ಶಿವಮೊಗ್ಗ,ಅ.2: ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂಡಾ ಹಗರಣದ ಕಬಂಧ ಬಾಹುಗಳು ಹೆಚ್ಚಾಗುತ್ತಿವೆ. ಬಿಜೆಪಿ ಈ ಬಗ್ಗೆ ಪ್ರಾರಂಭದಿಂದಲೇ ಹೋರಾಟ ನಡೆಸಿತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಂಕಾರದಿಂದ ವರ್ತಿಸಿ ನಾನೇಕೆ ಎದುರಬೇಕು. ತಪ್ಪು ಮಾಡಿಲ್ಲ, ಸೈಟ್ ವಾಪಾಸ್ಸು ಕೊಡುವ ಪ್ರಶ್ನೆಯೇ ಇಲ್ಲ ಎಂದು ಭಂಡತನ ತೋರಿದ್ದರು. ಆದರೆ ಈಗ ಸೈಟ್‍ನ್ನು ವಾಪಾಸ್ಸು ಕೊಡುವ ಮೂಲಕ ತಾವು ತಪ್ಪಿತಸ್ಥರು ಎಂದು ಸಾಭೀತು ಮಾಡಿದ್ದಾರೆ. ಅವರ ಸ್ಥಿತಿ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡ ಹಾಗೆ ಎಂಬಂತಿದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರು ಒಂದು ಕಪ್ಪುಚುಕ್ಕಿಯೂ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಅವರು ಕಪ್ಪು ಕಾಗೆಯಂತಾಗಿದ್ದಾರೆ. ಕಾಗೆಯಲ್ಲಿ ಬಿಳಿಯನ್ನು ಹೇಗೆ ಹುಡುಕಲು ಸಾಧ್ಯವಿಲ್ಲವೂ ಹಾಗೆಯೇ ಅವರ ಸ್ಥಿತಿಯಾಗಿದೆ. ಅವರು ಕೂಡಲೇ ರಾಜೀನಾಮೆ ನೀಡಬೇಕು. ತನಿಖೆಗೆ ಸಹಕರಿಸಬೇಕು ಎಂದರು.
ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಬಗ್ಗೆ ನಮ್ಮ ಪಕ್ಷದವರೇ ