ವರ್ಜಿನಿಯಾ ತಂಬಾಕು ಭಾರತದ ಒಂದು ಪ್ರಮುಖ ವಾಣಿಜ್ಯ ಬೆಳೆ. ಕರ್ನಾಟಕದಲ್ಲಿ ಬೆಳೆಯುವ ವರ್ಜಿನಿಯಾ ತಂಬಾಕು ಉತ್ತಮ ಗುಣಮಟ್ಟದ್ದಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೈಸೂರು ಶೈಲಿಯ ತಂಬಾಕು ಎಂದು ತನ್ನದೇ ವಿಶಿಷ್ಠ ಛಾಪನ್ನು ಮೂಡಿಸಿದೆ. ಈ ಬೆಳೆ ಕೆಂಪು ಮಣ್ಣುಗಳಲ್ಲಿ ಬೆಳೆಯಲು ಸೂಕ್ತವಾಗಿದ್ದು, ಅದರಲ್ಲೂ ಮರಳು, ಮರಳು ಮಿಶ್ರಿತ ಗೋಡು ಮತ್ತು ಮರಳು ಮಿಶ್ರಿತ ಜೇಡಿಮಣ್ಣು ಹೆಚ್ಚು ಸೂಕ್ತ. ವರ್ಜಿನಿಯಾ ತಂಬಾಕು ರಾಜ್ಯದ ಅರೆಮಲೆನಾಡು ಕೃಷಿ ವಲಯ (ವಲಯ-7) ದ ಪ್ರದೇಶಗಳಾದ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಶಿಕಾರಿಪುರ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಹಾಸನ ಜಿಲ್ಲೆಯ ಅರಕಲಗೂಡು, ಪಿರಿಯಾಪಟ್ಟಣ ಮೈಸೂರು ಜಿಲ್ಲೆಯ ಹುಣಸೂರು, ಹೆಚ್.ಡಿ.ಕೋಟೆ ತಾಲೂಕುಗಳಲ್ಲಿ ಅಧಿಕ ಲಾಭ ತರುವ ವಾಣಿಜ್ಯ ಬೆಳೆಯಾಗಿ ಪ್ರಚಲಿತದಲ್ಲಿದೆ.
ವರ್ಜಿನಿಯಾ ತಂಬಾಕನ್ನು ಹದ ಮಾಡುವ ಪದ್ಧತಿಯು ಕೌಶಲ್ಯ ಮತ್ತು ತಾಂತ್ರಿಕತೆಯಿಂದ ಕೂಡಿದ್ದು ತಂಬಾಕಿನ ಗುಣಮಟ್ಟದ ಮೇಲೆ ಮಹತ್ತರವಾದಂತಹ ಪ್ರಭಾವವನ್ನು ಬೀರುತ್ತದೆ. ಆದ್ದರಿಂದ ಶಾಖದಿಂದ ಹದ ಮಾಡುವ ಈ ತಂಬಾಕಿನಲ್ಲಿ ಉತ್ತಮ ಗುಣಮಟ್ಟ ಪಡೆಯಲು ಕೆಲವು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ತಂಬಾಕು ಎಲೆಗಳ ಕೊಯ್ಲು
ಸಸಿಗಳನ್ನು ನಾಟಿ ಮಾಡಿದ ಸುಮಾರು ಎರಡು ತಿಂಗಳುಗಳಲ್ಲಿ ಬಲಿತ ಎಲೆಗಳನ್ನು ಮುರಿಯಲು ಪ್ರಾರಂಭಿಸಬಹುದು. ಬಲಿತ ಎಲೆಗಳು ತಿಳಿ ಹಸಿರಾಗಿದ್ದರೆ, ಬಲಿಯದ ಎಲೆಗಳು ಹೆಚ್ಚು ಹಸಿರಾಗಿರುತ್ತವೆ. ತುಂಬಾ ಹಣ್ಣಾಗಿರುವ ಎಲೆಗಳು ಹಳದಿ ಬಣ್ಣದ್ದಾಗಿರುತ್ತದೆ. ಬಲಿಯದ ಎಲೆಗಳನ್ನು ಮುರಿಯುವುದಾಗಲಿ ಅಥವಾ ಎಲೆ ಮುರಿಯುವುದನ್ನು ನಿಧಾನ ಮಾಡಿ ಎಲೆಗಳು ತುಂಬಾ ಹಣ್ಣಾಗಲು ಬಿಡುವುದಾಗಲಿ ಮಾಡಿದರೆ ಹದ ಮಾಡಿದ ತಂಬಾಕಿನ ಗುಣಮಟ್ಟ ಸೂಕ್ತವಾಗಿರುವುದಿಲ್ಲ.
ಪ್ರತಿ ಬಾರಿ ಎಲೆ ಮುರಿಯುವಾಗಲೂ ಪ್ರತಿ ಗಿಡದ ಬುಡದಿಂದ 2-3 ಬಲಿತ ಹಾಗೂ ಹದವಾದ ಎಲೆಗಳನ್ನು ಮುರಿಯಬೇಕು ಮತ್ತು ಹೆಚ್ಚು ತಡಮಾಡದೇ ಎಲೆಕಟ್ಟುವ ಷೆಡ್ಡುಗಳಿಗೆ ಸಾಗಿಸಬೇಕು. ಎಲೆಗಳನ್ನು ಬಿಸಿಲಿನಲ್ಲಿ ಹೆಚ್ಚು ಹೊತ್ತು ಬಿಟ್ಟರೆ ಎಲೆಗಳು ಬಾಡಿ, ತೇವಾಂಶ ಕಡಿಮೆಯಾಗಿ, ಸುಟ್ಟ ಕಲೆಗಳು ಉಂಟಾಗಿ ಎಲೆಗಳನ್ನು ಹದ ಮಾಡುವಾಗ ಗುಣಮಟ್ಟದ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ.ಹವಾಗುಣದ ಆಧಾರದ ಮೇರೆಗೆ ಸಾಮಾನ್ಯವಾಗಿ 5-8 ದಿನಗಳ ಅಂತರದಲ್ಲಿ ಒಟ್ಟು 6-10 ಬಾರಿ ಎಲೆಗಳನ್ನು ಮುರಿಯಬಹುದು. ಎಲೆಗಳನ್ನು ಮುರಿಯುವಾಗ, ಸಾಗಿಸುವಾಗ ಮತ್ತು ಮುಂದೆ ಅವುಗಳನ್ನು ಎಲೆ ಕಟ್ಟುವ ಷೆಡ್ಡುಗಳಲ್ಲಿ ಜೋಡಿಸುವಾಗ ಎಲೆಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಎಲೆಗಳನ್ನು ಮುರಿದ ನಂತರ ಅವುಗಳನ್ನು ತೆಳುವಾಗಿ ಜೋಡಿಸಿ, ಕರೆ (ಬಿದಿರು)ಕಡ್ಡಿಗಳಿಗೆ ಎರಡರಿಂದ ಮೂರು ಎಲೆಗಳನ್ನು ಜೊತೆ ಮಾಡಿ ಜಡೆ ಹೆಣೆಯುವ ರೀತಿಯಲ್ಲಿ ಕಟ್ಟಿ ಶಾಖದಿಂದ ಹದಮಾಡುವ ಕೊಠಡಿ (ಬಾರ್ನ್)ಯಲ್ಲಿ ವಿವಿಧ ಅಂತಸ್ತುಗಳಲ್ಲಿ ತೂಗು ಹಾಕುವುದು. ಎಲೆಗಳನ್ನು ಮುರಿಯುವಾಗ ಎಚ್ಚರವಹಿಸಿ ಬಲಿತ ಎಲೆಗಳನ್ನೇ ಮಾತ್ರ ಮುರಿದರೆ ಎಲೆಗಳನ್ನು ಕಟ್ಟುವಾಗ ವಿಂಗಡಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಇಲ್ಲದಿದ್ದಲ್ಲಿ ಎಲೆಗಳನ್ನು ಬಣ್ಣದ ಆಧಾರದ ಮೇಲೆ ಹಸಿರು, ತಿಳಿಹಸಿರು ಮತ್ತು ಹಳದಿ ಬಣ್ಣಗಳುಳ್ಳ ಎಲೆಗಳನ್ನಾಗಿ ವಿಂಗಡಿಸಿ ಕರೆ (ಬಿದಿರು) ಕಡ್ಡಿಗಳಲ್ಲಿ ಬೇರೆ ಬೇರೆಯಾಗಿ ಕಟ್ಟಿ ಬಾರ್ನಿನಲ್ಲಿ ತೂಗು ಹಾಕುವಾಗ ಅವುಗಳನ್ನು ಕ್ರಮವಾಗಿ ಹಸಿರು ಎಲೆಗಳನ್ನು ಮೇಲಿನ, ತಿಳಿಹಸಿರು ಎಲೆಗಳನ್ನು ಮಧ್ಯದ ಮತ್ತು ಹಳದಿ ಬಣ್ಣದ ಎಲೆಗಳನ್ನು ಕೆಳಗಿನ ಅಂತಸ್ತುಗಳಲ್ಲಿ ಜೋಡಿಸಬೇಕು. 13 ಅಡಿ X 13 ಅಡಿ X 13 ಅಡಿ (ಉದ್ದ X ಅಗಲ X ಎತ್ತರ) ಯ ಬಾರ್ನಿನಲ್ಲಿ 275 ರಿಂದ 300 ಕೋಲುಗಳನ್ನು ಹಾಕಬಹುದು. 16 X 24 X 13 ಬ್ಯಾರನ್‍ನಲ್ಲಿ 600 ರಿಂದ 720 ಕೋಲುಗಳನ್ನು ಹಾಕಬಹುದು.

