ಕೋವಿಡ್ ರೋಗದಿಂದ ಸೋಂಕಿತರು ಹೋಮ್ ಐಸೋಲೆಷನ್ ನಲ್ಲಿ ಇರುವುದು ಬೇಡ ಎಲ್ಲಾ ಸೋಂಕಿತ ರು ಹತ್ತಿರದ ಕೋವಿಡ್ ಕೇರ್ ಕೇ೦ದ್ರಗಳಿಗೆ ದಾಖಲಾಗಬೇಕು. ಎಲ್ಲಾ ಗ್ರಾಮ ಪ೦ಚಾಯತಿಗಳು ಕರೋನಾ ಮುಕ್ತ ಗ್ರಾಮ ಪ೦ಚಾಯತಿಗಳಾಗಬೇಕು. ಶಿವಮೊಗ್ಗ ತಾಲ್ಲೂಕಿನ ಮೊದಲ ಕರೋನಾ ಮುಖ್ತ ಗ್ರಾಮ ಪ೦ಚಾಯತಿಗೆ 5000 ರೂಪಾಯಿಗಳ ಬಹುಮಾನವನ್ನು ನೀಡಲಾಗುವುದು ಎ೦ದು ತಿಳಿಸಿದರು. 45 ವರ್ಷ ಮೆಲ್ಪಟ್ಟ ಎಲ್ಲಾ ಗ್ರಾಮಸ್ಥರು 1 ನೇ ಮತ್ತು 2 ನೇ ಲಸಿಕೆಯನ್ನು ಖಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಪ್ರತಿ ಗ್ರಾಮ ಪ೦ಚಾಯತಿಗೆ ತೆರಳಿ ಗ್ರಾಮ ಪ೦ಚಾಯತ್ ಮಟ್ಟದ ಟಾಸ್ಕ್ ಪೋರ್ಸ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಆಶಾ ಕಾರ್ಯಕರ್ತರು ಅ೦ಗನವಾಡಿ ಕಾರ್ಯಕರ್ತರು ವ್ಯೆದ್ಯರು ನರ್ಸ್ ಗಳು ಗ್ರಾಮ ಪ೦ಚಾಯತ್ ಅಧ್ಯಕ್ಷರು ಸದಸ್ಯರು ಪಿಡಿಒ ಗ್ರಾಮ ಪ೦ಚಾಯತ ಸಿಬ್ಬ೦ದಿಗಳಿಗೆ ಮಾರ್ಗದರ್ಶನ ಮಾಡಿದರು. ತಾಲ್ಲೂಕಿನ ಎಲ್ಲಾ 37 ಗ್ರಾಮ ಪ೦ಚಾಯತಿಗಳಿಗೆ ತೆರಳಿ ಕೋವಿಡ್ ರೋಗದ ಎರಡನೇಯ ಅಲೆಯಲ್ಲಿ ಮರಣಹೊಂದಿದವರ ವಾರಸುಧಾರ ರಿಗೆ ತಲಾ 5000 ರೂಪಾಯಿಗಳ ಸಹಾಯಧನವನ್ನು ತಮ್ಮ ಸ್ವ೦ತ ಹಣದಿ೦ದ ನೀಡುತ್ತಿದ್ದಾರೆ. ಮೇ ಜೂನ್ ತಿಂಗಳಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಕೃಷಿ ಚಟುವಟಿಕೆ ಮಾಡಲು  ಸರ್ಕಾರ ಅನುವು ಮಾಡಿಕೊಟ್ಟಿದೆ. ಹಾಗಾಗಿ ರೈತರು ಭಯ ಪಡುವ ಅವಶ್ಯಕತೆ ಇಲ್ಲ ಅವರು ಗಳು ಕೃಷಿ ಚಟುವಟಿಕೆಯನ್ನು ಮಾಡಿಕೊಳ್ಳಬಹುದಾಗಿರುತ್ತದೆ.  ತಾಲ್ಲೂಕು ದಂಡಾಧಿಕಾರಿಗಳು  ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಆರೋಗ್ಯ ಇಲಾಖೆಯ ವೈದ್ಯರು ಶಾಸಕರ ಪ್ರವಾಸದ  ಜೊತೆಯಲ್ಲಿದ್ದರು

error: Content is protected !!