ಶಿವಮೊಗ್ಗ ಮಹಾನಗರ ಪಾಲಿಕೆ ಇಂದಿರಾ ಕ್ಯಾಂಟೀನ್ ನಲ್ಲಿ ತಯಾರಾಗುವ ಪ್ರಮುಖ ಆಹಾರ ತಯಾರಿಕಾ ಕೇಂದ್ರದಲ್ಲಿ ನಗರದ ಹಸಿ ತ್ಯಾಜ್ಯವನ್ನು ಬಳಸಿ ಗ್ಯಾಸ್ ತಯಾರಿಸಿ ಅಡಿಗೆಗೆ ಈ ಇಂಧನವನ್ನು ಬಳಸುವ ಕೆಲಸವನ್ನು ಮಾಡುತ್ತಿದ್ದು ಅತ್ಯಂತ ಯಶಸ್ವಿಯಾಗಿ ಇದು ಮುನ್ನಡೆದಿದೆ

ಶಿವಮೊಗ್ಗ ಮಹಾನಗರ ಪಾಲಿಗೆ ಇಂತಹ ಹೊಸ ಪ್ರಯತ್ನಗಳಿಗೆ ಹೆಜ್ಜೆ ಇಟ್ಟಿದ್ದು ರಾಷ್ಟ್ರಮಟ್ಟದಲ್ಲಿಯೂ ಇದು ಯಶಸ್ಸನ್ನು ಕಂಡಿದೆ

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯದ ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ.

ಶಿವಮೊಗ್ಗ ನಗರದಲ್ಲಿ 3,22,000 ಜನಸಂಖ್ಯೆ ಇದ್ದು ಒಂದು ದಿನಕ್ಕೆ 170 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ, ಇದರಲ್ಲಿ ನೂರು ಟನ್ ಹಸಿ ಕಸ ಎಪ್ಪತ್ತು ಟನ್ ಒಣಕಸ ಸಿಗುತ್ತದೆ ಅದರಲ್ಲಿ ಎರಡು ಟನ್ ಹಸಿ ಕಸ ಬಳಸಿ ಇಂದಿರಾ ಕ್ಯಾಂಟೀನ್ ಮುಖ್ಯ ಆಹಾರ ತಯಾರಿಕಾ ಕೇಂದ್ರದಲ್ಲಿ ಆಧುನಿಕ ಯಂತ್ರಗಳ ಸಹಾಯದಿಂದ 14 ಕೆಜಿ ಗ್ಯಾಸ್ ಅನ್ನು ತಯಾರಿಸಲಾಗುತ್ತದೆ
ಪ್ರತಿದಿನ ಶಿವಮೊಗ್ಗ ನಗರದಲ್ಲಿರುವ ಇಂದಿರಾ ಕ್ಯಾಂಟೀನ್ಗಳಿಗೆ ತಯಾರಾಗುವ ಉಪಹಾರ ಊಟ ಎಲ್ಲವೂ ಇದರಿಂದ ಲಭ್ಯವಾಗುವ ಇಂದಿನ ದಿನದಿಂದಲೇ ತಯಾರಾಗುತ್ತಿದ್ದು ಅತ್ಯಂತ ಕಡಿಮೆ ಖರ್ಚಿನಲ್ಲಿ ಅಡುಗೆ ತಯಾರಿಕೆ ನಡೆಯುತ್ತಿದೆ.

ನಗರದ ಪ್ರತಿ ಮನೆಯ ಕಸವನ್ನು ಸಂಗ್ರಹಿಸಿ ಅದರಲ್ಲಿ ಹಸಿ ಕಸ ಒಣಕಸವನ್ನು ಬೇರ್ಪಡಿಸಿ ತ್ಯಾಜ್ಯವನ್ನು ಗ್ಯಾಸ್ ತಯಾರಿಕೆಗೆ ಉಪಯೋಗಿಸಲಾಗುತ್ತಿದೆ. ಬರುವ ದಿನಗಳಲ್ಲಿ ಇದನ್ನು ಖಾಸಗಿ ಹೋಟೆಲ್ ಗಳಿಗೂ ನೀಡುವ ಚಿಂತನೆ ಮಹಾನಗರ ಪಾಲಿಕೆ ಮಾಡುತ್ತಿದೆ
ತ್ಯಾಜ್ಯವನ್ನು ಗೊಬ್ಬರವಾಗಿ ಬಳಸುವ ಪ್ರಯತ್ನ ಎಲ್ಲಾ ಕಡೆ ನಡೆಯುತ್ತಿದ್ದು ಶಿವಮೊಗ್ಗ ಮಹಾನಗರ ಪಾಲಿಕೆ ಒಂದು ಹೆಜ್ಜೆ ಮುಂದಿಟ್ಟಿದ್ದು ಕಸವನ್ನು ಗ್ಯಾಸ್ ಆಗಿ ಪರಿವರ್ತಿಸಿ ಅಡಿಗೆಗೆ ಇಂಧನವಾಗಿ ಬಳಸುತ್ತಿರುವುದು ಮಾದರಿಯಾಗಿದೆ.