ಶಾಖದಿಂದ ಹದಮಾಡುವುದು
ಬಿದಿರು ಕಡ್ಡಿಗಳಿಗೆ ಕಟ್ಟಿದ ಎಲೆಗಳನ್ನು ಹದ ಮಾಡಲು ಜೋಡಿಸುವಾಗ ಎಲೆಗಳು ಒಣಗಲು ಅನುಕೂಲವಾಗುವಂತೆ ಒಂದು ಕರೆ (ಬಿದಿರು) ಕಡ್ಡಿಯಿಂದ ಇನ್ನೊಂದು ಕರೆ ಕಡ್ಡಿಯ ನಡುವೆ ಸಾಕಷ್ಟು ಜಾಗವನ್ನು ಬಿಟ್ಟು ಜೋಡಿಸಬೇಕು. ಹದ ಮಾಡುವ ಕೊಠಡಿಯ ಬಾಗಿಲು, ಕೆಳಭಾಗದ ಮತ್ತು ಮೇಲ್ಭಾಗದ ಕಿಟಕಿಗಳನ್ನು ಗಾಳಿಯು ಒಳಗೆ ಬಾರದಂತೆ ಮುಚ್ಚಬೇಕು. ಹದ ಮಾಡುವಾಗ ನಡೆಯುವ ಇಡೀ ಕಾರ್ಯದ ವಿಧಾನವನ್ನು ನಾಲ್ಕು ಹಂತಗಳಾಗಿ ವಿಂಗಡಿಬಹುದು.

