ಶಿವಮೊಗ್ಗ: ವಿಶೇಷ ಚೇತನ ಮಕ್ಕಳು ದೇವರ ಮಕ್ಕಳಿದ್ದಂತೆ, ಅವರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಅಭಿಪ್ರಾಯಿಸಿದರು.

ಸರ್ಜಿ ಫೌಂಡೇಶನ್ ಹಾಗೂ ರೌಂಡ್ ಟೇಬಲ್ ವತಿಯಿಂದ ನಗರದ ಕಂಟ್ರಿಕ್ಲಬ್ ನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಬುದ್ಧಿಮಾಂದ್ಯರು ಹಾಗೂ ವಿಶೇಷಚೇತನರ “ಕಿಡ್ಸ್ ಫಿಯೆಸ್ಟಾ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೌಂಡ್ ಟೇಬಲ್ ಘಟಕವು ಸರ್ಕಾರದ ಜೊತೆಗೆ ಸೇರಿ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡುತ್ತಾ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಅಭಿನಂದನೀಯ, ಹಾಗೆಯೇ ವಿಶೇಷಚೇತನ ಮಕ್ಕಳ ಕೊರತೆ ನೀಗಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ವಿಧಾನ ಪರಿಷತ್ ಶಾಸಕರು ಹಾಗೂ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಮಾತನಾಡಿ, ಇಡೀ ಭಾರತದಲ್ಲಿ ಪ್ರತಿ ದಿನ ಸರಾಸರಿ ಎರಡು ಶಾಲಾ ಕೊಠಡಿಗಳನ್ನು ನಿರ್ಮಿಸುವ ಮೂಲಕ ಶಿಕ್ಷಣಕ್ಕೆ ಪೆÇ್ರೀತ್ಸಾಹ ಮಾಡುತ್ತಿರುವ ರೌಂಡ್ ಟೇಬಲ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇಂತಹ ಸಂಸ್ಥೆಯಲ್ಲಿ ನಾನೂ ಒಬ್ಬ ಸದಸ್ಯ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ಮನೋರೋಗ ತಜ್ಞರಾದ ಡಾ.ಕೆ. ಆರ್ ಶ್ರೀಧರ್, ಮಕ್ಕಳಿಗೆ ಇಂತಹ ಕಾರ್ಯಕ್ರಮಗಳು ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಪೋಷಕರು ಇಂತಹ ಮಕ್ಕಳಿಗೆ ಹೆಚ್ಚಿನ ಸ್ಪಂದನೆ ತೋರಿಸಲು ಸಹಕಾರಿಯಾಗುತ್ತದೆ. ನಮ್ಮ ಮಕ್ಕಳು ಯಾರಿಗೂ ಕಮ್ಮಿಯಿಲ್ಲ ಎಂಬ ಭಾವನೆಉಂಟಾಗುತ್ತದೆ. ಜೊತೆಗೆ ಮಕ್ಕಳ ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.
ನರರೋಗ ತಜ್ಞರು ಹಾಗೂ ಅಭಿರುಚಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಶಿವರಾಮಕೃಷ್ಣ ಮಾತನಾಡಿ, ಮಕ್ಕಳಲ್ಲಿ ಇಂತಹ ಕಾರ್ಯಕ್ರಮಗಳು ನವಚೈತನ್ಯ ಉಂಟುಮಾಡುತ್ತದೆ. ಅವರಲ್ಲಿ ಸಡಗರದ ವಾತಾವರಣವಿದೆ. ಶ್ಲಾಘನೀಯ ಕಾರ್ಯಕ್ರಮವಾಗಿದ್ದು, ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಜೋಡಿಸಬೇಕು ಎಂದರು.
ರೌಂಡ್ ಟೇಬಲ್ ಏರಿಯಾ ಛೇರ್ಮನ್ ಕುಮಾರ್ ಪಾಲ್ ಮಾತನಾಡಿ, ದೇಶದಾದ್ಯಂತ ರೌಂಡ್ ಟೇಬಲ್ ಸಪ್ತಾಹವನ್ನು ಆಚರಿಸುತ್ತಿದ್ದು, ಬಡವರಿಗೆ ಊಟ, ದಿವ್ಯಾಂಗ ಮಕ್ಕಳಿಗೆ ಕಿಡ್ಸ್‍ಫೆಸ್ಟ್ ಹಾಗೂ ಕಳೆದ 26 ವರ್ಷಗಳಿಂದ ದೇಶದಾದ್ಯಂತ ಸುಮಾರು 10 ಸಾವಿರ ತರಗತಿ ಕೊಠಡಿಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ. ಈ ವರ್ಷ ಶಿವಮೊಗ್ಗದಲ್ಲೂ 8 ಕೊಠಡಿಗಳು ನಿರ್ಮಾಣವಾಗುತ್ತಿದೆ. ನಮ್ಮೆಲ್ಲ ಸಾಮಾಜಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಹಕಾರ ನೀಡುತ್ತಿದ್ದಾರೆ ಎಂದರು.
ಶಿವಮೊಗ್ಗ ರೌಂಡ್ ಟೇಬಲ್ ಛೇರ್ಮನ್ ಆದಿತ್ಯ ಆಚಾರ್ಯ ಮಾತನಾಡಿ, ಈ ದೇವರ ಮಕ್ಕಳನ್ನು ಸೇರಿಸಿ ಈ ಹಬ್ಬ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ. ಹುಟ್ಟಿದ ಹಬ್ಬದ ರೀತಿಯಲ್ಲಿ ಅವರಿಗೆ ಇಷ್ಟ ಬಂದ ತಿಂಡಿಗಳು, ಆಟೋಟಗಳನ್ನು ಹಾಡು, ಕುಣಿತ ಎಲ್ಲವನ್ನು ಒದಗಿಸಿದ್ದೇವೆ. ಜೊತೆಗೆ ಈ ಸಪ್ತಾಹದ ಅಂಗವಾಗಿ ಮಲವಗೊಪ್ಪದ ಶಾಲೆಗೆ ತಟ್ಟೆ ಲೋಟ ನೀಡಿದ್ದೇವೆ.2017ರಿಂದಲೇ ನಮ್ಮ ಈ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಈ ಬಾರಿ ಇನ್ನೂ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಂಟ್ರಿಕ್ಲಬ್ ನ ಉಪಾಧ್ಯಕ್ಷರಾದ ಚುಡಾಮಣಿ ಪವಾರ್, ಕಾರ್ಯಕ್ರಮದ ಸಂಚಾಲಕರಾದ ಡಾ. ಸ್ವರೂಪ್ ಮಲ್ಲೇಶ್, ಶ್ರದ್ದಿತ್, ರೌಂಡ್, ವಿಶ್ವಾಸ್ ಕಾಮತ್, ವೈಸ್ ಛೇರ್ಮನ್ ಈಶ್ವರ್ ಸರ್ಜಿ, ಕಾರ್ಯದರ್ಶಿ ಗುರು ಹಂಜಿ ಮತ್ತಿತರರು ಹಾಜರಿದ್ದರು.

