ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ವಿದ್ಯುನ್ಮಾನÀ ಇಲಾಖೆ ಆಧುನಿಕ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಕರ್ನಾಟಕ ಒನ್ ಕಾರ್ಯಾರಂಭ ಮಾಡಿದೆ ಎಂದು ಸಾಗರದ ಪ್ರಭಾರ ಉಪವಿಭಾಗಾಧಿಕಾರಿ ಮಲ್ಲೇಶ್ ಬಿ ಪೂಜಾರ ಹೇಳಿದರು.
ಸಾಗರದ ಕೋರ್ಟ್ ರಸ್ತೆಯಲ್ಲಿ ಕರ್ನಾಟಕ ಒನ್ ಸೇವಾಕೇಂದ್ರ ಕಾರ್ಯಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡುತ್ತಿದ್ದರು,
ಸರ್ಕರ ಈ ಯೋಜನೆಯಡಿಯಲ್ಲಿ 750ಕ್ಕೂ ಹೆಚ್ಚಿನ ಸೇವೆಯನ್ನು ನೀಡುತ್ತವೆ, ಹಂತ ಹಂತವಾಗಿ ಅವುಗಳನ್ನು ಕಾರ್ಯಾರೂಪಕ್ಕೆ ತರಲಾಗುತ್ತದೆ, ಸಾಗರ ನಗರ ಕೇಂದ್ರೀತವಾಗಿರುವ ಸೇವಾ ಯೋಜನೆಯನ್ನು ಜನತೆ ಸಂಪೂರ್ಣವಾಗಿ ಬಳಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಒನ್ ಸೇವಾ ಕೇಂದ್ರದ ನಿರ್ವಾಹಕ ಆನಂದ್ ಕಲ್ಯಾಣಿ ಮತ್ತು ಸಿಬ್ಬಂದಿಗಳಾದ ಚಂದ್ರಕಲಾ, ಸುಶ್ಮಿತಾ, ಸಹನಾ, ಭಾಗ್ಯ, ಉಸ್ಥಿತರಿದ್ದರು.
ಪೋಟೋ: ಸಾಗರದ ಕೋರ್ಟ್ ರಸ್ತೆಯಲ್ಲಿ ಕರ್ನಾಟಕ ಒನ್ಸೇವಾ ಕೇಂದ್ರಕ್ಕೆ ಸಾಗರದ ಪ್ರಭಾರ ಉಪವಿಭಾಗಾಧಿಕಾರಿ ಮಲ್ಲೇಶ್ ಬಿ ಪೂಜಾರ ಚಾಲನೆ ನೀಡಿದರು, ಕೇಂದ್ರದ ನಿರ್ವಾಹಕ ಆನಂದ್ ಕಲ್ಯಾಣಿ ಇತರರು ಉಪಸ್ಥಿತರಿದ್ದರು.