  1. ಹಳದೀಕರಣ
  2. ಬಣ್ಣ ಸ್ಥಿರೀಕರಣ
  3. ಎಲೆ ಒಣಗುವಿಕೆ
  4. ಎಲೆಯ ದಿಂಡು ಒಣಗುವಿಕೆ

ಹಳದೀಕರಣ
ಈ ಹಂತದಲ್ಲಿ ಎಲೆಗಳಲ್ಲಿರುವ ತೇವಾಂಶ ಹೊರಹೋಗುತ್ತದೆ. ಕಟಾವು ಮಾಡಿದಾಗ ತೇವಾಂಶವು ಶೇ.80-85 ರಷ್ಟು ಇರುತ್ತದೆ. ಇದಕ್ಕಿಂತ ಕಡಿಮೆ ತೇವಾಂಶವಿರುವ ಎಲೆಗಳನ್ನು ಕಟಾವು ಮಾಡಿ ಹಳದಿ ಬಣ್ಣಕ್ಕೆ ತರಲು ಪ್ರಯತ್ನ ಪಟ್ಟರೆ ಎಲ್ಲ ಎಲೆಗಳೂ ಸರಿಯಾಗಿ ಬಣ್ಣ ಪಡೆಯುವುದಿಲ್ಲ. ಎಲೆಗಳು ಸಮನಾಗಿ ಹಳದಿ ಬಣ್ಣಕ್ಕೆ ಬರಬೇಕಾದರೆ, ಕೆಳಗಿನ ಅಂತಸ್ತುಗಳಲ್ಲಿರುವ ಶೇ. 50 ರಷ್ಟು ಎಲೆಗೆ ಹಳದಿ ಬಣ್ಣ ಬರುವವರೆಗೂ 32 ಡಿಗ್ರಿ ಸಿ (90 ಡಿಗ್ರಿ ಎಫ್) ಶಾಖ ಕೊಡಬೇಕು. ನಂತರ ಎಚ್ಚರಿಕೆಯಿಂದ 38 ಡಿಗ್ರಿ ಸಿ‌ (100 ಡಿಗ್ರಿ ಎಫ್) ಗೆ ಶಾಖ ತಲುಪುವವರೆಗೂ ಪ್ರತಿ ಗಂಟೆಗೆ 20 ಅ ನಷ್ಟು ಶಾಖ ಹೆಚ್ಚಿಸುತ್ತಾ ಹೋಗಬೇಕು.
ಕೆಳಗಿನ ಅಂತಸ್ತುಗಳಲ್ಲಿನ ಎಲೆಗಳ ತುದಿಯು ಒಣಗದಂತೆ ಜಾಗ್ರತವಹಿಸಬೇಕು. ಅವು ಹಾಗೆ ಒಣಗಲು ಪ್ರಾರಂಭಿಸುವುದು ಎಲೆ ಒಣಗುವಿಕೆಯ ಮೊದಲ ಸೂಚನೆ. ಹೊರಗಡೆಯ ವಾತಾವರಣದ ತೇವಾಂಶ ಕಡಿಮೆ ಇದ್ದರೆ, ಹದ ಮಾಡುವ ಕೊಠಡಿಯ ತೇವಾಂಶ ನಷ್ಟವಾಗುವುದನ್ನು ಕಡಿಮೆ ಮಾಡುವುದಕ್ಕೊಸ್ಕರ ಶಾಖ ಹೆಚ್ಚಿಸಬಾರದು. ಎಲೆಗಳು ನಿಂಬೆ ಹಳದಿ ಬಣ್ಣ ಪಡೆದ ಮೇಲೂ ಇನ್ನು ಸ್ವಲ್ಪ ಹಸಿರು ಛಾಯೆ ಉಳಿದಾಗ ಹಳದೀಕರಣ ಕಾರ್ಯ ಮುಗಿಯಿತು ಎಂದರ್ಥ. ಸಾಮಾನ್ಯವಾಗಿ ಈ ಕಾರ್ಯ 32-40 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.
ಬಣ್ಣ ಸ್ಥಿರೀಕರಣ ಮತ್ತು ಎಲೆ ಒಣಗಿಸುವಿಕೆ
ಈ ಹಂತದಲ್ಲಿ ಹದ ಮಾಡುವ ಕೊಠಡಿಯೊಳಕ್ಕೆ ಹಂತಹಂತವಾಗಿ ಕೆಳಗಿನ ಕಿಟಕಿಯ ಮೂಲಕ ಗಾಳಿಯಾಡುವಂತೆ ಮಾಡಬೇಕು ಮತ್ತು ಶಾಖವನ್ನು ಪ್ರತಿ ಗಂಟೆಗೆ 3ಡಿಗ್ರಿ C ನಷ್ಟು ಹೆಚ್ಚಿಸಬೇಕು. ಎಲೆಯ ತುದಿಗಳು ಒಣಗುವವರೆಗೆ 50 ಡಿಗ್ರಿ C (122 ಡಿಗ್ರಿ F) ರಿಂದ 52 ಡಿಗ್ರಿ F (126 ಡಿಗ್ರಿ F) ನಷ್ಟು ಶಾಖವನ್ನು ಉಳಿಸಿಕೊಳ್ಳಬೇಕು. ಬಣ್ಣ ಸ್ಥಿರಗೊಳಿಸುವ ಕಾಲದಲ್ಲಿ ತೇವಾಂಶ ಸಾಮಾನ್ಯವಾಗಿ ಶೇ.70 ರಿಂದ 75 ರ ಮಟ್ಟದಲ್ಲಿರಬೇಕು. ಕೆಳಗಿನ ಅಂತಸ್ತುಗಳ ಎಲೆಗಳ ತುದಿಗಳು ಒಣಗುತ್ತಿರುವಾಗ ಮೇಲಿನ ಅಂತಸ್ತಿನ ಎಲೆಗಳು ಶೇ.50 ಕ್ಕಿಂತ ಕಡಿಮೆ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅವೂ ಸಮನಾಗಿ ಹಳದಿ ಬಣ್ಣಕ್ಕೆ ತಿರುಗುವವರೆಗೂ ಅದೇ ಪ್ರಮಾಣದಲ್ಲಿ ಗಾಳಿಯನ್ನು ನಿಯಂತ್ರಿಸುತ್ತಾ ಶಾಖವನ್ನು ನಿಧಾನವಾಗಿ ಹೆಚ್ಚಿಸಬೇಕು. ಎಲೆಗಳ ತುದಿಗಳು ಒಣಗಲು ಶುರುವಾದಾಗ ಹೆಚ್ಚು ಗಾಳಿಯಾಡುವಂತೆ ಮಾಡಿ ಶಾಖವು 60 ಡಿಗ್ರಿ C (140 ಡಿಗ್ರಿ F ) ಗೆ ಬರುವವರೆಗೂ ಗಂಟೆಗೆ 3 ರಿಂದ 40 ಅ ವರೆಗೆ ಶಾಖವನ್ನು ಹೆಚ್ಚಿಸಬೇಕು. ಎಲೆ ಕಟ್ಟಿದ ಕರೆಕಡ್ಡಿಗಳನ್ನು ಕೊಠಡಿಯೊಳಕ್ಕೆ ಹೆಚ್ಚು ತುಂಬಿದರೆ ಮತ್ತು ತಳಭಾಗದ ಕಿಟಕಿಗಳಿಂದ ಗಾಳಿಯು ಕೊಠಡಿಯೊಳಕ್ಕೆ ಹೋಗಲು ಅನುವು ಮಾಡಿಕೊಡುವುದನ್ನು ತಡಮಾಡಿದರೆ ಅಥವಾ ಶಾಖವನ್ನು ಬೇಗನೇ ಹೆಚ್ಚಿಸಿದರೆ ಎಲೆಗಳು ಜುಂಗುಗಟ್ಟುತ್ತವೆ (ಸ್ಟಾಂಜಿಂಗ್).

