲು (ಶೇ.37ರಷ್ಟು). ಒಟ್ಟು ಮಾಂಸ ಸೇವನೆಯಲ್ಲಿ, ಕೋಳಿಯ ಮಾಂಸದ್ದೇ ಪ್ರಥಮ ಸ್ಥಾನ. ಕೋಳಿಗಳು ನೇರವಾಗಿ ಮಾನವನ ಆಹಾರದ ಜೊತೆಗೆ ಸ್ಪರ್ಧಿಸುವುದರಿಂದ ಇತರೆ ಪ್ರಾಣಿಗಳಿಗೆ ಹೋಲಿಸಿದರೆ ಕೋಳಿಗಳ ಆಹಾರ ಪದಾರ್ಥಗಳ ಮೇಲಿನ ವೆಚ್ಚವೂ ಹೆಚ್ಚು (ಶೇ.70ರಷ್ಟು). ಈ ಕಾರಣದಿಂದ ಉತ್ಪಾದನ ವೆಚ್ಚವನ್ನು ಕಡಿತಗೊಳಿಸಲು ಕೋಳಿಗಳ ಆಹಾರದ ಮೇಲಿನ ವೆಚ್ಚವನ್ನು ಕಡಿತಗೊಳಿಸುವುದು ಬಹುಮುಖ್ಯವಾಗಿದೆ.
ಕೋಳಿ ಸಾಕಾಣಿಕೆಯಲ್ಲಿ ಮುಖ್ಯವಾಗಿ ಮೂರು ಬಗೆ

  1. ಮಾಂಸದ ಕೋಳಿ ಸಾಕಾಣಿಕೆ
  2. ಮೊಟ್ಟೆ ಕೋಳಿ ಸಾಕಾಣಿಕೆ
  3. ಹಿತ್ತಲಲ್ಲಿ ಕೋಳಿ ಸಾಕಾಣಿಕೆ
    ಇವುಗಳಲ್ಲಿ ಮೊದಲ ಎರಡು ಸಾಕಾಣಿಕಾ ಕ್ರಮಗಳಲ್ಲಿ ಗರಿಷ್ಠ ಉತ್ಪಾದನಾ ಸಾಮಥ್ರ್ಯವುಳ್ಳ ತಳಿಯ ಕೋಳಿಗಳನ್ನೇ ಸಾಕುವುದರಿಂದ ಅವುಗಳ ಆಹಾರವೂ ಸಹ ಅಷ್ಟೇ ಉತ್ತಮ ಗಣಮಟ್ಟದ್ದಾಗಿರಬೇಕಾಗುತ್ತದೆ. ಆದುದರಿಂದ ಸ್ವಾಭಾವಿಕವಾಗಿ ಆಹಾರದ ಬೆಲೆಯೂ ಅಧಿಕವಾಗಿರುತ್ತದೆ. ಇಲ್ಲಿ ಆಹಾರದ ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ಅವಕಾಶ ಕಡಿಮೆ. ಮಾಂಸದ ಕೋಳಿಗಳಿಗೆ ಹೋಲಿಸಿದಲ್ಲಿ ಮೊಟ್ಟೆ ಕೋಳಿಗಳ ಆಹಾರದಲ್ಲಿ ಸ್ವಲ್ಪಮಟ್ಟಿಗೆ ದುಬಾರಿಯಲ್ಲದ ಧಾನ್ಯ ಮತ್ತು ಹಿಂಡಿಗಳ ಬಳಕೆ ಮಾಡಬಹುದಾಗಿದೆ. ಆದರೆ ಹಿತ್ತಲಲ್ಲಿ ಸಾಕುವ ಅಥವಾ ದೇಸಿ ಕೋಳಿಗಳ, ಗಿರಿರಾಜ, ವನರಾಜ ಮುಂತಾದ ಸುಧಾರಿತ ಕೋಳಿಗಳ ಸಾಕಣೆಯಲ್ಲಿ ಆಹಾರದ ವೆಚ್ಚವನ್ನು ಗಣನೀಯವಾಗಿ ಇಳಿಕೆ ಮಾಡಬಹುದು.
    ಆಹಾರ ತಯಾರಿಕಾ ವೆಚ್ಚವನ್ನು ಕಡಿತಗೊಳಿಸಲು ಕೈಗೊಳ್ಳಬೇಕಾದ ಹಲವು ಕ್ರಮಗಳು:
  4. ಆಹಾರ ತಯಾರಿಕೆಯಲ್ಲಿ ಸುಲಭವಾಗಿ/ಕಡಿಮೆ ವೆಚ್ಚದಲ್ಲಿ ದೊರೆಯುವ ಪದಾರ್ಥಗಳ ಬಳಕೆ
  5. ಆಹಾರ ಪದಾರ್ಥಗಳನ್ನು ಕಟಾವಿನ ಸಮಯದಲ್ಲಿ (ಹಂಗಾಮಿನಲ್ಲಿ) ಕಡಿಮೆ ದರದಲ್ಲಿ
    ದೊರೆಯುವುದರಿಂದ ಆ ಸಮಯದಲ್ಲಿ ಖರೀದಿಸಿ ದಾಸ್ತಾನು ಮಾಡಿಟ್ಟುಕೊಳ್ಳುವುದರಿಂದ ಕೋಳಿಗಳ
    ಆಹಾರ ವೆಚ್ಚ ಕಡಿಮೆ ಮಾಡಬಹುದು
  6. ಸಾಂಪ್ರದಾಯಕವಲ್ಲದ ಆಹಾರ ಪದಾರ್ಥಗಳ ಬಳಕೆ
  7. ಮನೆಯಲ್ಲಿ ಉಳಿದ ಅನುಪಯುಕ್ತ ಆಹಾರ ಪದಾರ್ಥಗಳ ಬಳಕೆ
  8. ಬೇಕಾದ ಆಹಾರ ಪದಾರ್ಥಗಳನ್ನು ಸ್ವಂತ ಜಮೀನಿನಲ್ಲಿ ಬೆಳೆಯುವುದು
  9. ಬೆಳವಣಿಗೆ ಮತ್ತು ಉತ್ಪಾದನೆಯ ಸಾಮಥ್ರ್ಯದ ಆಧಾರದ ಮೇಲೆ ಆಹಾರದ ಪೂರೈಕೆ
  10. ಅತೀ ಅವಶ್ಯಕವಿರುವ ಅಮೈನೋ ಆಮ್ಲಗಳ ಪೂರೈಕೆಯ ಮೂಲಕ ಸಸಾರಜನಕದ ಪ್ರಮಾಣವನ್ನು
    ಕಡಿತಗೊಳಿಸುವುದು

