ಶಿವಮೊಗ್ಗ, ಏ.6 :ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಶಿವಮೊಗ್ಗ ಹಾಗೂ ವಿಕಲಚೇತನರ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಏ.04 ರಂದು ಭದ್ರಾವತಿ ತಾಲೂಕಿನ ಅಗರದಹಳ್ಳಿ ಗ್ರಾಮದ ‘ಜೀವನ ಕಿರಣ ಓಲ್ಡ್ ಏಜ್ ಹೋಮ್’ ನಲ್ಲಿ ಲೋಕಸಭಾ ಚುನಾವಣೆ 2024ರ ಮತದಾನ ಜಾಗೃತಿ ಕಾರ್ಯಕ್ರಮವನ್ನು ವಿನೂತನವಾಗಿ ಆಚರಿಸಲಾಯಿತು.
ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮದ್ ಪರ್ವೀಜ್ ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಲು 85 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಶೇಕಡ 40 ಅಧಿಕ ಅಂಗವಿಕಲತೆ ಹೊಂದಿರುವ ವಿಶೇಷ ವಿಕಲಚೇತನರಿಗಾಗಿ ಮನೆಯಿಂದಲೇ ಮತದಾನ ಚಲಾಯಿಸುವ ಅವಕಾಶ ನೀಡಿದ್ದು ಅರ್ಜಿ ನಮೂನೆ 12 ಡಿ ಅಂಚೆ ಮತದಾನದ ಮಾಡಬಹುದು.
ಮತದಾರರ ನೋಂದಣಿ ಹಾಗೂ ತಿದ್ದುಪಡಿಗೆ ಮಾಡಲು ಏಪ್ರಿಲ್ 9 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು, ಸೇರ್ಪಡೆ ಗಾಗಿ ನಮೂನೆ 6 ಹಾಗೂ ಯಾವುದೇ ತಿದ್ದುಪಡಿಗಳಿಗಾಗಿ ನಮೂನೆ 8 ಅನ್ನು ಸಲ್ಲಿಸುವಂತೆ ತಿಳಿಸಿದ ಅವರು ವೋಟರ್ ಹೆಲ್ಪ್‍ಲೈನ್ ಆಪ್, ಸಿ-ವಿಜಿಲ್ ಆಪ್ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮಾತನಾಡಿ, ಚುನಾವಣಾ ಆಯೋಗದಿಂದ ಹಿರಿಯ ನಾಗರಿಕರಿಗಾಗಿ ಇರುವಂತಹ ಮತದಾನದ ಸೇವಾ ಸೌಲಭ್ಯಗಳ ಮಾಹಿತಿ ನೀಡಿದರು.
ನಂತರ ಹಿರಿಯ ನಾಗರೀಕರಿಗೆ ‘ನಾ ಭಾರತ’ ಎಂಬ ಚುನಾವಣಾ ಗೀತೆ ಗಾಯನ, ಪಾಸಿಂಗ್ ದಿ ಬಾಲ್ ಒಳಾಂಗಣ ಕ್ರೀಡೆಯನ್ನು ಆಡಿಸಿ, ಚುನಾವಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿರೇಖಾ, ಸಿಆರ್‍ಪಿ ರಂಗನಾಥ್, ವೃದ್ಧಾಶ್ರಮದ ಹಿರಿಯ ನಾಗರಿಕರು, ಕಚೇರಿ ಸಿಬ್ಬಂದಿ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಸಿಬ್ಬಂದಿ ವರ್ಗ ಮತ್ತು ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾ ಮಕ್ಕಳು ಹಾಜರಿದ್ದರು.
