ಕೊರೋನಾ (ಕೋವಿಡ್-19) ವೈರಾಣು ಸಾಂಕ್ರಾಮಿಕ ರೋಗವು ಹರಡದಂತೆ ದೇಶದಾದ್ಯಂತ ಬಂದ್ ಘೋಷಿಸಲಾಗಿದೆ. ಇದರಿಂದ ದೇಶದ ಎಲ್ಲಾ ಕ್ಷೇತ್ರಗಳು ನಷ್ಟ ಅನುಭವಿಸುತ್ತಿವೆ. ಕೃಷಿ ಕ್ಷೇತ್ರದಲ್ಲಿಯೂ ಸಹ ರೈತ ಸಮುದಾಯವು ಸಹ ಸಂಕಷ್ಟಕ್ಕೆ ಸಿಲುಕಿ ನಷ್ಟವನ್ನು ಅನುಭವಿಸುತ್ತಿದೆ. ಒಂದು ಕಡೆ ರೈತರು ಬೆಳೆದ ಬೆಳೆÀಗಳು ಮಾರಾಟವಾಗುತ್ತಿಲ್ಲ, ಮತ್ತೊಂದು ಕಡೆ ಗ್ರಾಹಕರಿಗೆ ಆಹಾರ ಸಾಮಾಗ್ರಿಗಳು ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಗ್ರಾಮೀಣ ಪ್ರದೇಶ ಹಾಗೂ ನಗರ ವಾಸಿಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಇದನ್ನು ಮನಗಂಡು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಬಂದ್ ನಡುವೆಯೂ ರೈತರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗದಂತೆ ಕೆಲವು ಕ್ಷೇತ್ರಗಳಿಗೆ ರಿಯಾಯಿತಿಯನ್ನು ನೀಡಿವೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೊಪನೆ ಇಲಾಖೆ ಹಾಗೂ ಇನ್ನೂ ಅನೇಕ ಇಲಾಖೆಗಳ ಮುಖಾಂತರ ರೈತರು ಬೆಳೆದ ಬೆಳೆಗಳು ಗ್ರಾಹಕರಿಗೆ ತಲುಪಿಸುವಲ್ಲಿ ವಿವಿಧ ಕ್ರಮಗಳನ್ನು ಕ್ರಮಕೈಗೊಂಡಿದೆ. ಜಿಲ್ಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರವೂ ಕೂಡಾ ಈ ನಿಟ್ಟಿನಲ್ಲಿ ರೈತ ಸಮುದಾಯಕ್ಕೆ ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನೆಗೆ ಸಂಬಂಧಿಸಿದಂತೆ ರೈತರಿಗೆ ತಾಂತ್ರಿಕ ಸಲಹೆಯನ್ನು ಕೊಡುವುದರ ಜೊತೆಗೆ ಕೊರೊನಾ (ಕೋವಿಡ್-19) ವೈರಾಣು ಸಾಂಕ್ರಾಮಿಕ ರೋಗ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ರೈತ ಸಮುದಾಯಕ್ಕೆ ದೂರವಾಣಿ, ವಾಟ್ಸ್ಆ್ಯಪ್, ಎಂ-ಕಿಸಾನ್ ಹಾಗೂ ವೃತ್ತ ಪತ್ರಿಕೆಗಳ ಮುಖಾಂತರ ಮಾಹಿತಿಯನ್ನು ನೀಡಲಾಗುತ್ತಿದೆ.
ಕೇಂದ್ರದ ಮುಖ್ಯಸ್ಥರು ಕೃಷಿಕರಿಗೆ ಸಲಹೆಯಲ್ಲಿ ತಿಳಿಸುವುದೇನೆಂದರೆ, ರೈತರು ಮತ್ತು ಕೃಷಿ ಕಾರ್ಮಿಕರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಅಂದರೆ ಬಿತ್ತನೆ ಸಮಯದಲ್ಲಿ, ಕಳೆ ತೆಗೆಯುವಾಗ, ಕಟಾವು ಮಾಡುವಾಗ, ಒಕ್ಕಣೆ ಹಾಗೂ ದಾಸ್ತಾನು ಮಾಡುವ ಸಮಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಂದರೆ ಒಬ್ಬರಿಂದ ಮತ್ತೊಬ್ಬರಿಗೆ 3-4 ಅಡಿ ಅಂತರದಲ್ಲಿದ್ದು ಕೆಲಸವನ್ನು ನಿರ್ವಹಿಸುವುದು, ಆಗಾಗ್ಗೆ ಸಾಬೂನಿನಿಂದ ಕೈತೊಳೆಯುವುದು, ಪ್ರತಿಯೊಬ್ಬರೂ ಮುಖಗವಸವನ್ನು ಕಡ್ಡಾಯವಾಗಿ ಧರಿಸುವುದು, ಅಲ್ಲದೆ ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನ, ತರಕಾರಿ, ಹಣ್ಣುಗಳನ್ನು ತುಂಬುವ ಗೋಣಿಚೀಲ ಮತ್ತು ಉಪಯೋಗಿಸುವ ವಸ್ತುಗಳಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರವು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ ಕಲ್ಲಂಗಡಿ ಮತ್ತು ಅನಾನಸ್ ಹಣ್ಣುಗಳನ್ನು ಖರೀದಿಸುತ್ತಿರುವ ಗ್ರಾಹಕರುನ್ನು ಸೋಂಕು ನಿವಾರಕ ರಾಸಾಯನಿಕಗಳಿಂದ ಶುದ್ಧಗೊಳಿಸಿಕೊಂಡು ಸಂಗ್ರಹಣೆ ಮಾಡಿ, ಮಾರಾಟ ಮಾಡುವುದರಿಂದ ಕೊರೋನಾ ವೈರಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಗಟ್ಟಬಹುದು ಎನ್ನುತ್ತಾರೆ.