ಮನಗೆದ್ದ ವಿಶೇಷಚೇತನ ಮಕ್ಕಳು : ಶಾರದಾ ಅಂಧರ ವಿಕಾಸ, ಸರ್ಜಿ ಇನ್‍ಸ್ಟಿಟ್ಯೂಟ್‍ನ ಬುದ್ಧಿಮಾಂದ್ಯ ಮಕ್ಕಳು, ತರಂಗ ಶಾಲೆಯ ಕಿವುಡ ಮತ್ತು ಮೂಗ ಮಕ್ಕಳು, ಹ್ಯಾಪಿ ಹೋಂನ ವಿಕಲಚೇತನರು, ಮಾದವನೆಲೆಯ ಅನಾಥ ಮಕ್ಕಳು ಹಾಗೂ ತಾಯಿ ಮನೆಯ 170 ಕ್ಕೂ ಮಕ್ಕಳು ಭಾಗವಹಿಸಿ ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಹಾಡು, ಡ್ಯಾನ್ಸ್ ಹಾಗೂ ಕಾಟನ್ ಕ್ಯಾಂಡಿ, ಚಾಕೋಲೇಟ್ ಫೌಂಟೆನ್ , ಜಂಪಿಂಗ್ ಕ್ಯಾಸಲ್ ಹೀಗೆ ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಅಮೋಘವಾಗಿ ನೃತ್ಯ ಮಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದರು. ವಿವಿಧ ತಿನಿಸುಗಳನ್ನು ಸವಿದು ಸಂತಸಪಟ್ಟರು. ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

error: Content is protected !!