ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿದ್ದು 1904ರಲ್ಲಿ. ಇಂದು 116ನೇ ಜನ್ಮದಿನೋತ್ಸವ, ಮಲೆನಾಡಿನ ರಮ್ಯತೆ, ಪ್ರಾಕೃತಿಕ ವೈಭವ, ಇಲ್ಲಿಯ ಬದುಕು, ಸಾಮಾಜಿಕ ಚಿಂತನೆಗಳನ್ನು ಕೂಡ ತಮ್ಮ ಕಥೆ, ಕಾವ್ಯ, ಕವನ, ನಾಟಕಗಳಲ್ಲಿ ಪರಿಚಯಿಸಿದ ಕುವೆಂಪು ಅವರು ವಿಶ್ವಮಾನವ ಸಂದೇಶ ಸಾರಿದರು.
ನಾವೆಲ್ಲರೂ ಜಾತಿ, ಮತ, ಪಂಥ, ಪಂಗಡ, ಧರ್ಮ ಎಲ್ಲವನ್ನು ಮೀರಿ ಮನುಷ್ಯತ್ವವನ್ನು ಬೆಳೆಸಿಕೊಂಡು ಮಾನವತ್ವದ ಕಡೆ ಸಾಗಬೇಕು ಎಂದರು.
ಕರ್ನಾಟಕ ಸರ್ಕಾರ, ಕುವೆಂಪು ಇಡೀ ಬದುಕನ್ನು ಅನಾವರಣಗೊಳಿಸಲು ಅವರ ಮನೆಯನ್ನೇ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಿ ಹೊಸ ತಲೆಮಾರಿನ ಜನತೆಗೆ ಕುವೆಂಪು ಅವರನ್ನು ಕೃತಿಗಳ ಮೂಲಕ ಪರಿಚಯಿಸುವ ಬೃಹತ್ ಸಂಗ್ರಹಾಲಯವನ್ನು ಕುಪ್ಪಳ್ಳಿಯಲ್ಲಿ ನಿರ್ಮಿಸಿ ಅವರ ಸಾಹಿತ್ಯ ಶಿಬಿರಗಳು ನಡೆಸಿ ಸಂಪನ್ಮೂಲ ವ್ಯಕ್ತಿಗಳಿಂದ ಯುವ ಜನರು ಅಧ್ಯಯನಶೀಲರಾಗಿ ತೊಡಗಿಕೊಳ್ಳುವ ಕೆಲಸ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿರುವ ಕವಿಶೈಲದಲ್ಲಿ ಕುವೆಂಪುರವರ ಸಮಾಧಿಗೆ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಕನ್ನಡ ಸಂಸ್ಕøತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ, ಸಾಹಿತಿ ಮಲ್ಲೇಪುರ ಜಿ.ವೆಂಕಟೇಶ್, ಸಾಹಿತಿ ನಾಡೋಜ ಹಂಪ ನಾಗರಾಜಯ್ಯ, ಶಾಸಕ ಆರಗ ಜ್ಞಾನೇಂದ್ರ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ ಬಿ.ವಿ.ವಸಂತ್ಕುಮಾರ್, ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹಾಜರಿದ್ದು, ರಾಷ್ಟ್ರಕವಿ ಕುವೆಂಪುರವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ವಿವಿಧ ಪಕ್ಷಿಗಳು ಹಾಗೂ ಕುವೆಂಪುರವರ ವಿಚಾರಧಾರೆಗಳನ್ನು ಒಳಗೊಂಡ 2021ರ ಕ್ಯಾಲೆಂಡರ್ಅನ್ನು ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕುವೆಂಪುರವರ ವಿಶಿಷ್ಟ ಚಿಂತನೆಗಳಲ್ಲೊಂದಾದ ಮಂತ್ರ ಮಾಂಗಲ್ಯದ ಮುಖಾಂತರ ಕಲಬುರಗಿಯ ಅನಿಲ್ ರೇಲ್ ಹಾಗೂ ಶಿವಮೊಗ್ಗದ ವಿದ್ಯಾಶೆಟ್ಟಿ ವಿವಾಹ ನಡೆಯಿತು
ನಾಡೋಜ ಪ್ರೊ. ಹಂಪ ನಾಗರಾಜಯ್ಯ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರು ನೀಡಿದ ಕೊಡುಗೆ ಅತಿ ದೊಡ್ಡದು. ಮತ್ತು ಸರ್ವಕಾಲಿಕವಾದದ್ದು, ಸರ್ಕಾರ ಕುವೆಂಪುರವರ ಹೆಸರಿನಲ್ಲಿ ಪ್ರತಿಷ್ಠಾನವೊಂದನ್ನು ಮಾಡಿದ್ದು, ಅದರ ಮೂಲಕ ಯುವಜನರಿಗೆ ಕುವೆಂಪುರವರ ವಿಚಾರಧಾರೆಗಳನ್ನು ಪರಿಚಯಿಸುವ ಕೆಲಸ ನಡೆಯುತ್ತಿದೆ. ಅವರು ಸರ್ವಕಾಲಿಕ ಮೌಲ್ಯಗಳನ್ನು ಎತ್ತಿಹಿಡಿದರು.