ವಾಣಿಜ್ಯ ಕೋಳಿಯ ಸಮತೋಲನ ಆಹಾರವನ್ನು ತಯಾರಿಸಲು ವಿವಿಧ ಬಗೆಯ ಆಹಾರ ಘಟಕಾಂಶಗಳನ್ನು ಆರಿಸಿ ಸಂಸ್ಕರಿಸಿ ಬೆರೆಸಲಾಗುವುದು, ಅವುಗಳು:
 ಶಕ್ತಿದಾಯಕ ಪದಾರ್ಥಗಳು
 ಸಸಾರಜನಕ ಪದಾರ್ಥಗಳು
 ಖನಿಜಾಂಶ ಪದಾರ್ಥಗಳು
 ಜೀವಸತ್ವ ಪದಾರ್ಥಗಳು
 ಆಹಾರ ಸೇರ್ಪಡೆಗಳು

• ಶಕ್ತಿದಾಯಕ ಪದಾರ್ಥಗಳು.
ನಮ್ಮ ರಾಜ್ಯದಲ್ಲಿ ದೊರೆಯುವ ದವಸ ಧಾನ್ಯಗಳಾದ ಮೆಕ್ಕೆಜೋಳ, ಜೋಳ, ಸಜ್ಜೆ, ನುಚ್ಚಕ್ಕಿ, ರಾಗಿ ಮತ್ತು ನವಣೆ ಇತ್ಯಾದಿ.ಉಪಪದಾರ್ಥಗಳಲ್ಲಿ ಅಕ್ಕಿತೌಡು ಮತ್ತು ಎಣ್ಣೆ ತೆಗೆದ ಅಕ್ಕಿತೌಡು ಬಳಸಬಹುದು.
• ಖನಿಜಾಂಶ ಪದಾರ್ಥಗಳು.
ಖನಿಜಾಂಶ ಮೂಲಗಳಲ್ಲಿ ಡೈಕ್ಯಾಲ್ಸಿಯಂ ಫಾಸ್ಫೆಟ್, ಕಪ್ಪೆ ಚಿಪ್ಪಿನ ಪುಡಿ, ಸೀಮೆ ಸುಣ್ಣದ ಪುಡಿ, ಅಡಿಗೆ ಉಪ್ಪು, ಕಬ್ಬಿಣದ ಸಲ್ಫೇಟ್, ಕೋಬಾಲ್ಟ್ ಕ್ಲೋರೈಡ್, ಮ್ಯಾಂಗನೀಸ್ ಸಲ್ಫೇಟ್, ಸತುವಿನ ಸಲ್ಫೇಟ್ ಮತ್ತು ಸೋಡಿಯಂ ಸೆಲನೈಟ್‍ಗಳು ಸೇರುತ್ತವೆ.
• ಸಸಾರಜನಕ ಪದಾರ್ಥಗಳು: ಸಸಾರಜನಕ ಪದಾರ್ಥಗಳಲ್ಲಿ 2 ವಿಧ:

  1. ಪ್ರಾಣಿಜನ್ಯ ಸಸಾರಜನಕ ಪದಾರ್ಥಗಳು
  2. ಸಸ್ಯಜನ್ಯ ಸಸಾರಜನಕ ಪದಾರ್ಥಗಳು
     ಪ್ರಾಣಿಜನ್ಯ ಸಸಾರಜನಕ ಪದಾರ್ಥಗಳು:
    ಮೀನಿನ ಪುಡಿ, ಒಣ ಮೀನು, ರೇಷ್ಮೆಗೂಡಿನ ಸಾರ ತೆಗೆದ ನಿಸ್ಸಾದ ಪುಡಿ ಮತ್ತು ಮಾಂಸದ ಪುಡಿಯನ್ನು ಕೋಳಿ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ.
     ಸಸ್ಯಜನಕ ಸಸಾರಜನಕ ಪದಾರ್ಥಗಳು:
    ಕಡಲೆಕಾಯಿ ಹಿಂಡಿ, ಸಾರ ತೆಗೆದ ಸೊರೆ ಅವರೆ, ಮತ್ತು ಸಾರ ತೆಗೆದ ಸೂರ್ಯಕಾಂತಿ ಹಿಂಡಿ, ಬೀಜಗಳನ್ನು ಕೋಳಿ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ.
  3. ಮೊಟ್ಟೆ ಕೋಳಿ ಆಹಾರ ( ಕೆ.ಜಿ.ಗಳಲ್ಲಿ) ಮರಿ ಕೋಳಿ ಬೆಳೆಯುವ ಕೋಳಿ ಮೊಟ್ಟೆಯಿಡುವ ಕೋಳಿ
    0-8 ವಾರ 9-20 ವಾರ 20-72 ವಾರ
    ಧಾನ್ಯಗಳು(ಮುಸುಕಿನ ಜೋಳ, ಜೋಳ, ಅಕ್ಕಿ ನುಚ್ಚು, ಅಕ್ಕಿತೌಡು) 600 600 600
    ಸೋಯಾ ಹಿಂಡಿ 220 130 130
    ಮೀನು 50 50 50
    ಅಕ್ಕಿತೌಡು (ಎಣ್ಣೆ ರಹಿತ) 110 200 130
    ಕಪ್ಪೆ ಚಿಪ್ಪು – – –
    ಕಾಲ್ಸೈಟ್ ಪೌಡರ್ – – –
    ಖನಿಜ ಮಿಶ್ರಣ 20 20 20
    ಒಟ್ಟು 1000 1000 1000