ಎಲೆ ದಿಂಡು ಒಣಗಿಸುವುದು
ಇದು ಹದ ಮಾಡುವ ಕಾರ್ಯದ ಕೊನೆಯ ಹಂತ. ಈ ಹಂತದಲ್ಲಿ ಎಲೆಯ ಮಧ್ಯದ ದಿಂಡಿನಲ್ಲಿ ಉಳಿದುಕೊಂಡಿರುವ ತೇವಾಂಶವನ್ನು ಹೊರ ತೆಗೆಯಲಾಗುತ್ತದೆ. ಒಮ್ಮೆ ಎಲೆ ಪೂರ್ಣವಾಗಿ ಒಣಗಿತೆಂದರೆ ಶಾಖವನ್ನು 60 ದಿಗ್ರಿ C (140ಡಿಗ್ರಿ F) ರಿಂದ 68 ಡಿಗ್ರಿ C (155 ಡಿಗ್ರಿ F) ಗೆ ನಿಧಾನವಾಗಿ ಹೆಚ್ಚಿಸಬೇಕು. 30 ರಿಂದ 40 ಗಂಟೆಗಳ ಕಾಲ ಕಾವು ನಿಲ್ಲುವಂತೆ ಎಲ್ಲಾ ಕಿಟಕಿಗಳನ್ನು ಮುಚ್ಚಬೇಕು. ಎಲ್ಲಾ ಎಲೆಗಳ ದಿಂಡುಗಳು ಪೂರ್ಣವಾಗಿ ಒಣಗಿದ ಮೇಲೆ ಬೆಂಕಿಯನ್ನು ಆರಿಸಬೇಕು ಮತ್ತು ಮುಟ್ಟಿರುವ ಕಿಟಕಿ ಬಾಗಿಲುಗಳನ್ನು ತೆರೆಯದೇ ಕೊಠಡಿಯನ್ನು ತಣ್ಣಗಾಗಲು ಬಿಡಬೇಕು. ಎಲೆಗಳನ್ನು ಹದ ಮಾಡುವುದಕ್ಕೆ ಸುಮಾರು 100 ರಿಂದ 120 ಗಂಟೆ ಬೇಕು. ಹದ ಮಾಡುವ ಕಾರ್ಯ ಮುಗಿದು ಕೊಠಡಿಯು ತಂಪಾದ ಮೇಲೆ ಹದ ಮಾಡಿದ ಎಲೆಗಳು ತೇವಾಂಶವನ್ನು ಹೀರಿಕೊಂಡು ಮೆದುವಾಗುತ್ತದೆ. ಹದ ಮಾಡಿದ ಕರೆ ಕಡ್ಡಿಗಳನ್ನು ಕೊಠಡಿಯಿಂದ ಹೊರ ತೆಗೆದು ತೇವಾಂಶವು ಎಲ್ಲಾ ಎಲೆಗಳಿಗೂ ಸಮನಾಗಿ ಹರಡುವಂತೆ ಕರೆಕಡ್ಡಿಗಳ ಸಮೇತ, ಎಲ್ಲಾ ಕಡ್ಡಿಗಳನ್ನು ಒಂದರ ಮೇಲೊಂದರಂತೆ ಮೆದೆಯಾಗಿ (ಬಲ್ಕ್) ಜೋಡಿಸಬೇಕು. ಹದ ಮಾಡಿದ ಕೊಠಡಿಯಿಂದ ಕಡ್ಡಿಗಳನ್ನು ಹೊರ ತೆಗೆಯುವಾಗ ಎಲೆಗಳು ಮುಟ್ಟಿದರೆ ಮುರುಮುರು ಶಬ್ದ ಮಾಡುವ ರೀತಿಯಲ್ಲಿದ್ದರೆ ಕೊಠಡಿಯ ಎಲ್ಲಾ ಕಿಟಕಿ ಮತ್ತು ಬಾಗಿಲುಗಳನ್ನು ತೆರೆದು ಒಂದು ರಾತ್ರಿ ಹಾಗೇ ಬಿಡಬೇಕು ಮತ್ತು ಕರೆ ಕಡ್ಡಿಗಳಿಂದ ಎಲೆಗಳನ್ನು ಬಿಚ್ಚಿ ವಿಂಗಡಿಸುವ (ಗ್ರೇಡಿಂಗ್) ಕಾರ್ಯವನ್ನಾದರೂ ಮಾಡಬಹುದು ಅಥವಾ ತೆಳುವಾದ ಗುಡ್ಡೆಯಾಗಿ (ಬಲ್ಕ್) ಇಡಬಹುದು.
ಸಸ್ಯಸ್ಥಾನ ಆಧಾರಿತ ವರ್ಗೀಕರಣ
ವರ್ಜಿನಿಯಾ ತಂಬಾಕಿನ ಎಲೆಗಳನ್ನು ಗಿಡದಲ್ಲಿ ಎಲೆಗಳ ಸ್ಥಾನ, ಗುಣಮಟ್ಟ ಮತ್ತು ಬಣ್ಣವನ್ನು ಆಧರಿಸಿ ವಿಂಗಡಿಸಲಾಗುವುದು, ತಂಬಾಕಿನ ಪ್ರತಿಯೊಂದು ಭಾಗದ ಎಲೆಗಳಿಗೆ ತನ್ನದೇ ಆದ ವಿಶಿಷ್ಠ ಗುಣವಿದ್ದು, ಅವುಗಳ ಭೌತಿಕ ಮತ್ತು ರಾಸಾಯನಿಕ ಸಂಯೋಜನೆ ಮತ್ತು ಧೂಮಪಾನ ಗುಣಗಳಿಗೆ ನೇರ ಸಂಬಂಧ ಹೊಂದಿದೆ. ಗಿಡದಲ್ಲಿ ಎಲೆಗಳು ಬುಡದಿಂದ ತುದಿಯವರೆಗೆ ಒಂದೇ ತೆರೆನಾಗಿರದೇ ಅವು ಭೌತಿಕ ಹಾಗೂ ರಾಸಾಯನಿಕ ಗುಣಲಕ್ಷಣಗಳಲ್ಲಿ ಬೇರೆ ಬೇರೆಯಾಗಿರುತ್ತವೆ. ಎಲೆಗಳ ಸ್ಥಾನ, ಬೆಳವಣಿಗೆ, ಬಣ್ಣ, ರಚನೆ, ಚುಕ್ಕೆ, ಹಾನಿ, ನ್ಯೂನತೆ ಇತ್ಯಾದಿಗಳನ್ನು ಆಧರಿಸಿ ಬೇರೆ ಬೇರೆಯಾಗಿ ವಿಂಗಡಿಸುವುದಕ್ಕೆ ಎಲೆಗಳ ವಿಂಗಡಣೆ/ವರ್ಗೀಕರಣ ಎನ್ನಬಹುದು.
I. ಎಲೆಗಳ ಸ್ಥಾನದ ಆಧಾರದ ಮೇಲೆ ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಬಹುದು.
ಚಿ) ಪಿ (P) – ಕೆಳಗಿನ ಎಲೆಗಳು (Primings)
b) ಎಕ್ಸ್ () – X ಅಗಲವಾದ ವಿಶಾಲವಾದ ಎಲೆಗಳ ಪಂಗಡ, ಗಿಡದ ಮಧ್ಯಭಾಗದ ಎಲೆಗಳು, ಲಗ್ಸ್ ಮತ್ತು
ಕಟರ್ಸ್
ಛಿ) ಎಲ್ (ಐ) – ‘’ X ಎಲೆಗಳ ಮೇಲ್ಭಾಗದ ಎಲೆಗಳು, ಉದ್ದವಾಗಿರುವ ಎಲೆಗಳು
ಜ) ಟಿ (ಖಿ) – ತುದಿ ಎಲೆಗಳು, ಎಲೆಗಳು ಚೂಪಾದ ತುದಿಯನ್ನು ಹೊಂದಿ ಸಣ್ಣದಾಗಿರುತ್ತವೆ.

