ಶಿವಮೊಗ್ಗ : ಜೂನ್ 20 : ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರವು ಬಾವಿಕೆರೆಯಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಗೋಡಂಬಿ ಸಸಿಗಳು ಪೂರೈಸುವ ಉದ್ದೇಶದಿಂದ ಕಳೆದ 2ವರ್ಷದಿಂದ ಕಸಿ ಕಟ್ಟಿದ ಗೋಡಂಬಿ ಸಸಿಗಳನ್ನು ಉತ್ಪಾದನೆ ಮಡಿ ಮಾರಾಟ ಮಾಡುತ್ತಿದೆ.
ಪ್ರಸ್ತುತ ವೆಂಗುರ್ಲಾ-7 ಮತ್ತು 4, ಉಳ್ಳಾಲ-1 ಮತ್ತು 2 ತಳಿಯ ಸುಮಾರು 75,000ಕಸಿ ಗಿಡಗಳು ಮಾರಾಟಕ್ಕೆ ಲಭ್ಯವಿವೆ. ಈ ಸಂಶೋಧನಾ ಕೇಂದ್ರದ ಗೋಡಂಬಿ ನರ್ಸರಿಯು ಭಾರತ ಸರ್ಕಾರದ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ 4ಸ್ಟಾರ್ ಮಾನ್ಯತೆ ಪಡೆದಿರುತ್ತದೆ.
ಕಸಿ ಮಾಡಿದ ಪ್ರತಿ ಗಿಡಕ್ಕೆ ರೂ.30/-ಗಳಾಗಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಮಾಹಿತಿಗಾಗಿ ಡಾ|| ಸಿ.ಸುನೀಲ್, ಪ್ರಧಾನ ಪರಿಶೋಧಕರು, ಗೋಡಂಬಿ ಅಭಿವೃದ್ಧಿ ಯೋಜನೆ, ಮೊ.9663321332ನ್ನು ಸಂಪರ್ಕಿಸಬಹುದಾಗಿದೆ ಎಂದು ಬಾವಿಕೆರೆ ಕ್ಷೇತ್ರ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.