ಸೂಕ್ಷ್ಮ ಪೋಷಕಾಂಶಗಳು ಮತ್ತು ಆಹಾರ ಸೇರ್ಪಡೆಗಳು:
ಹಸಿರು ಸೊಪ್ಪುಗಳು, ಕೋಳಿಗಳಿಗೆ ಒಳ್ಳೆಯ ಜೀವಸತ್ವ ಮೂಲಗಳು ಮನೆಹಿತ್ತಲಿನಲ್ಲಿ ಸಾಕುವ ಕೋಳಿಗಳು ಸೊಪ್ಪು-ಸೆದೆಗಳನ್ನು ತಿನ್ನುವುದರಿಂದ ಅವುಗಳಲ್ಲಿ ಜೀವಸತ್ವದ ಕೊರತೆ ಕಂಡುಬರುವುದಿಲ್ಲ. ಲೂಸರ್ನ್, ನೆಲಗಡಲೆ ಗಿಡ ಕೋಳಿಗಳ ಆಹಾರಗಳಾಗಿ ಬಳಸಬಹುದು. ಅಂಗಡಿಗಳಲ್ಲಿ ದೊರೆಯುವ ಕೋಳಿಗಳ ಜೀವಸತ್ವಗಳು ಕೋಳಿ ಆಹಾರದಲ್ಲಿ ಬಳಸುವ ಕೆಲವು ಸಾಮಾನ್ಯ ಜೀವಸತ್ವ ಪೂರಕ ಪದಾರ್ಥಗಳು ಈ ಕೆಳಗಿನಂತಿವೆ;
ಜೀವಸತ್ವಗಳು (ಗ್ರಾಂ) 120 120 120
ಮೆಥಿಯೋನಿನ್(ಗ್ರಾಂ) 300 200 500
ಉಪ್ಪು ( ಕಿ.ಗ್ರಾಂ) 1.5 1.5 1.5
ಟಾಕ್ಸಿನ್ ಬೈಂಡರ್ + + +
ಅಯಂಟಿ ಬ್ಯಾಕ್ಟೀರಿಂiÀiಲ್ + + +

  1. ಮಾಂಸದ ಕೋಳಿ ಆಹಾರ (ಕೆ.ಜಿ.ಗಳಲ್ಲಿ)
    ಪ್ರಾರಂಭಿಕ
    ಪೂರ್ವಆಹಾರ ಪ್ರಾರಂಭಿಕ
    ಆಹಾರ ಮುಕ್ತಾಯ
    ಆಹಾರ
    ಧಾನ್ಯಗಳು(ಮುಸುಕಿನ ಜೋಳ, ಜೋಳ, ಅಕ್ಕಿ ನುಚ್ಚು, ಅಕ್ಕಿತೌಡು) 569 611 664
    ಸೋಯಾ ಹಿಂಡಿ 380 340 280
    ಡೈಕ್ಯಾಲ್ಸಿಯಂ ಫಾಸ್ಫೆಟ್, 18 16 13
    ಕಾಲ್ಸೈಟ್ ಪೌಡರ್ 13 13 13
    ಎಣ್ಣೆ/ ಕೊಬ್ಬು 20 20 20
    ಒಟ್ಟು 1000 1000 1000

ಆಹಾರ ಸೇರ್ಪಡೆಗಳು.

ಉಪ್ಪು ಗ್ರಾಂ 3.0 3.0 3.0
ಮೆಥಿಯೋನಿನ್‍ಗ್ರಾಂ 1.8 1.4+ 0.7
ಜೀವಸತ್ವಗಳು ಗ್ರಾಂ + + +
ಕೋಲಿನ್ ಕ್ಲೋರೈಡ್ ಕಿ.ಗ್ರಾಂ 1.0 0.8 0.7
ಅಲ್ಪ ಪ್ರಮಾಣದಲ್ಲಿ ಬೇಕಾಗುವ ಖನಿಜಾಂಶಗಳು + + +
ಕಾಕ್ಸೀಡಿಯಾ ನಿರೋಧಕಗಳು + + +
ಟಾಕ್ಸಿನ್ ಬೈಂಡರ್ + + +
ಅಯಂಟಿ ಬ್ಯಾಕ್ಟೀರಿಯಾಗಳು + + +