ಚಿ) P – ಗಿಡದ 2-3 ಎಲೆಗಳನ್ನು ಪ್ರೈಮಿಂಗ್ಸ್ ಎನ್ನಬಹುದು. ಇವು ಆಕಾರದಲ್ಲಿ ಚಿಕ್ಕದಾಗಿರುತ್ತವೆ. ಧೂಳು ಮತ್ತು ಮರಳು ಸೇರಿಕೊಂಡಿರುತ್ತದೆ. ಎಲೆಗಳ ತುದಿ ಮೊಂಡಾಗಿರುತ್ತದೆ. ಇವು ಆಕಾರದಲ್ಲಿ 9 ಅಂಗುಲಕ್ಕಿಂತ ಕಡಿಮೆ ಇರುತ್ತವೆ. ಇದರಲ್ಲಿ ಎಣ್ಣೆಯ ಅಂಶ ಬಹಳ ಕಡಿಮೆ ಇರುತ್ತದೆ.

b) X – ಪ್ರಾಥಮಿಕ ಎಲೆಗಳ ನಂತರದಲ್ಲಿ ಬರುವ ಎಲೆಗಳು ಇವು ವಿಶಾಲವಾಗಿ ಅಗಲವಾಗಿರುತ್ತದೆ. ಪ್ರತಿ ಗಿಡದಲ್ಲಿ ಸುಮಾರು 5-7 ‘ X ’ ಎಲೆಗಳು ಬರುತ್ತವೆ. ಇವುಗಳಲ್ಲಿ ಧೂಳಿನಾಂಶ ಕಡಿಮೆ ಇರುತ್ತದೆ. ’X’ ಎಲೆಗಳು ಸರಿಯಾಗಿ ಬಲಿತ ಪಕ್ವವಾದ ಎಲೆಗಳಾಗಿದ್ದು ತೆಳು ಅಥವಾ ಮಧ್ಯಮ ಮೈಗುಣ ಹೊಂದಿರುತ್ತವೆ. ಎಣ್ಣೆಯ ಅಂಶ ಸೂಕ್ತ ಪ್ರಮಾಣದಲ್ಲಿ ಇರುತ್ತದೆ.

