ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಜೂನ್ 21ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕೊರೋನ ಸೋಂಕನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ YOGA AT HOME, YOGA WITH FAMILY ಎಂಬ ಘೋಷವಾಕ್ಯದಡಿ ಕುಟುಂಬದೊಂದಿಗೆ ಮನೆಯಿಂದಲೆ ಯೋಗ ದಿನ ಆಚರಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ|| ಪುಷ್ಪಾ ಅವರು ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ಮನೆಯಲ್ಲಿ ಕುಟುಂಬದೊಂದಿಗೆ ಯೋಗಾಸನ ಮಾಡುತ್ತಿರುವ ಛಾಯಾಚಿತ್ರವನ್ನು ಮತ್ತು ಚಿತ್ರದಲ್ಲಿರುವ ಕುಟುಂಬದ ಸದಸ್ಯರ ವಿವರಗಳನ್ನು ವಾಟ್ಸ್ಯಾಪ್ ಮೂಲಕ ಮೊ.9113552482ಗೆ ಕಳುಹಿಸುವಂತೆ ಮನವಿ ಮಾಡಿರುವ ಅವರು, ಜೂನ್ 21ರಂದು ಭಾನುವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು DD national, DD news, DD Bharati, DD India, DD Urdu, DD Sports, DD Kisan all RLSS Channels are Regional Kendras ಚಾನಲ್‍ಗಳಲ್ಲಿ ನೇರಪ್ರಸಾರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 6.15ರಿಂದ 7ರವರೆಗೆ ಪ್ರಧಾನಮಂತ್ರಿಗಳಿಂದ ಕಾರ್ಯಕ್ರಮದ ಉದ್ಘಾಟನೆ, ನಂತರ ಪ್ರಧಾನಿಗಳಿಂದ ಸಂದೇಶ, 7ರಿಂದ 7.45ರವರೆಗೆ ಯೋಗ ಪ್ರಾತ್ಯಕ್ಷಿತೆ, 7.45ರಿಂದ 8ರವರೆಗೆ ಯೋಗಪಟುಗಳು ಹಾಗೂ ಯೋಗತಜ್ಞರಿಂದ ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದವರು ತಿಳಿಸಿದ್ದಾರೆ.