ಎಸ್.ರಂಗಪ್ಪ, ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಾತನಾಡಿ ಇಲಾಖೆ ವತಿಯಿಂದ 26 ಜಯಂತಿಗಳನ್ನು ನಡೆಸುತ್ತೇವೆ. ಕುವೆಂಪು ಅವರ ಜನ್ಮದಿನವನ್ನು ಅವರ ಊರಿನಲ್ಲಿಯೇ ಸರ್ಕಾರ ನಡೆಸುತ್ತಿದೆ. ಇದನ್ನು ನಾವು ವಿಶ್ವಮಾನವ ದಿನ ಎಂದು ಆಚರಿಸುತ್ತೇವೆ. ಹುಟ್ಟುವಾಗ ನಾವೆಲ್ಲರೂ ವಿಶ್ವಮಾನವರಾಗಿರುತ್ತೇವೆ. ಬೆಳೆಯುತ್ತ ಜಾತಿ, ಮತ, ಪಂಗಡವನ್ನು ಅವಲಂಬಿಸುತ್ತೇವೆ. ಭಾರತ ದೇಶಕ್ಕೆ ಮಾನವತ್ವದ ಮೌಲ್ಯವನ್ನು ಸಾರಿದವರು ಕುವೆಂಪುರವರು.
ಅನಿಲ್ ರೇಲ್, ಕಲಬುರಗಿ ಮಂತ್ರ ಮಾಂಗಲ್ಯ ವಿವಾಹಿತ ರಾಷ್ಟ್ರಕವಿ ಕುವೆಂಪುರವರು ಯಾವ ವಾರವು ಅಶುಭವಲ್ಲ ಎಂದು ತಮ್ಮ ಕವನಗಳಲ್ಲಿ ಹೇಳಿದ್ದಾರೆ. ಸಾಕಷ್ಟು ಸಾಂಪ್ರದಾಯಿಕ ಮದುವೆಗಳನ್ನು ನೋಡಿದ್ದೇವೆ. ಆದರೆ ಕುವೆಂಪು ಅವರ ಸಾರ್ವಕಾಲಿಕ ಮೌಲ್ಯವಾದ ಪ್ರಕೃತಿ ಸಾಕ್ಷಿಯಾದ ಮಂತ್ರಮಾಂಗಲ್ಯ ನಮಗೆ ಮಾದರಿಯಾಗಿದೆ. ಅವರ ಜನ್ಮದಿನದಂದು ಶಿವಮೊಗ್ಗದ ವಿದ್ಯಾಶೆಟ್ಟಿ ಅವರನ್ನು ಬಾಳಸಂಗಾತಿಯಾಗಿ ಸ್ವೀಕರಿಸುತ್ತಿದ್ದೇನೆ.
ವಿದ್ಯಾಶೆಟ್ಟಿ, ಶಿವಮೊಗ್ಗ ಮಾತನಾಡಿಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಮನುಷ್ಯ ಹೇಗೆ ಬದುಕಬೇಕೆಂಬುದನ್ನು ಕುವೆಂಪುರವರು ತಮ್ಮ ಕೃತಿಗಳಲ್ಲಿ ಅನಾವರಣಗೊಳಿಸಿದ್ದಾರೆ, ಮಂತ್ರ ಮಾಂಗಲ್ಯದ ಮದುವೆಯ ಪರಿಕಲ್ಪನೆ ಮಾದರಿಯಾದದ್ದು, ನಾವು ಅದನ್ನೇ ಅನುಸರಿಸಿ ಕುವೆಂಪು ಜನ್ಮದಿನದಂದೇ ಇಬ್ಬರು ಸತಿಪತಿಗಳಾಗಿದ್ದೇವೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಜಿಲ್ಲಾಡಳಿತ ಶಿವಮೊಗ್ಗ ಕುಪ್ಪಳ್ಳಿಯಲ್ಲಿ 116 ಜನ್ಮದಿನದ ಪ್ರಯುಕ್ತ ಕುವೆಂಪು ಗೀತೆಗಳ ಗಾಯನ, ರಾಮಾಯಣ ದರ್ಶನಃ ಆಧಾರಿತ ವಾಲಿವಧೆ ನಾಟಕ ಹಾಗೂ ಕುವೆಂಪು ಅಧ್ಯಯನ ಸಾಹಿತ್ಯ ಶಿಬಿರದ ಸಮಾರೋಪ ಸಮಾರಂಭ ಆಯೋಜಿಸಿತ್ತು.