ಕರ್ನಾಟಕ ಸರ್ಕಾರ 2017 ರಲ್ಲಿ ಸೇವೆಯ ರೂಪದಲ್ಲಿ ಅನುದಾನಿತ ಕಡಿಮೆ ವೆಚ್ಚದಲ್ಲಿ ಆಹಾರ ನೀಡಬೇಕು ಎಂದು ಇಂದಿರಾ ಕ್ಯಾಂಟೀನ್ ಗಳನ್ನು ರಾಜ್ಯದಾದಂತ ಆರಂಭಿಸಿತು ಸಾರ್ವಜನಿಕರಿಗೆ ಸೇವಾ ಮಾದರಿಯಲ್ಲಿ ಇದನ್ನು ನೀಡುವ ಚಿಂತನೆಯೊಂದಿಗೆ ಮೊದಲು ಬೆಂಗಳೂರಿನಲ್ಲಿ ಆರಂಭ ಮಾಡಿ ನಂತರ ಕರ್ನಾಟಕದಾದ್ಯಂತ ಇದನ್ನು ವಿಸ್ತರಿಸಿತು

ಶಿವಮೊಗ್ಗ ನಗರದ ಜನತೆಗೆ ಇಂದಿರಾ ಕ್ಯಾಂಟೀನ್ ನಲ್ಲಿ ನೀಡುತ್ತಿರುವ ಆಹಾರ ಶುಚಿ-ರುಚಿಯಾಗಿದ್ದು ಜನತೆ ಇದರ ಫಲವಂತಿಕೆಯನ್ನು ಯಶಸ್ವಿಯಾಗಿ ಪಡೆಯುತ್ತಿರುವುದಲ್ಲದೆ ತ್ಯಾಜ್ಯದ ಬಳಕೆಯಿಂದ ಪರಿಸರ ಸ್ನೇಹಿ ಗ್ಯಾಸ್ ತಯಾರಿಸುತ್ತಿರುವುದು ಜನಮನ ಸೆಳೆದಿದೆ

ಕವಿತಾ ಯೋಗಪ್ಪನವರ್
ಆಯುಕ್ತರು ಶಿವಮೊಗ್ಗ ಮಹಾನಗರ ಪಾಲಿಕೆ ಶಿವಮೊಗ್ಗ

ಹಸಿ ಕಸ ಬಳಸಿ ಬಯೋ ಮಿಥಲೇಶನ್ ಗ್ಯಾಸ್ ಉತ್ಪಾದನೆ ಮಾಡಿ ಇಂದಿರಾ ಕ್ಯಾಂಟೀನ್ ಅಡಿಗೆಗೆ ಬಳಕೆ : ಕವಿತಾ ಯೋಗಪ್ಪನವರ್ https://www.newsnext.co/produce-bio-methylation-gas-using-raw-garbage-for-use-in-indira-canteen-kitchen-kavita-yogappanavar/

ಶಿವಮೊಗ್ಗ ನಗರದಲ್ಲಿ 3,22,000 ಜನಸಂಖ್ಯೆ ಇದ್ದು ಪ್ರತಿದಿನ ಮನೆ ಮನೆಯಿಂದ ಒಟ್ಟು 170 ಟನ್ ಕಸ ಸಂಗ್ರಹಣೆಯಾಗುತ್ತದೆ ಇದರಲ್ಲಿ ಎರಡು ಟನ್ ಹಸಿ ಕಸ ಬಳಸಿ ಗ್ಯಾಸ್ ಉತ್ಪಾದನೆ ಮಾಡಿ ಇಂದಿರಾ ಕ್ಯಾಂಟೀನ್ ಅಡಿಗೆಗೆ ಬಳಸುತ್ತಿದ್ದೇವೆ ನಮ್ಮ ಈ ಪ್ರಯತ್ನ ಯಶಸ್ವಿಯಾಗಿ ಮುನ್ನಡೆದಿದೆ