ಛಿ) ಐ – ‘ X ’ ಎಲೆಗಳ ನಂತರ ಸುಮಾರು 8-10 ಎಲೆಗಳವರೆಗೆ ‘ಐ’ ಎಲೆಗಳು ಇರುತ್ತವೆ. ಈ ಭಾಗದ ಎಲೆಗಳು ಬೆಳೆವಣಿಗೆಗೆ ಬರುವ ಸಮಯಕ್ಕೆ ಸರಿಯಾಗಿ ಗಿಡವು, ಹೂ ಬಿಡುವ ಹಂತಕ್ಕೆ ತಲುಪಿರುತ್ತದೆ. ಈ ಸಮಯದಲ್ಲಿ ಕುಡಿ ಮುರಿಯುವಿಕೆ ಹಾಗೂ ಕಂಕುಳು ಮುರಿಯುವಿಕೆಯಿಂದಾಗಿ ಎಲೆಗಳು ಚೆನ್ನಾಗಿ ಬೆಳೆಯಲು ಅನುಕೂಲವಾಗುತ್ತದೆ. ‘ಐ’ ಸ್ಥಾನದ ಎಲೆಗಳು ಚೂಪಾಗಿರುತ್ತವೆ. ಉತ್ತಮ ಬಣ್ಣ ಮತ್ತು ಗುಣಮಟ್ಟ ಹೊಂದಿರುತ್ತದೆ. ಇವು ಅಗಲಕ್ಕಿಂತ ಉದ್ದ ಜಾಸ್ತಿ ಇರುತ್ತವೆ.

ಜ) ಖಿ- ಗಿಡದ ತುದಿಯ 2-4 ಎಲೆಗಳು ಈ ಗುಂಪಿಗೆ ಸೇರುತ್ತವೆ. ಕುಡಿ ಮುರಿದು ಕವಲು ನಿಯಂತ್ರಿಸಿದ ಗಿಡಗಳಲ್ಲಿ ಟಿಪ್ಸ್ ಎಲೆಗಳು ದಪ್ಪವಾಗಿರುತ್ತವೆ. ಈ ಎಲೆಗಳ ತುದಿ ಉದ್ದಕ್ಕಿದ್ದು ಚೂಪಾಗಿರುತ್ತವೆ ಮತ್ತು ಗಾಢ ಬಣ್ಣವನ್ನು ಹೊಂದಿರುತ್ತದೆ. ಅಪಕ್ವ ಸ್ಥಿತಿಯಲ್ಲೇ ಹಣ್ಣಾಗುವುದರಿಂದ ಗುಣಮಟ್ಟ ಕಡಿಮೆ.
ಘಿ ಮತ್ತು ಐ ಗುಂಪಿನ ಎಲೆಗಳಿಂದ ಒಳ್ಳೆಯ ಗುಣಮಟ್ಟದ ಹೆಚ್ಚು ತೂಕವುಳ್ಳ ತಂಬಾಕನ್ನು ಪಡೆಯಬಹುದಾಗಿದೆ.

ಸಸ್ಯಸ್ಥಾನ ಆಧಾರಿತ ವರ್ಗೀಕರಣ

II. ಗುಣಮಟ್ಟ / ಕಿuಚಿಟiಣಥಿ
ಗಿಡದಲ್ಲಿ ಎಲೆಗಳ ಸ್ಥಾನದ ಆಧಾರದ ಮೇಲೆ ಎಲೆಗಳನ್ನು ವರ್ಗಿಕರಿಸಿದ ನಂತರ ಅದರ ಗುಣಮಟ್ಟವನ್ನು ಸಂಖ್ಯೆಯ ಮುಖಾಂತರ ಸೂಚಿಸಲಾಗುತ್ತದೆ (ಒಂದರಿಂದ ಐದು). ಗುಣ ಮಟ್ಟ ಮೂಲಾಂಶಗಳಾದ ಪರಿಪಕ್ವತೆ, ಗಡುತರ, ಬಣ್ಣದ ತೀಕ್ಷ್ಣತೆ, ತೈಲಾಂಶ ಇತ್ಯಾದಿ ಅಲ್ಲದೇ ಈ ಗುಣಮಟ್ಟವನ್ನು ಪ್ರತಿ ಗುಂಪಿಗೆ ಸೇರಿದ ಎಲೆಗಳ ಮೇಲಿರುವ ಚುಕ್ಕಿಗಳು, ಕಲೆಗಳು ಮಚ್ಚೆಗಳು ಮತ್ತು ಇವುಗಳಿಂದಾಗಬಹುದಾದ ಹಾನಿ ನಷ್ಟ ಇತ್ಯಾದಿ ಪ್ರಮಾಣಗಳ ಮೇಲೆ ವಿಂಗಡಿಸಲಾಗುತ್ತದೆ.

ಎಲೆಗಳ ಬಣ್ಣ ವ್ಯಾಪ್ತಿ ಹಾಗೂ ತೀವ್ರತೆಗೆ ತಕ್ಕಂತೆ ನಮೂದಿಸಲಾದ ಐದು ಬಣ್ಣದ ಛಾಯೆಗಳೆಂದರೆ

  1. ನಿಂಬೆ ಹಳದಿ ಬಣ್ಣ – (ಐ)
  2. ಕಿತ್ತಳೆ ಹಣ್ಣಿನ ಬಣ್ಣ –(ಔ)
  3. ಕೆಂಪು ಮಿಶ್ರಿತ ಅಥವಾ ಮಹಾಗನಿ-(ಖ)
  4. ಹಸಿರು –(ಉ)
    ಸಾರಜನಕದ ಕೊರತೆ, ಅತೀ ಹೆಚ್ಚಿನ ಮಳೆ ಇತ್ಯಾದಿ ಕಾರಣಗಳಿಂದ ಸರಿಯಗಿ ಹದಗೊಳ್ಳದೇ ಇದ್ದ ಪಕ್ಷದಲ್ಲಿ ಎಲೆಗಳಲ್ಲಿ ಮೈಗುಣ(ಬಾಡಿ), ಎಣ್ಣೆಯ ಅಂಶ ಕಡಿಮೆ ಇರುವುದು. ಎಲೆಗಳು ನುಣುಪಾಗಿರುವುದು. ಇಂತಹ ಎಲೆಗಳನ್ನು ‘ಜೆ’ಸ್ಟೈಲ್ ಎಂದು ಕರೆಯಲಾಗುತ್ತದೆ.
    ‘ಜೆ’ ಸ್ಟೈಲ್ ಎಲೆಗಳು ಕೆಳಕಂಡಂತೆ ಇರುತ್ತವೆ.
     ಅಪಕ್ವವಾದ ಎಲೆಗಳನ್ನು ಹದ ಮಾಡಿದಾಗ ದೊರೆಯುವ ತೆಳುವಾದ ಚುಕ್ಕೆ ರಹಿತವಾದ ನುಣುಪಾದ ಎಲೆಗಳು
     ಹದ ಮಾಡುವಾಗ ಅಗತ್ಯಕಿಂತ ಹೆಚ್ಚಿನ ತೇವಾಂಶ ಇದ್ದಾಗ ದೊರೆಯುವ ಸ್ಪಂಜಿನ ತರಹ ಮಚ್ಚೆಗಳಿಂದ ಕೂಡಿದ ಎಲೆಗಳು
     ಹದ ಮಾಡುವಾಗ ಕೊನೆ ಹಂತದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಉಷ್ಣಾಂಶ ಇದ್ದುದರ ಪರಿಣಾಮವಾಗಿ ದೊರೆಯುವ ಕಂದು ಮಿಶ್ರಿತ ಒಣಗಿದ ಎಲೆಗಳು

