ಶಿವಮೊಗ್ಗ 29. ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಪ್ ಸಮಿತಿ ಸಾಗರ ನಗರಸಭೆ ಇವರ ವತಿಯಿಂದ ನಗರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 46, 47, 48, 49 (ಗಂಧದ ಸಂಕೀರ್ಣ ಮತ್ತು ಗುರುಕುಲ ತರಬೇತಿ ಕೇಂದ್ರ) ರ ಭಾಗಗಳಲ್ಲಿನ ಸಾರ್ವಜನಿಕರು ಮತ್ತು ಸ್ವ ಸಹಾಯ ಸಂಘದ ಸದಸ್ಯರುಗಳಿಗೆ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿಗಳು, ಸ್ವೀಪ್ ಸಮಿತಿ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.