ಮಾನವೀಯ ಮೌಲ್ಯಗಳ ನಿಧಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಮಾನವರೆಲ್ಲರೂ ಒಂದೇ ಎಂಬುದನ್ನು ಸಾರುತ್ತದೆ. ಸರ್ವರೂ ಸಮಾನರು ಎಂಬ ಅರಿವೇ ಪ್ರಜಾಪ್ರಭುತ್ವದ ತಳಹದಿ. ಪ್ರಜಾಪ್ರಭುತ್ವವನ್ನು ವಿಶ್ವಸಂಸ್ಥೆ ಅತ್ಯಂತ ಶ್ರೇಷ್ಠ ಮೌಲ್ಯವೆಂದು ಪರಿಗಣಿಸಿದೆ. ಪ್ರಜಾಪ್ರಭುತ್ವ ಆದರ್ಶವಾದ ಸಾರ್ವತ್ರಿಕ ಮೌಲ್ಯವೆಂದು ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಅವರು ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಏರ್ಪಡಿಸಿದ್ದ ‘ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಂಬೇಡ್ಕರ್ ಬಹುದೊಡ್ಡ ತತ್ವಜ್ಞಾನಿ. ಅವರು ಇಲ್ಲದಿದ್ದರೆ ಈ ದೇಶ ಉಳಿಯುತ್ತಿರಲಿಲ್ಲ. ಅವರಿಂದ ರಚನೆಯಾದ ಸಂವಿಧಾನವೇ ಒಂದು ಕ್ರಾಂತಿಕಾರಕ ದಾಖಲೆ. ಆಧುನಿಕತೆಯನ್ನು ತಂದುಕೊಟ್ಟ ಮಹಾವ್ಯಕ್ತಿ. ಅಂಬೇಡ್ಕರ್ ಅವರ ‘ಜಾತಿವಿನಾಶ’ ಕೃತಿಯನ್ನು ಎಲ್ಲರೂ ಕಡ್ಡಾಯವಾಗಿ ಓದಬೇಕೆಂದು ತಿಳಿಸಿದರು. ತದನಂತರ ಭಾರತ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿದರು.
ಶಿಕ್ಷಣ ನಿಕಾಯದ ಡೀನ್ ಪ್ರೊ. ಜಗನ್ನಾಥ್ ಕೆ. ಡಾಂಗೆ, ಅವರು ಉಪಸ್ಥಿತರಿದ್ದರು. ಡಾ. ಬಿ.ಅರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ‘ಪ್ರಜಾಪ್ರಭುತ್ವ’ ವ್ಯವಸ್ಥೆ ಬೆಳೆದು ಬಂದ ಬಗೆಯನ್ನು ಪರಿಚಯಿಸಿ ವಂದಿಸಿದರು.

ಡಾ. ಗೋವಿಂದರಾಜ್, ಡಾ. ಎಂ. ರವಿಕುಮಾರ್, ಡಾ. ಎನ್.ಬಿ. ತಿಪ್ಪೇಸ್ವಾಮಿ, ಡಾ. ಅಶೋಕ್ ಲಮಾಣಿ, ಮೊದಲಾದ ಅಧ್ಯಾಪಕರು, ಅಧ್ಯಾಪಕೇತರ ನೌಕರರು, ಸಂಶೋಧಕರು, ವಿದ್ಯಾರ್ಥಿಗಳು ಭಾಗವಹಿಸಿದರು.

error: Content is protected !!