ಈ ತರಹದ ತಂಬಾಕನ್ನು ಆಯಾ ಗುಂಪಿಗೆ ಸೇರಿಸಿ ನಿಜವಾದ ಬಣ್ಣದ ಬದಲು ‘ಜೆ’ ಎಂದು ಸೂಚಿಸಲಾಗುತ್ತದೆ ಉದಾ: ಘಿ1ಎ, ಐ2ಎ ಇತ್ಯಾದಿ

ಸರಿಯಾಗಿ ಹಣ್ಣಾಗದೇ ಪೂರ್ತಿಯಾಗಿ ಹಸಿರಾದ ಎಲೆಗಳನ್ನು ಮುರಿದು ಹದ ಮಾಡಿದಲ್ಲಿ ತಂಬಾಕಿನ ಬಣ್ಣ ಹಸಿರಾಗಿಯೇ ಉಳಿಯುತ್ತದೆ. ಇವನ್ನು ಗ್ರೀನ್ಸ್ ಎನ್ನುತ್ತಾರೆ. ಎಲೆಗಳಲ್ಲಿ ಹಳದಿ ಬಣ್ಣ ಜಾಸ್ತಿ ಇದ್ದು ಹಸಿರು ಬಣ್ಣದ ಛಾಯೆ ಮಾತ್ರ ಇದ್ದಲ್ಲಿ ಅವನ್ನು ಃಉ (ತಳಭಾಗದ ಎಲೆಗಳು) ಅಥವಾ ಖಿಉ (ಮೆಲಿನ ಎಲೆಗಳು) ಎನ್ನುತ್ತಾರೆ ಹಸಿರು ಬಣ್ಣ ಜಾಸ್ತಿ ಇದ್ದು, ಇತರೆ ಬಣ್ಣ ಕಡಿಮೆ ಇದ್ದಾಗ ಃಒಉ ಅಥವಾ ಖಿಒಉ ಎಂದು ವಿಂಗಡಿಸಬಹುದು ಒಂದು ವೇಳೆ ಹದ ಮಾಡಿದ ಮೇಲೂ ಎಲೆ ಪೂರ್ತಿಯಾಗಿ ಹಸಿರು ಬಣ್ಣದಿಂದ ಮಾತ್ರ ಕೂಡಿದಲ್ಲಿ ಅದನ್ನು ಓಆಉ ಎನ್ನಬಹುದು.

ತಂಬಾಕಿನ ಬೇಲ್ ಮಾಡುವುದು
ತಂಬಾಕಿನ ಎಲೆಗಳನ್ನು ವರ್ಗೀಕರಿಸಿದ ನಂತರ ಹರಾಜು ಕಟ್ಟೆಗೆ ತರುವ ಮೊದಲು ಬೇಲ್‍ಗಳಾಗಿ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ 30 ಕೆಜಿಗಿಂತ ಹೆಚ್ಚಿನ 180 ಕೆಜಿಗಿಂತ ಕಡಿಮೆ ಇರುವ ಬೇಲ್ ಮಾಡುವುದು ರೂಢಿಯಲ್ಲಿರುವ ಪದ್ಧತಿ. ಸಾಮಾನ್ಯವಾಗಿ ಬೆಳಗಿನ ಹೊತ್ತು ಬೇಲ್ ಮಾಡುವುದು ಒಳ್ಳೆಯದು. ಇದರಿಂದ ತಂಬಾಕು ಪುಡಿಯಾಗುವುದು ತಪ್ಪುತ್ತದೆ. ಆದರೆ ಜಾಸ್ತಿ ತೇವಾಂಶವಿರುವ ಎಲೆಗಳನ್ನು ಬೇಲ್ ಮಾಡಿದರೆ ಎಲೆಗಳು ಕುಚ್ಚಿ ಬೂಷ್ಟು ಬರುವ ಸಂಭವ ಇರುವದರಿಂದ ಬೇಲ್‍ಗಳು ಮಾರಾಟವಾಗದೇ ಹಾಗೆ ಉಳಿದುಬಿಡಬಹುದು. ಬೇಲ್ ಮಾಡುವಾಗ ಎಲೆಗಳ ತೊಟ್ಟಿನ ಭಾಗವನ್ನು ಒಳಗಡೆ ಇಟ್ಟು ಚೆನ್ನಾಗಿ ತುಳಿಯುವುದು ಉತ್ತಮ. ಚೌಕಾಕಾರದ ಮರದ ಬೇಲ್ ಬಾಕ್ಸ್‍ಗಳನ್ನು ಉಪಯೋಗಿಸುವುದು ಸೂಕ್ತ.