ನವೀನ್ ಪರಿಸರವಾದಿ ಶಿವಮೊಗ್ಗ ಇಂದಿರಾ ಮಾಸ್ಟರ್ ಕ್ಯಾಂಟೀನ್ ನಲ್ಲಿ ನಗರದಲ್ಲಿ ಸಿಗುವ ಹಸಿ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನೆ ಮಾಡಿ ಅಡುಗೆ ಮಾಡುತ್ತಿರುವುದು ಸಂತಸ ತಂದಿದೆ ಈ ರೀತಿ ಎಲ್ಲಾ ಹೋಟೆಲ್ ಗಳು ಇನ್ನಿತರ ಕೇಂದ್ರಗಳಲ್ಲಿ ಪರಿಸರ ಸ್ನೇಹಿ ಇಂಧನವನ್ನು ಉಪಯೋಗ ಮಾಡುವುದರಿಂದ ಪರಿಸರವನ್ನು ಕಾಪಾಡಬಹುದು

ಶಿವಮೊಗ್ಗ ಮಹಾನಗರ ಪಾಲಿಕೆ ತ್ಯಾಜ್ಯವನ್ನು ಬಳಸಿ ಅದರಿಂದ ಗ್ಯಾಸ್ ತಯಾರಿಸಿ ಇಂದಿರ ಕ್ಯಾಂಟೀನ್ ಅಡಿಗೆ ತಯಾರಿಕೆಯ ಇಂಧನಕ್ಕಾಗಿ ಇದನ್ನು ಬಳಸುತ್ತಿದೆ ಈ ಗ್ಯಾಸ್ ಬಳಕೆಯಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಪ್ರಯತ್ನ ಯಶಸ್ವಿಯಾಗಿದೆ ಮಹಾನಗರ ಪಾಲಿಕೆಗೆ ಧನ್ಯವಾದಗಳು

ಪ್ರವೀಣ್ ಕಾಲೇಜು ವಿದ್ಯಾರ್ಥಿ, ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಇಂದಿರಾ ಕ್ಯಾಂಟೀನ್ಗಳಿಗೆ ತ್ಯಾಜ್ಯದಿಂದ ತಯಾರಾದ ಗ್ಯಾಸಿನ ಉಪಯೋಗಿಸುವಿಕೆಯಿಂದ ದಿನನಿತ್ಯದ ಆಹಾರವನ್ನು ತಯಾರಿಸುತ್ತಿದೆ ಇದು ತುಂಬಾ ಒಳ್ಳೆಯ ಬೆಳವಣಿಗೆ ಕೇಂದ್ರದ ಮಹತ್ವಕಾಂಕ್ಷೆ ಯೋಜನೆ ಸ್ವಚ್ಛ ಭಾರತ ಯೋಜನೆಯ ಪರಿಣಾಮಕಾರಿಯಾದ ಚಿಂತನೆಯಲ್ಲಿ ನಡೆದಿದೆ

ದೇವರಾಜ್ ಅಡುಗೆ ತಯಾರಕರು ಮುಖ್ಯ ಆಹಾರ ಉತ್ಪಾದನಾ ಕೇಂದ್ರ ಇಂದಿರಾ ಕ್ಯಾಂಟೀನ್ ಶಿವಮೊಗ್ಗ:

ತ್ಯಾಜ್ಯದ ಬಳಕೆಯಿಂದ ಗ್ಯಾಸ್ ಮೂಲಕ ಇಂಧನ ಬಳಸಿ ಶುಚಿ ರುಚಿಯಾದ ಆಹಾರವನ್ನು ತಯಾರಿಸಿ ಕೊಡುತ್ತಿದ್ದೇವೆ. ಇದರಿಂದ ವೆಚ್ಚವು ಶೂನ್ಯವಾಗಿದೆ ತ್ಯಾಜ್ಯದ ಸದ್ಬಳಕೆಯಾಗಿದೆ ಒಂದು ಮಾದರಿಯ ಕೆಲಸವನ್ನು ಮಹಾನಗರ ಪಾಲಿಕೆ ಮಾಡಿದೆ
ಪ್ರತಿನಿತ್ಯ ನಾವು ಇಂದಿರಾ ಕ್ಯಾಂಟೀನ್ಗಳಿಗೆ ಸರಬರಾಜು ಮಾಡುವ ಆಹಾರ ಅತ್ಯಂತ ಉತ್ಕೃಷ್ಟವಾಗಿದ್ದು , ತ್ಯಾಜ್ಯದ ಬಳಕೆ ಮಾದರಿಯಾಗಿದೆ

error: Content is protected !!