ಶಿವಮೊಗ್ಗ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನು ಅತ್ಯಂತ ಸಮರ್ಥವಾಗಿ ಜನರಿಗೆ ತಲುಪಿಸುವಲ್ಲಿ ಯೋಜನೆಗಳನ್ನು ರೂಪಿಸಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ
ಪ್ರತಿಯೊಬ್ಬರಿಗೂ ಜಿಲ್ಲೆಯಲ್ಲಿ ಆರೋಗ್ಯ ಕಾರ್ಡುಗಳನ್ನು ವಿತರಿಸುವಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ವಿಶೇಷವಾದ ಕೌಂಟರ್ ಗಳನ್ನು ಸಾರ್ವಜನಿಕರಿಗೆ ಅರಿವು ಮೂಡಿಸಿ ಅದರ ಮೂಲಕ ಕಾಡುಗಳನ್ನು ನೀಡಲಾಗುತ್ತಿದೆ ಈಗಾಗಲೇ ಕಳೆದ ನಾಲ್ಕು ವರ್ಷಗಳಲ್ಲಿ 138 ಕೋಟಿ ವೆಚ್ಚ ಯೋಜನೆಯಲ್ಲಿ ವಿನಿಯೋಗಿಸಲಾಗಿದೆ
ಅದರಲ್ಲಿಯೂ ಮಕ್ಕಳು ಬಾಣಂತಿಯರು ನವಜಾತ ಶಿಶುಗಳು ಹೀಗೆ ಸಾಕಷ್ಟು ಜನರಿಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಿ ಉಚಿತವಾಗಿ ನೀಡಿ ಅವರಿಗೆ ಬದುಕು ನೀಡುವ ಕೆಲಸವನ್ನು ಈ ಯೋಜನೆ ರೂಪಿಸಿದೆ ಪ್ರತಿ ತಾಲೂಕಿನಲ್ಲಿ ಸರ್ಕಾರ ಆರೋಗ್ಯ ಮಿತ್ರ ನೇಮಕ ಮಾಡಿ ಬಂದಂತಹ ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ಮಾರ್ಗದರ್ಶನವನ್ನು ನೀಡಲಾಗುತ್ತಿದೆ ಯಾರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾನೆ ಅವರ ಚಿಕಿತ್ಸಾ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯ ನೋಡಿಕೊಂಡು ಅವರಿಗೆ ಧೈರ್ಯ ತುಂಬಿ ಮನೆಗೆ ತಲುಪಿಸುವ ಕೆಲಸವನ್ನು ಕೂಡ ಆರೋಗ್ಯ ಇಲಾಖೆ ಪರಿಣಾಮಕಾರಿಯಾಗಿ ಮುನ್ನಡೆಸಿರುವುದರಿಂದ ಜನರು ಅತ್ಯಂತ ಆತ್ಮವಿಶ್ವಾಸದಿಂದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶೂಶ್ರಷೆಗೆ ಒಳಪಡುತ್ತಿದ್ದಾರೆ ಕೇಂದ್ರ ಸರ್ಕಾರ ಆರೋಗ್ಯಕ್ಕೆ ಕುರಿತಂತೆ ಸಾಕಷ್ಟು ಅನುದಾನಗಳನ್ನು ನೀಡುತ್ತಿದೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ಎಲ್ಲ ಯೋಜನೆಗಳನ್ನು ಜನತೆಗೆ ಪರಿಚಯಿಸುವಲ್ಲಿ ಕರಪತ್ರಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ
