ಶಿವಮೊಗ್ಗ ಸೆಪ್ಟೆಂಬರ್ 19 : ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ಈ ಕೂಡಲೇ ಮಾಡಿಸಬೇಕು.
ಈ ಯೋಜನೆಯಡಿ ಈಗಾಗಲೇ ಅರ್ಹ ರೈತ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನ ನೀಡಲಾಗುತ್ತಿದ್ದು, ಮುಂದಿನ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇ-ಕೆವೈಸಿ ಮಾಡದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ತಮ್ಮ ತಾಲ್ಲೂಕಿನ ಹತ್ತಿರದ ಸಿಎಸ್ಸಿ (ನಾಗರಿಕ ಸೇವಾ ಕೇಂದ್ರ) ಅಥವಾ ಗ್ರಾಮ ಒನ್ ಕೇಂದ್ರ ಅಥವಾ http://pmkisan.gov.in ಪೋರ್ಟಲ್ನ ಫಾರ್ಮರ್ಸ್ ಕಾರ್ನರ್ನ ಇ-ಕೆವೈಸಿ ಅವಕಾಶದಡಿ ಇ-ಕೆವೈಸಿಯನ್ನು ದಿನಾಂಕ: 22-09-2022 ರೊಳಗೆ ಮಾಡಿಕೊಳ್ಳಬೇಕು. ಇ-ಕೆವೈಸಿಯನ್ನು ಮಾಡಿಸಲು ಇನ್ನು ಕೊನೆಯ ಮೂರು ದಿನಗಳು ಮಾತ್ರ ಉಳಿದಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್.ಹೆಚ್.ಎಸ್. ತಿಳಿಸಿದ್ದಾರೆ.