ಶಿವಮೊಗ್ಗ ಏ.16 ಇಂದು ಭದ್ರಾವತಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಗೃಹ ರಕ್ಷಕ ದಳ, ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಎನ್.ಸಿ.ಸಿ., ಎನ್.ಎಸ್.ಎಸ್. ವಿದ್ಯಾರ್ಥಿಗಳು ಸೇರಿ ವಿಎಸ್ ಎಲ್ ಗೇಟ್ ನಿಂದ ಪೆರೇಡ್ ನಲ್ಲಿ ಸಾಗಿ, ಕನಕ ಮಂಟಪದಲ್ಲಿ ಸ್ವೀಪ್ ಶಿವಮೊಗ್ಗ ಮೇ 7 ಆಕಾರದಲ್ಲಿ ಚಿತ್ತಾರ ಮೂಡಿಸಿ, ಅತ್ಯಾಕರ್ಷಕವಾಗಿ
ಮೊಬೈಲ್ ಟಾರ್ಚ್ ಗಳನ್ನು ಆಕಾಶಕ್ಕೆ ತೋರಿಸುತ್ತಾ ಸ್ವೀಪ್ ಆಕೃತಿ ಮೂಡಿಸಿ ಎಲ್ಲರ ಗಮನ ಸೆಳೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಈ ವೇಳೆ ಜಿ.ಪಂ. ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಚುನಾವಣೆ ದೊಡ್ಡ ಪರ್ವ. ಮತದಾನ ನಮ್ಮೆಲ್ಲರ ಹಕ್ಕು.ತಾವು ಮತದಾನ ಮಾಡಿ ಅಕ್ಕಪಕ್ಕದವರೂ ಮತದಾನ ಮಾಡುವಂತೆ ತಿಳಿಸಬೇಕು. ಶೇ.೧೦೦ ರಷ್ಟು ಮತದಾನ ಮಾಡುವಂತೆ ಮನವಿ ಮಾಡಿದರು.
ಭದ್ರಾವತಿಯಲ್ಲಿ ಈ ಬಾರಿ ಮತದಾನದ ಪ್ರಮಾಣ ಹೆಚ್ಚಬೇಕು ಎಂದರು.
ಶಿವಮೊಗ್ಗ ಎಸಿ ಸತ್ಯನಾರಾಯಣ ಮಾತನಾಡಿ, ಆಸೆ, ಆಮಿಷಗಳಿಗೆ ಗುರಿಯಾಗದೆ, ನಿರ್ಭೀತವಾಗಿ ಮತದಾನ ಮಾಡುವ ಮೂಲಕ
ಸುಭದ್ರ ಪ್ರಜಾಪ್ರಭುತ್ವ ರೂಪಿಸಲು ಅನುವುಮಾಡಿಜೊಡಬೇಕು ಎಂದರು.
ಜಿ.ಪಂ. ಸಿಪಿಒ ಗಾಯತ್ರಿ ಮತದಾನ ನಮ್ಮೆಲ್ಲರ ಸಮಾನ ಹಕ್ಕು ಮತದಾನ ಮಾಡಲು ಮರಿಯಬೇಡಿ ಎಂದರು.
“ನಾವು ಶಿವಮೊಗ್ಗ-ಭದ್ರಾವತಿ ಜನ
ಮಾಡೇ ಮಾಡ್ತಿವಿ ಮತದಾನ”* ಎಂಬ ಘೋಷಣೆ ಕೂಗಿದರು. ಚುನಾವಣಾ ಪರ್ವ ದೇಶದ ಗರ್ವ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಎಲ್ಲರನ್ನು ಮತದಾನ ಮಾಡಲು ಪ್ರೇರೇಪಿಸಿದರು.
ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೀಜ್ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು.
ಚುನಾವಣೆ ಗೀತೆ ಗಾಯನ ಮಾಡಲಾಯಿತು.
ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ.ಚೇತನ್, ಭದ್ರಾವತಿ ಇಓ ಗಂಗಣ್ಣ, ನಗರಸಭೆ ಆಯುಕ್ತರಾದ ಚನ್ನಪ್ಪ, ಸುಹಾಸಿನಿ, ಬಿಇಓ, ಇತರೆ ಇಲಾಖೆ ಅಧಿಕಾರಿಗಳು, ಸ್ವೀಪ್ ತಂಡದವರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.