ತೀರ್ಥಹಳ್ಳಿ ತಾಲ್ಲೂಕಿನ ಕೆರೋಡಿ ಹಾಗೂ ಸತ್ತಮುತ್ತಲಿನ ಗ್ರಾಮಗಳಲ್ಲಿ ಅಡಿಕೆ ತೋಟಗಳಲ್ಲಿ ಮಿಡತೆಯಂತಹ ಕೀಟಭಾದೆ ಹೆಚ್ಚಾಗಿದ್ದು, ತೋಟಗಾರಿಕೆ ಬೆಳಗಾರರು ಆತಂಕಪಡುವ ಅಗತ್ಯವಿಲ್ಲ ಎಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಸಂಬಂಧ ಅನೇಕ ತೋಟಗಾರಿಕೆ ಬೆಳೆಗಾರರು ವಿಶ್ವವಿದ್ಯಾಲಯದ ವಿಜ್ಞಾನಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತಜ್ಞ ವೈದ್ಯರ ತಂಡ ತೀರ್ಥಹಳ್ಳಿ ಹಾಗೂ ಮಲೆನಾಡಿನ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಕಂಡುಬಂದ ಕೀಟಗಳಾದ ಮಿಡತೆ (ಮರುಭೂಮಿ ಮಿಡತೆ ಅಲ್ಲ) ಹಾಗೂ ಟೈಗರ್ ಬೀಟಲ್ ಜಾತಿಗೆ ಸೇರಿದ ಹುಳುಗಳಾಗಿದ್ದು ಅಡಿಕೆ ಬೆಳೆಗೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ ಎಂದವರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾದ ಕೀಟದ ಛಾಯಾ ಚಿತ್ರವು ಟೈಗರ್ ಬೀಟಲ್ ಎಂಬ ಪರಭಕ್ಷಕ ಕೀಟವಾಗಿದ್ದು, ಬೇರೆ ಕೀಟಗಳನ್ನು ತಿಂದು ಬದುಕುವ ಉಪಯುಕ್ತ ಕೀಟವಾಗಿದ್ದು, ಬೆಳೆಗಳಿಗೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ. ಅದಕ್ಕಾಗಿ ತೋಟಗಾರಿಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದವರು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಂ. ಕೆ. ನಾಯ್ಕರವರ ಮಾರ್ಗದರ್ಶನದ ಮೆರೆಗೆ ತಾಕು ಪರಿಶೀಲನೆ ಮಾಡಿದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ. ಎಂ. ರವಿಕುಮಾರ್, ಡಾ. ನಾಗರಾಜಪ್ಪ ಅಡಿವಪ್ಪರ್ ಹಾಗೂ ಡಾ. ಶರಣಬಸಪ್ಪ ದೇಶ್ಮುಖ್ ಹಾಗೂ ಶ್ರೀಮತಿ ರೇವತಿ ಮುಂತಾದವರು ಭೇಟಿ ನೀಡಿ ಪರಿಶೀಲಿಸಿದರು. ಈ ಕ್ಷೇತ್ರ ಭೇಟಿಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ರಮೇಶ್ ಹೆಗಡೆ ಹಾಗೂ ತೀರ್ಥಹಳ್ಳಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸಿದ್ದಲಿಂಗೇಶ್, ಕೆರೋಡಿ ಹಾಗೂ ಸತ್ತಮುತ್ತಲಿನ ಗ್ರಾಮಗಳÀ ರೈತರು ಉಪಸ್ಥಿತರಿದ್ದರು.