ಶಿವಮೊಗ್ಗ ಜೂನ್ 15 : ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲ ವಿದ್ಯುತ್ ಗ್ರಾಹಕರ ಗೃಹಬಳಕೆ(ಎಲ್ಟಿ-1 & ಎಲ್ಟಿ-2) ಸ್ಥಾವರಗಳಿಗೆ 75 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಿರುವ ಬಗ್ಗೆ ಆದೇಶ ಹೊರಡಿಸಿದೆ.
ಈ ಆದೇಶದ ಪ್ರಕಾರ ಸೌಲಭ್ಯವನ್ನು ಪಡೆಯಲಿಚ್ಚಿಸುವ ಶಿವಮೊಗ್ಗ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ಗ್ರಾಹಕರು ಅವಶ್ಯಕ ದಾಖಲಾತಿಗಳಾದ ಗ್ರಾಹಕರ ಅರ್ಜಿ, ಪ.ಜಾ/ಪ.ಪಂ ಸರ್ಟಿಫಿಕೇಟ್, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಬ್ಯಾಂಕ್ ಪಾಸ್ಬುಕ್ ನಕಲು ಪ್ರತಿ, ಭಾವಚಿತ್ರವನ್ನು ನೀಡಬೇಕು ಹಾಗೂ ದಿನಾಂಕ: 31.05.2022 ರ ಅಂತ್ಯಕ್ಕೆ ಇರುವ ವಿದ್ಯುತ್ ಬಾಕಿಯನ್ನು ಸಂಪೂರ್ಣವಾಗಿ ಪಾವತಿಸಬೇಕೆಂದು ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.