ಶಿವಮೊಗ್ಗ : ಜೂನ್ 21 : ಎಲ್ಲಾ ಕುಟುಂಬಗಳನ್ನು ವಿಶ್ವದ ಜೊತೆಗೆ ಜೋಡಿಸಿದೆ ಯೋಗ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಮಹಾನಗರಪಾಲಿಕೆ, ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಆಯುರ್ವೇದ ಮಹಾವಿದ್ಯಾಲಯಗಳ ಸಹಯೋಗದೊಂದಿಗೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳುವ, ಅರಿವನ್ನು ವಿಸ್ತರಿಸುವ ಅದ್ವಿತೀಯ ಶಕ್ತಿ ಸಾಮಥ್ರ್ಯ ಯೋಗಕ್ಕಿದೆ ಎಂದವರು ನುಡಿದರು.
ಜಾತಿ, ಮತ, ಭಾಷೆ ಬಣ್ಣಗಳನ್ನು ಮೀರಿದ ಉದಾತ್ತ ಚಿಂತನೆ ಹೊಂದಿರುವ ಯೋಗದಿಂದಾಗಿ ಭಾರತೀಯ ಸಂಸ್ಕøತಿ ಇಲ್ಲಿನ ಪರಂಪರೆ ಜಗತ್ತಿನ ಕೇಂದ್ರಬಿಂದುವಿನಂತೆ ಗುರುತಿಸಲ್ಪಡುತ್ತಿದೆ. ಯೋಗ ಇಂದು ವಿಶ್ವದೆಲ್ಲೆಡೆ ಹರಡಿದೆ. ಅದನ್ನು ಅನುಸರಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ವೈಯಕ್ತಿಕವಾಗಿ, ಶಾರೀರಿಕವಾಗಿ, ಮಾನಸಿಕವಾಗಿ ಬಲಿಷ್ಠವಾದಾಗ ಸಹಜವಾಗಿ ದೇಶವೂ ಬಲಿಷ್ಠವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ ಅವರು ಮಾತನಾಡಿ, ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಭಾರತಕ್ಕಿದೆ. ಅದು ನಮ್ಮ ಹಿರಿಮೆ. ವ್ಯಕ್ತಿಯು ಸದಾ ಲವಲವಿಕೆಯಿಂದಿರಲು ಹಾಗೂ ಕ್ರಿಯಾಶೀಲನಾಗಿರಲು ಯೋಗ ಸಹಕಾರಿಯಾಗಿದೆ ಎಂದರು.
ಯೋಗವನ್ನು ವೈದ್ಯಕೀಯ ಸೇವೆಗಳೊಂದಿಗೆ ಸೇರಿಸಬೇಕಾದ ಅಗತ್ಯವಿದೆ ಎಂದ ಅವರು, ಯೋಗವು ವಿಶ್ವದ ಮೂಲೆ-ಮೂಲೆಗೆ ತಲುಪುವಂತಾಗಬೇಕು. ದೈನಂದಿನ ಕೆಲಸದ ಒತ್ತಡದಿಂದ ಮುಕ್ತರಾಗಿ ಚಟುವಟಿಕೆಯಿಂದಿರಲು, ಶಾಂತಿ-ಸುವ್ಯವಸ್ಥೆ ಕಂಡುಕೊಳ್ಳಲು ಯೋಗ ಅವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಮಾತನಾಡಿ, ವೈದ್ಯಶಕ್ತಿಯನ್ನು ಹೊಂದಿರುವ ಯೋಗ, ಇಲ್ಲಿನ ಸಾಂಸ್ಕøತಿಕ, ವೈದ್ಯಕೀಯ ಪರಂಪರೆಯನ್ನು ಮುಂದುವರೆಸುವ, ಜಗತ್ತಿಗೆ ಅದನ್ನು ಪರಿಚಯಿಸುವ, ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಅಗತ್ಯವಿದೆ ಎಂದರು.
ಸ್ವಾಸ್ಥ್ಯ, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪ್ರಧಾನ ಪಾತ್ರ ಹೊಂದಿರುವ ಯೋಗ, ಜಾತಿ ಮತ-ಭಾಷೆಗಳ ಎಲ್ಲೆ ಮೀರಿ ವಿಶ್ವಪಥದ ಪರಿಕಲ್ಪನೆ ಹೊಂದಿದೆ. ಯೋಗಾಭ್ಯಾಸ ನಿರತರು ಸದಾ ಸ್ನೇಹಮಯಿ, ಸಾಮರಸ್ಯದ ಮನೋಭಾವ ಹೊಂದಿರುತ್ತಾರೆ. ಅಲ್ಲದೇ ಶಾಂತಿ ಸ್ವಭಾವ, ಉತ್ತಮ ಆರೋಗ್ಯ ಉಳ್ಳವರಾಗಿರುತ್ತಾರೆ ಎಂದವರು ನುಡಿದರು.
ಕಾರ್ಯಕ್ರಮಕ್ಕೂ ಮೊದಲು ಕೆ.ಎಸ್.ಆರ್.ಪಿ. ಪೊಲೀಸ್ ಹಾಗೂ ಸ್ಥಳೀಯ ಯೋಗ ಸಂಸ್ಥೆಗಳ ಯೋಗ ಕಲಿಕಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಯೋಗಪ್ರದರ್ಶನ ಕಾರ್ಯಕ್ರಮದಲ್ಲಿದ್ದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಯೋಗನಡಿಗೆ ಆಕರ್ಷಕ ಪಥಸಂಚಲನ ಏರ್ಪಡಿಸಲಾಗಿತ್ತು. ಈ ಪಥಸಂಚಲನವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂತಿಮವಾಗಿ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸಂಪನ್ನಗೊಂಡಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ||ರಂಗಸ್ವಾಮಿ, ಕ್ರೀಡಾಧಿಕಾರಿ ರಮೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಹರ್ಷಪುತ್ರಾಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.

error: Content is protected !!