ಶಿವಮೊಗ್ಗ : ಪ್ರತಿ ವರ್ಷದಂತೆ ಈ ಬಾರಿಯು ಕೂಡ ಶಿವಮೊಗ್ಗ ರೌಂಡ್‌ ಟೇಬಲ್‌ 166 ಘಟಕ ಹಾಗೂ ಸರ್ಜಿ ಫೌಂಡೇಶನ್ ಸಂಯುಕ್ತಾಶ್ರಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ನ.13 ರ ಬುಧವಾರ ಬೆಳಗ್ಗೆ 11 ಗಂಟೆಗೆ ನಗರದ ಕಂಟ್ರಿ ಕ್ಲಬ್ ನಲ್ಲಿ ಕಿಡ್ಸ್ ಫಿಯೆಸ್ಟಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಜನಪ್ರಿಯ ಸಂಸದರಾದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ಹೆಸರಾಂತ ವೈದ್ಯರು ಹಾಗೂ ಸಮಾಜ ಸೇವಕರಾದ ಡಾ.ಪಿ.ನಾರಾಯಣ್, ಖ್ಯಾತ ನರರೋಗ ತಜ್ಞರು ಹಾಗೂ ಅಭಿರುಚಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಶಿವರಾಮಕೃಷ್ಣ, ಖ್ಯಾತ ಮನೋರೋಗ ತಜ್ಞರಾದ ಡಾ.ಕೆ. ಆರ್ ಶ್ರೀಧರ್, ಕಂಟ್ರಿಕ್ಲಬ್ ನ ಅಧ್ಯಕ್ಷರಾದ ಅಶೋಕ್ ಹೆಚ್ ಜಿ ಹಾಗೂ ಉಪಾಧ್ಯಕ್ಷರಾದಂತಹ ಚುಡಾಮಣಿ ಪವಾರ್, ಕಾರ್ಯಕ್ರಮದ ಸಂಚಾಲಕರಾದ ಸ್ವರೂಪ್ ಮಲ್ಲೇಶ್, ಶ್ರದ್ದಿತ್, ರೌಂಡ್ ಟೇಬಲ್ ಛೇರ್ಮನ್ ಆದಿತ್ಯ ಆಚಾರ್ಯ, ವೈಸ್ ಛೇರ್ಮನ್ ಈಶ್ವರ್ ಸರ್ಜಿ, ಕಾರ್ಯದರ್ಶಿ ಗುರು ಹಂಜಿ, ಮತ್ತಿತರರು ಹಾಜರಿರುವರು.

ನಾನಾ ಶಾಲೆಗಳ ವಿಶೇಷಚೇತನರು, ಬುದ್ಧಿಮಾಂದ್ಯ ಮಕ್ಕಳು ವಿವಿಧ ಆಟೋಟ, ಹಾಡು, ನೃತ್ಯಗಳನ್ನು ನಡೆಸಿಕೊಡುವರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

error: Content is protected !!