ಕೃಷಿ ಕುಟುಂಬದ ಪ್ರತಿಯೊಬ್ಬರೂ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಅನೇಕ ಕಾಯಿಲೆಗಳು ಬರದಂತೆ ತಡೆಗಟ್ಟಬಹುದೆಂದೂ ಮಾಹಿತಿ ನೀಡುವ ವಿಜ್ಞಾನಿಗಳು, ಶುಂಠಿ, ಬೆಳ್ಳುಳ್ಳಿ, ವಿಟಮಿನ್ ‘ಸಿ’ ಅಂಶ ಇರುವಂತ ನಿಂಬೆ, ಕಿತ್ತಳೆ ಹಣ್ಣು, ಕಿವಿ ಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಸಾಮಥ್ರ್ಯ ಹೆಚ್ಚುವುದು. ಅಲ್ಲದೆ, ಕೊರೋನಾದಂತಹ ವೈರಾಣು ಮತ್ತು ಇನ್ನು ಅನೇಕ ರೋಗಾಣುಗಳನ್ನು ಬರದಂತೆ ತಡೆಗಟ್ಟಲು ಇದು ಸಹಕಾರಿಯಾಗುತ್ತದೆ ಎಂದು ತಮ್ಮ ಸಲಹೆಯಲ್ಲಿ ತಿಳಿಸುತ್ತಾರೆ.
ಮುಂದುವರೆದು, ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ನೀಡುವುದರ ಜೊತೆಗೆ ಲಾಕ್ ಡೌನ್ ಸಮಯದಲ್ಲಿ ರೈತರು ಬೆಳೆದ ಉತ್ಪನ್ನಗಳು ದಲ್ಲಾಳಿಗಳ ಸಹಾಯವಿಲ್ಲದೆ ನೇರ ಮಾರಾಟವಾಗಲೂ ಸಹ ರೈತರಿಗೆ ದೂರವಾಣಿ, ವಾಟ್ಸಪ್ ಮುಖಾಂತರ ಮಾರುಕಟ್ಟೆಯ ಬಗ್ಗೆ ಮಾಹಿತಿಯನ್ನು ರವಾನಿಸಿ, ತೋಟಗಾರಿಕೆ ಇಲಾಖೆಯ ಹಾಪ್ಕಾಮ್ಸ್, ರೈತ ಉತ್ಪಾದಕರ ಕಂಪನಿಗಳ ಮುಖಾಂತರ ರೈತರು ಬೆಳೆದ ಉತ್ಪನ್ನಗಳನ್ನು ರಿಟೇಲರ್, ಹೋಲ್ಸೇಲ್ ಡೀಲರ್ಸ್ ಹಾಗೂ ನೇರವಾಗಿ ಗ್ರಾಹಕರ ಮನೆ ಮನೆಗೆ ಒದಗಿಸುವ ಹಾಗೂ ಸ್ಥಳೀಯವಾಗಿ ಹಣ್ಣು, ತರಕಾರಿ, ಹೂವು ಮಾರಾಟದ ವ್ಯವಸ್ಥೆ ಮಾರಾಟ ಮಾಡುವ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದೆ. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಬಿ.ಸಿ.ಹನುಮಂತಸ್ವಾಮಿ ಮತ್ತು ಕೇಂದ್ರದ ಇತರೆ ವಿಜ್ಞಾನಿಗಳು ರೈತ ಸಮುದಾಯಕ್ಕೆ ಬೆನ್ನೆಲುಬಾಗಿ ಸದಾ ಸಿದ್ದವಿರುವುದಾಗಿ ಪ್ರಕಟಣೆಗೆ ತಿಳಿಸಿರುತ್ತಾರೆ.