ರಾಜೇಶ್ ಸುರಗಿಹಳ್ಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಸಮರ್ಥವಾಗಿ ಮುನ್ನಡೆದಿದೆ ಪ್ರತಿ ತಾಲೂಕುಗಳಲ್ಲಿ ತನ್ಮೂಲಕ ಅತಿಹೆಚ್ಚು ಕಾರ್ಡುಗಳನ್ನು ಜನತೆಗೆ ನೀಡುವ ಕೆಲಸ ಮಾಡಲಾಗಿದೆ ಕ್ಯಾನ್ಸರ್ ಇನ್ನಿತರ ರೋಗಕ್ಕೆ ಒಳಗಾದವರಿಗೆ ಆತ್ಮಸ್ಥೈರ್ಯ ತುಂಬಿ ಎಂದಿನಂತೆ ಅವರು ಬದುಕು ನಡೆಸಲು ಸಹಕರಿಸುತ್ತಿದೆ ಕಳೆದ ನಾಲ್ಕು ವರ್ಷಗಳಲ್ಲಿ ಯೋಜನೆಗೆ 138 ಕೋಟಿ ಹಣವನ್ನು ವೆಚ್ಚ ಮಾಡಿ ನಿಜವಾದ ಫಲಾನುಭವಿಗಳು ಇದರ ಫಲವಂತಿಕೆಯನ್ನು ಕಂಡಿದ್ದಾರೆ
ಸುನೀತಾ ಕಪ್ಪನಹಳ್ಳಿ ಶಿಕಾರಿಪುರ ತಾಲ್ಲೂಕು ನನ್ನ ಮಗ ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವಂತಹ ಪರಿಸ್ಥಿತಿ ಎದುರಾಯಿತು ಸರ್ಕಾರದ ಆಯುಷ್ಮಾನ್ ಕಾರ್ಡನ್ನು ನಮಗೆ ಇಲಾಖೆ ವತಿಯಿಂದಲೇ ಮಾಡಿಸಿಕೊಟ್ಟು ಆತನ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಸರ್ಕಾರ ನಮಗೆ ಮಾಡಿಕೊಟ್ಟಿದೆ. ಇದರಿಂದ ಮಗ ಎಂದಿನಂತೆ ಗೆಲುವಾಗಿ ಓಡಾಡುತ್ತಿದ್ದಾನೆ ಆರೋಗ್ಯ ಇಲಾಖೆಗೆ ಮತ್ತು ಸರ್ಕಾರಕ್ಕೆ ನನ್ನ ಧನ್ಯವಾದಗಳು ಎಂದು ತಿಳಿಸಿದರು
ರಮೇಶ ಸೊರಬ : ನನ್ನ ತಾಯಿ ಕ್ಯಾನ್ಸರ್ ರೋಗಕ್ಕೆ ಪೀಡಿತರಾಗಿದ್ದಾರೆ. ನಾವೆಲ್ಲರೂ ಚಿಂತಕ್ರಾಂತರಾಗಿ ಕುಳಿತಾಗ ಆಗ ನಮಗೆ ಸಹಾಯಕ್ಕೆ ಬಂದದ್ದು ಕೇಂದ್ರ ಸರ್ಕಾರದ ಆಯುಷ್ಮಾನ್ ಕಾರ್ಡ್ ಈ ಯೋಜನೆಯಲ್ಲಿ ನಮ್ಮ ತಾಯಿ ಚಿಕಿತ್ಸೆಗೆ ಒಳಗಾಗಿ ಗುಣಮುಖಳಾಗುತ್ತಿದ್ದಾಳೆ ಸರ್ಕಾರದ ಇಂತಹ ಯೋಜನೆಗಳಿಂದ ನಮ್ಮಂತವರಿಗೆ ತುಂಬಾ ಉಪಯೋಗವಾಗಿದೆ ಎಂದು ತಿಳಿಸಿದರು
ಶ್ರೀನಿವಾಸ್ ಹೊಸನಗರ: ನಾನು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದೆ ನನಗೆ ತುರ್ತು ಚಿಕಿತ್ಸೆ ಆಗಬೇಕಾಗಿತ್ತು ಚಿಕಿತ್ಸೆಗೆ ತಗಲುವ ಹಣ ನನ್ನಲ್ಲಿ ಇರಲಿಲ್ಲ ಸರ್ಕಾರ ಕೊಟ್ಟಂತಹ ಆಯುಷ್ಮಾನ್ ಕಾರ್ಡಿನಿಂದ ನನ್ನ ಚಿಕಿತ್ಸೆಗೆ ತುಂಬಾ ಅನುಕೂಲವಾಯಿತು ಆಯುಷ್ಮಾನ್ ಕಾರ್ಡ್ ಬಳಕೆಯಿಂದ ನನ್ನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಸರ್ಕಾರವೇ ಬರಸಿದೆ ನಾನು ಈಗ ಆರೋಗ್ಯವಾಗಿದ್ದೇನೆ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಚಿಕಿತ್ಸೆಯನ್ನು ಕೊಟ್ಟಿದ್ದಾರೆ ಎಂದಿನಂತೆ ನಾನು ಓಡಾಡುವಂತೆ ಮಾಡಿದ್ದಾರೆ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ತಿಳಿಸಿದರು