ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದು ಖಂಡನೀಯ ಎಂದು ಕೆಪಿಸಿಸಿ ಸದಸ್ಯ ವೈಎಚ್ ನಾಗರಾಜ್ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರ ಅಡಗಿರುವುದು ಸ್ಪಷ್ಟವಾಗಿದೆ. ವಿರೋಧ ಪಕ್ಷಗಳನ್ನು ಬಗ್ಗು ಬಡಿಯುವ, ದ್ವೇಷ ಸಾಧಿಸುವ ಇಂತಹ ಕೆಲಸಗಳು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ.
ದೇಶದ ವಿರೋಧ ಪಕ್ಷದ ನಾಯಕರೊಬ್ಬರನ್ನು ವಜಾ ಮಾಡಿರುವ ಕ್ರಮವನ್ನು ಇಡೀ ವಿಶ್ವವೇ ನೋಡುತ್ತಿದೆ. ರಾಹುಲ್20 24ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂಬ ದೂರದ ದುರಾಲೋಚನೆಯೂ ಅಡಗಿದೆ ಎಂದರು.
ಇಂದು ಇಡೀ ದೇಶ ಆತಂಕ, ತಲ್ಲಣದಲ್ಲಿದೆ ಉದ್ಯೋಗಗಳು ನಶಿಸಿ ಹೋಗುತ್ತಿವೆ, ಬೆಲೆ ಏರಿಕೆಯಿಂದ ಬಡವರು ತತ್ತರಿಸಿ ಹೋಗಿದ್ದಾರೆ, ಒಂದು ಸಣ್ಣ ಕಾರಣಕ್ಕೆ ಅನರ್ಹ ಗೊಳಿಸುವುದೇ ಆದರೆ ಸಂಸತ್ತಿನಲ್ಲಿ ಇಂದು ಬಹು ಪಾಲು ಸಂಸದರು ಅನರ್ಹ ಗೊಳ್ಳಬೇಕಿತ್ತು.
ಅಧರ್ಮ, ಅನ್ಯಾಯ, ಅನೀತಿ, ಅಕ್ರಮ, ಆಸೆ, ಅಹಂಕಾರ, ಅತಿರೇಕ, ಅದ್ವಾನ , ಅಶಿಸ್ತುಗಳೆ ಬಿಜೆಪಿಯ ತತ್ವ ಸಿದ್ಧಾಂತಗಳಾಗಿವೆ. ಪ್ರಜಾಪ್ರಭುತ್ವವನ್ನು ಕಸಿದುಕೊಂಡಿರುವ ಬಿಜೆಪಿಯ ವರಿಷ್ಠರಿಗೆ ಬಡವರ ವೋಟನ್ನು ಕಸಿದುಕೊಳ್ಳುವುದು ಯಾವ ಲೆಕ್ಕ? ಉಸಿರುಗಟ್ಟುತ್ತಿರವ ಪ್ರಜಾಪ್ರಭುತ್ವಕ್ಕೆ ಆಮ್ಲಜನಕ ನೀಡಿ ಬದುಕಿಸಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಎಂದಿದ್ದಾರೆ.

error: Content is protected !!