ಭಾರತ ದೇಶವು ಅಭಿವೃದ್ದಿ ಶೀಲಾ ರಾಷ್ಟ್ರಗಳ ಸಾಲಿನಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಹಲವಾರು ಮುಂಚೂಣಿ ಕ್ಷೇತ್ರಗಳಲ್ಲಿ ಆತ್ಮ ನಿರ್ಭರ ಭಾರತ ಪರಿಕಲ್ಪನೆಯಡಿ ಈಗಾಗಲೇ ಸ್ವಾವಲಂಬಿಯಾಗಿ ಮುನ್ನುಗ್ಗುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ.
ಆದರೆ ಜಾಗತಿಕ ಮಟ್ಟದಲ್ಲಿ ಭಾರತ ಅತಿ ಹೆಚ್ಚು ಇಂಧನ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದ್ದು, ಈ ಅಪವಾದವನ್ನು ತುಂಡರಿಸಿ
ಸಶಕ್ತ ಭಾರತ ನಿರ್ಮಾಣ ಮಾಡಲು ಸರ್ಕಾರ ಎಲ್ಲ ರೀತಿಯಿಂದಲೂ ಪಣ ತೊಟ್ಟಿದ್ದು, ಮುಂಬರುವ ದಿನಗಳಲ್ಲಿ ಇಂಧನ ಕ್ಷೇತ್ರದಲ್ಲಿ ಹೆಚ್ಚು ಅವಲಂಬಿತ ರಾಷ್ಟವಾಗಿ ಉಳಿಯದೇ ಹೆಚ್ಚಿನ ಮಟ್ಟದಲ್ಲಿ ಎಲೆಕ್ಟ್ರಾನಿಕ್ ಆಧಾರಿತ ವಾಹನಗಳನ್ನು ಬಳಸುವಂತೆ ಜನ ಸಾಮಾನ್ಯರಿಗೆ ಹಲವಾರು ಯೋಜನೆಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಊತ್ತೇಜಿಸಲಾಗುತ್ತಿದ್ದು, ಶ್ರೀ ಸಾಮಾನ್ಯನು ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಮಾಜಿ ಸೂಡ ಅಧ್ಯಕ್ಷರಾದ ಶ್ರೀ ಎಸ್.ಎಸ್.ಜ್ಯೋತಿ ಪ್ರಕಾಶ್ ಅವರು ಸಲಹೆ ನೀಡಿದ್ದಾರೆ.
ಕೇಂದ್ರದ ಸರ್ಕಾರವು ಇಂಧನ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿರುವ ಕುರಿತು ಹಾಗೂ ಉಜ್ಜ್ವಲ ಯೋಜನೆಯಡಿ ದಿನ ಬಳಕೆಯ ಅನಿಲ ಇಂಧನ ಪಡೆದಿರುವ ಸುಮಾರು 9ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಖರೀದಿಯ ಮೇಲೆ 200ರೂಗಳ ಸಬ್ಸಿಡಿ ಒದಗಿಸಿರುವ ವಿಚಾರ ಪ್ರಸ್ತಾಪಿಸಿ, ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೇವಲ ಜನ ಸಾಮಾನ್ಯರಿಗೆ ಬ್ಯಾಟರಿ ಚಾಲಿತ ವಾಹನವನ್ನು ಬಳಸುವಂತೆ ಹೇಳಿ ಸರ್ಕಾರ ಕಣ್ಮುಚ್ಚಿ ಕೂರದೆ, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸಂಪರ್ಕ ಸಾರಿಗೆಯಲ್ಲಿ ಕೂಡ ಎಲೆಕ್ಟ್ರಾನಿಕ್ ಬಸ್ ಬಳಕೆಗೆ ಚಾಲನೆ ನೀಡಿದ್ದು ಮುಂದಿನ ದಿನಗಳಲ್ಲಿ ಇಂಧನ ಹಾಗೂ ಸಾರಿಗೆ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ನಾಂದಿ ಹಾಡಲು ಮುನ್ನುಡಿ ಬರೆದಿದೆ ಎಂದರು.
ಇಂಧನ ಬಳಕೆ ಕಡಿಮೆ ಮಾಡುವುದರಿಂದ ಕೇವಲ ನಮ್ಮ ಹಾಗೂ ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂಬುದು ಮಾತ್ರವಲ್ಲದೆ, ಪರಿಸರದ ಮೇಲಾಗುತ್ತಿರುವ ಗದ ಪ್ರಹಾರವು ಕಡಿಮೆಯಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿದಂತಾಗುತ್ತದೆ ಹಾಗಾಗಿ ನಾವೆಲ್ಲರೂ ಜಾಗೃತರಾಗೋಣ ಎಂದು ತಿಳಿಸಿದ್ದಾರೆ.