ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇದೇ ತಿಂಗಳ 21,22 ಮತ್ತು 23 ರಂದು “ರಾಗಿಯ ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿಕೆ” ಬಗ್ಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಗಿದೆ.ತರಬೇತಿ ಸಮಯ: ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ
ತರಬೇತಿಯಲ್ಲಿ ಭಾಗವಹಿಸುವ ಅಭ್ಯಥಿ೯ಗಳಿಗೆ ಸೂಚನೆ
- ಈ ತರಬೇತಿಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ 18 ರಿಂದ 35 ವರ್ಷದ ವಯಸ್ಸಿನವರಾಗಿರಬೇಕು.
- ಕಡ್ಡಾಯವಾಗಿ ಶಿವಮೊಗ್ಗ ಜಿಲ್ಲೆಯವರಾಗಿರಬೇಕು.
- ಈ ತರಬೇತಿ ಕಾರ್ಯಕ್ರಮವು 15 ಜನರಿಗೆ ಮಾತ್ರ ಅವಕಾಶವಿರುವುದರಿಂದ ಮೊದಲು ಕರೆ ಮಾಡಿ ಹೆಸರು ನೊಂದಾಯಿಸಿದವರಿಗೆ ಮಾತ್ರ ಅವಕಾಶ
- ಈ ತರಬೇತಿ ಕಾರ್ಯಕ್ರಮವು ಸಂಪೂರ್ಣ ಉಚಿತವಾಗಿರುತ್ತದೆ (ಊಟ ಮತ್ತು ವಸತಿ).
- ಆಸಕ್ತ ಯುವಕ-ಯುವತಿಯರಿಗೆ ಮಾತ್ರ ಅವಕಾಶ.
- ತರಬೇತಿಯ ನಂತರ ಪ್ರಮಾಣಪತ್ರವನ್ನು ವಿತರಿಸಲಾಗುವುದು.
- ತರಬೇತಿ ಕಾರ್ಯಕ್ರಮವು ಬೋಧನೆ, ಪ್ರಾಯೋಗಿಕ ಕಲಿಕೆ ಮತ್ತು ಅಧ್ಯಯನ ಪ್ರವಾಸ ಗಳನ್ನು ಒಳಗೊಂಡಿರುತ್ತದೆ.
- ತರಬೇತಿಯಲ್ಲಿ ಭಾಗವಹಿಸ ಬಯಸುವವರು ಕಡ್ಡಾಯವಾಗಿ ಆಧಾರ್ ಪ್ರತಿಯನ್ನು ತರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ: 8147224517