ಮೇಲೆ ವಿವರಿಸಿದ ಮಾದರಿ ಸಮತೋಲನ ಆಹಾರವನ್ನು ಇಂದಿನ ಮಾರುಕಟ್ಟೆ ಬೆಲೆಯಲ್ಲಿ ತಯಾರಿಸಿದರೆ ತಗಲುವ ವೆಚ್ಚ ಎಷ್ಟಾಗಬಹುದು ಎಂದು ಲೆಕ್ಕ ಹಾಕಬಹುದು. ಸಾಮಾನ್ಯವಾಗಿ ಉಪಯೊಗಿಸುವ ಕೋಳಿ ಆಹಾರ ಸಾಮಗ್ರಿಗಳ ಇಂದಿನ ಮಾರುಕಟ್ಟೆ ಬೆಲೆ ಈ ಕೆಳಗಿನಂತೆ ಇದೆ.

ಕ್ರ.ಸಂ. ಕಚ್ಛಾ ಆಹಾರ ಸಾಮಗ್ರಿ ಬೆಲೆ, ಪ್ರತಿ ಕ್ವಿಂಟಾಲ್ ಗೆ
1 ಜೋಳ 1500
2 ಸೋಯಾ ಅವರೆ ಹಿಂಡಿ 4000
3 ಗೋಧಿ ಬೂಸಾ 1900
4 ಅಕ್ಕಿ ನುಚ್ಚು 1400
5 ಸೂರ್ಯಕಾಂತಿ ಹಿಂಡಿ 3400
6 ಹತ್ತಿಕಾಳು ಹಿಂಡಿ 2500
7 ಬೇಳೆಕಾಳಿನ ನುಚ್ಚು 1600
8 ಸೇಂಗಾ ಹಿಂಡಿ 4000
9 ಅಕ್ಕಿ ತೌಡು 1400
10 ಅಕ್ಕಿ ಪಾಲಿಷ್ 1800
11 ಖನಿಜ ಮಿಶ್ರಣ 5000
12 ಉಪ್ಪು 500

ಈ ಬೆಲೆಯನ್ನು ಬಳಸಿಕೊಂಡು ಮಾದರಿ ಕೋಳಿ ಆಹಾರವನ್ನು ತಯಾರಿಸಿದಲ್ಲಿ ಅದರ ಬೆಲೆ ಎಷ್ಟಾಗಬಹುದು?

ಆಹಾರ ಪದಾರ್ಥಗಳು ಮಾಂಸದ ಕೋಳಿ ಮೊಟ್ಟೆ ಕೋಳಿ
ಮಾದರಿ-1 ಮಾದರಿ-2 ಮಾದರಿ-3 ಮಾದರಿ-4 ಮಾದರಿ-5
ಮೆಕ್ಕೆ ಜೋಳ 45 40 45 30 25
ಜೋಳ – – – – 5
ಅಕ್ಕಿ – – – 15 10
ಸೋಯಾ ಹಿಂಡಿ 35 15 30 10 5
ಸೇಂಗಾ ಹಿಂಡಿ – – – – 5
ಸೂರ್ಯಕಾಂತಿ ಹಿಂಡಿ – 20 – 20 10
ಹತ್ತಿಕಾಳಿನ ಹಿಂಡಿ – – – – 10
ಗೋಧಿ ಬೂಸಾ – – – – –
ಅಕ್ಕಿ ಬೂಸಾ 17.2 15 20 15 10
ಬೇಳೆ ಕಾಳಿನ ನುಚ್ಚು – – – 5 10
ಅಕ್ಕಿ ಪಾಲಿಷ್ – 7.2 – – 5
ಖನಿಜ ಮಿಶ್ರಣ 1.7 1.7 2 2 2
ಕಪ್ಪೆ ಚಿಪ್ಪು/ ಸುಣ್ಣ – – 2 2 2
ಜೀವಸತ್ವ ಮಿಶ್ರಣ 0.3 0.3 0.2 0.2 0.2
ಲೈಸಿನ್+ಮೆಥಿಯೋನಿನ್ 0.3 0.3 0.1 0.1 0.1
ಕಾಕ್ಸಿಡಿಯೋಸ್ಟಾಟ್ – – 0.1 0.1 0.1
ಟಾಕ್ಸಿನ್ ಬೈಂಡರ್ – – 0.1 0.1 0.1
ಉಪ್ಪು 0.5 0.5 0.5 0.5 0.5
ಒಟ್ಟು 100 100 100 100 100
ಬೆಲೆ, ರೂ/ ಕೆ.ಜಿ. 24.71 23.75 23.39 22.14 21.54