ಮಾರುಕಟ್ಟೆ
ಭಾರತದಲ್ಲಿ ಮೊದಲ ಬಾರಿಗೆ ಎಫ್‍ಸಿವಿ ತಂಬಾಕು ಮಾರಾಟಕ್ಕಾಗಿ 1984 ರಲ್ಲಿ ಕರ್ನಾಟಕ ರಾಜ್ಯದಲ್ಲಿ (ಮೈಸೂರು) ಮತ್ತು 1985 ರಲ್ಲಿ ಆಂಧ್ರಪ್ರದೇಶದಲ್ಲಿ ಹರಾಜು ವ್ಯವಸ್ಥೆಯನ್ನು ಪರಿಚಯಿಸಲಾಯಿತು. ತಂಬಾಕು ಮಂಡಳಿ ಕರ್ನಾಟಕದಲ್ಲಿ 11 ಹರಾಜು ವೇದಿಕೆಗಳನ್ನು ಮತ್ತು ಆಂಧ್ರಪ್ರದೇಶದಲ್ಲಿ 19 ಹರಾಜು ವೇದಿಕೆಗಳನ್ನು ಸ್ಥಾಪಿಸಿ ನಿರ್ವಹಿಸುತ್ತಿದೆ.

ತಂಬಾಕಿನಲ್ಲಿ ಬಿಡ್ಡಿಂಗ್ ಪ್ರಕ್ರಿಯೆಯು ತುಂಬಾ ವೇಗವಾಗಿರುತ್ತದೆ ಮತ್ತು ಪ್ರತಿ ಬೇಲ್ ಮಾರಾಟಕ್ಕೆ ಕೇವಲ 4 ರಿಂದ 5 ಸೆಕೆಂಡುಗಳು ಬೇಕಾಗುತ್ತದೆ. ತಂಬಾಕು ಖರೀದಿದಾರರು ಹರಾಜು ಮಹಡಿಯಲ್ಲಿ ಹಾಜರಾದ ಮೇಲೆ, ತಂಬಾಕು ಬೇಲ್ ಅನ್ನು ಅದರ ಬಣ್ಣ, ವಿನ್ಯಾಸ, ಸುವಾಸನೆ, ತೇವಾಂಶ ಮತ್ತು ಗಾತ್ರ ಇತ್ಯಾದಿಗಳ ಆಧಾರದ ಮೇಲೆ ಬೆಲೆ ನೀಡಬೇಕು. ಹಸ್ತಚಾಲಿತ ಹರಾಜು ವ್ಯವಸ್ಥೆಯಲ್ಲಿ ಎದುರಾಗುವ ದೋಷಗಳನ್ನು ತೆಗೆದುಹಾಕಲು ಎಫ್‍ಸಿವಿ ತಂಬಾಕಿನ ಮಾರಾಟಕ್ಕಾಗಿ ಇ-ಹರಾಜು ವ್ಯವಸ್ಥೆಯು ಪ್ರಾರಂಭವಾಯಿತು.
ಇ-ಹರಾಜು ವ್ಯವಸ್ಥೆಯಲ್ಲಿ ಎಲ್ಲಾ ಮಾರಾಟಗಾರರಿಗೆ ಮತ್ತು ಖರೀದಿದಾರರಿಗೆ ಒಂದು ಎಲೆಕ್ಟ್ರಾನಿಕ್ (Hand Held Terminal (HHT) ಸಾಧನವನ್ನು ಒದಗಿಸಲಾಗಿರುತ್ತದೆ. HHT  ಬಳಕೆಯಿಂದ ಹರಾಜುಗಾರ ಒಂದು ನಿರ್ದಿಷ್ಟ ಲಾಟ್/ ತಂಬಾಕಿನ ಬೇಲ್‍ಗೆ ಬೆಲೆಯನ್ನು ಪ್ರಾರಂಭಿಸುತ್ತಾರೆ. ಈ ಬೆಲೆಯು ಎಲ್ಲಾ ಖರೀದಿದಾರರ ಎಲೆಕ್ಟ್ರಾನಿಕ್ ಸಾಧನದಲ್ಲಿ ಕಾಣಿಸಿಕೊಳ್ಳುತ್ತದೆ. ಆ ನಿರ್ದಿಷ್ಟ ಲಾಟ್/ ತಂಬಾಕಿನ ಬೇಲ್‍ಗೆ ಆಸಕ್ತಿಹೊಂದಿರುವ ಖರೀದಿದಾರರು ರೂ. 1/- ರಂತೆ ಬೆಲೆಯನ್ನು ಸೇರಿಸುತ್ತಾರೆ. ಹೆಚ್ಚಿನ ಬೆಲೆಯನ್ನು ಉಲ್ಲೇಖಿಸಿದ ಖರೀದಿದಾರರಿಗೆ ಬೇಲ್‍ನ್ನು ಹಂಚಲಾಗುತ್ತದೆ. 

ಈ ವ್ಯವಸ್ಥೆಯು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದÀರ್ಶಕತೆಯನ್ನು ಒದಗಿಸುತ್ತದೆ ಮತ್ತು ಬೆಳೆಗಾರರು ಸಹ ಬಿಡ್ಡಿಂಗ್ ಪ್ರಕ್ರಿಯೆಯನ್ನು ತಮ್ಮ HHT ಮೂಲಕ ವೀಕ್ಷಿಸಬಹುದು. ತಂಬಾಕು ಮಂಡಳಿಯು ಮಾರಾಟದ ದಿನಾಂಕದಿಂದ 15ನೇ ದಿನದೊಳಗೆ ಏಕೀಕೃತ ಚೆಕ್ ಮೂಲಕ ಬೆಳೆಗಾರರಿಗೆ  ಪಾವತಿ ಮಾಡುತ್ತದೆ. 

ಡಾ. ಟಿ. ಎಂ. ಸೌಮ್ಯ ಮುಖ್ಯಸ್ಥರು ಅಖಿಲ ಭಾರತ ಜಾಲಬಂಧ ಯೋಜನೆ ತಂಬಾಕು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಶಿವಮೊಗ್ಗ, Mobile No: 99860 45712

error: Content is protected !!