ಶಿವಮೊಗ್ಗ: ನಗರದ ಶ್ರೀರಾಮಪುರದಲ್ಲಿರುವ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿರುವ ನಿವಾಸಿಗಳಿಗೆ ರೋಟರ‍್ಯಾಕ್ಟ್ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆ ವತಿಯಿಂದ ಉಪಯೋಗಿಸಲು ಅಗತ್ಯವಿರುವ ವಸ್ತುಗಳನ್ನು ವಿತರಿಸಲಾಯಿತು.
ರೋಟರ‍್ಯಾಕ್ಟ್ ಕ್ಲಬ್ ಶಿವಮೊಗ್ಗ ಉತ್ತರ ಎಲೈಟ್ ಸಂಸ್ಥೆಯ ಹಾಗೂ ರೋಟರಿ ಶಿವಮೊಗ್ಗ ಉತ್ತರ ಕ್ಲಬ್ ಸದಸ್ಯರ ಮನೆಗಳಲ್ಲಿ ಉಪಯೋಗಿಸದೇ ಇರುವ ಹಾಗೂ ಮರುಬಳಕೆಗೆ ಮಾಡುವಂತಹ ವಸ್ತುಗಳಾದ ಬಟ್ಟೆ, ಪಾತ್ರೆ, ಪ್ಲಾಸ್ಟಿಕ್ ವಸ್ತುಗಳು, ಆಟಿಕೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿರುವ ನಿವಾಸಿಗಳಿಗೆ ವಿತರಿಸಲಾಯಿತು.
ರೋಟರ‍್ಯಾಕ್ಟ್ ಸದಸ್ಯರು ಹಾಗೂ ರೋಟರಿ ಸಂಸ್ಥೆಗಳ ಸದಸ್ಯರ ಮನೆ ಮನೆಗಳಿಗೆ ತೆರಳಿದ ಸದಸ್ಯರು, ದಿನಪತ್ರಿಕೆ, ವಾರಪತ್ರಿಕೆ, ಪುಸ್ತಕಗಳು, ರಟ್ಟಿನ ಡಬ್ಬ ಹಾಗೂ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ ಮಾರಾಟ ಮಾಡಿದ ನಂತರದಲ್ಲಿ ರೋಟರ‍್ಯಾಕ್ಟ್ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆ ಸದಸ್ಯರು ಅಗತ್ಯ ಮನೆ ಬಳಕೆ ವಸ್ತುಗಳನ್ನು ತೆಗೆದುಕೊಂಡು ಹಂಚಿ ಸೇವಾ ಕಾರ್ಯ ನಡೆಸಿದರು.
ರೋಟರ‍್ಯಾಕ್ಟ್ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆಯ ಸದಸ್ಯರು ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ರೋಟರ‍್ಯಾಕ್ಟ್ ಅಧ್ಯಕ್ಷ ಆದಿತ್ಯ, ಕಾರ್ಯದರ್ಶಿ ಧನ್ವಿ ರಾವ್, ಖಜಾಂಚಿ ಯಶವಂತ್ ಮತ್ತು ಸದಸ್ಯರಾದ ತೃಪ್ತಿ ಭಟ್, ಪೂರ್ವಿಕ, ಚಂದನ್, ಅನನ್ಯ, ಮೃತ್ಯುಂಜಯ ಮತ್ತು ಸುಂದರ್ ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.
ಯುವ ರೋಟರ‍್ಯಾಕ್ಟ್ ಸದಸ್ಯರ ಜೊತೆ ಕೈಜೋಡಿಸಲು ಆಸಕ್ತಿ ಇರುವವರು ಸಂಪರ್ಕಿಸಬೇಕಾದ ಮೊಬೈಲ್‌ಸಂಖ್ಯೆ 9606328353 ಮತ್ತು 7760498719 ಆಗಿರುತ್ತದೆ.

error: Content is protected !!