ಕೋಳಿ ಆಹಾರದ ವೆಚ್ಚವನ್ನು ತಗ್ಗಿಸಲು ಈ ಕೆಳಗಿನ ಕೆಲವು ಸಲಹೆಗಳನ್ನು ಗಮನಿಸುವುದು:

  1. ಕೋಳಿ ಆಹಾರವನ್ನು ತಾವೇ ತಯಾರಿಸುವುದು
  2. ಆದಷ್ಟು ಸ್ಥಾನೀಯವಾಗಿ ದೊರೆಯುವ ಆಹಾರ ಪದಾರ್ಥಗಳನ್ನೇ ಬಳಸುವುದು. ಉದಾ; ಜೋಳ, ಅಕ್ಕಿ, ರಾಗಿ, ನುಚ್ಚು, ಇತ್ಯಾದಿ
  3. ಹೆಚ್ಚು ಆಹಾರ ಪದಾರ್ಥಗಳನ್ನು ಆಹಾರ ಸೂತ್ರದಲ್ಲಿ ಬಳಸುವುದು. ಉದಾ; 2-3 ಬಗೆಯ ಧಾನ್ಯ, ಹಿಂಡಿ, ತೌಡು, ನುಚ್ಚು ಬಳಸುವುದು
  4. ಖನಿಜ ಮಿಶ್ರಣ, ಜೀವಸತ್ವ ಮಿಶ್ರಣ ಮತ್ತು ಇತರ ಆಹಾರ ಸೇರ್ಪಡೆಗಳನ್ನು ಕೊಂಡುಕೊಳ್ಳುವಾಗ ಬೆಲೆಯ ಜೊತೆಗೆ ಗುಣಮಟ್ಟವನ್ನೂ ಸಹ ಗಮನಿಸಬೇಕು
  5. ಆಹಾರ ಪದಾರ್ಥಗಳು ಮಾರುಕಟ್ಟೆಗೆ ಬರುವ ಹಂಗಾಮಿನಲ್ಲಿ ದರಗಳು ಕಡಿಮೆ ಇದ್ದು ಪದಾರ್ಥಗಳ ಗುಣಮಟ್ಟವು ಅಧಿಕವಾಗಿರುವುದರಿಂದ ಆ ಸಮಯದಲ್ಲಿ ಸಗಟು ಬೆಲೆಯಲ್ಲಿ ಖರೀದಿಸಿ ಸರಿಯಾಗಿ ಕೂಡಿಟ್ಟುಕೊಳ್ಳುವುದು
  6. ಆಹಾರ ಕೂಡಿಡುವ ಗೋದಾಮು ಸ್ವಚ್ಛವಾಗಿ, ನೀರಿನ ಪಸೆ ಇರದಂತೆ, ಇಲಿ-ಹೆಗ್ಗಣಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು.
  7. ಕೇವಲ 3-4 ವಾರಗಳಿಗಾಗುವಷ್ಟು ಕೋಳಿ ಆಹಾರವನ್ನು ಮಾತ್ರ ಒಂದು ಬಾರಿಗೆ ತಯಾರಿಸಿ ಇಟ್ಟುಕೊಳ್ಳಬೇಕು
  8. ಉತ್ತಮ ಸಮತೋಲನ ಕೋಳಿ ಆಹಾರವನ್ನು ತಜ್ಞರ ಸಲಹೆ ಪಡೆದು ತಯಾರಿಸುವುದು ಒಳ್ಳೆಯದು

ಡಾ. ನಾಗಭೂಷಣ, ವಿ.

ಪ್ರಾಣಿ ಆಹಾರ ಶಾಸ್ತ್ರ ವಿಭಾಗ, ಪಶು ವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

error: Content is protected !!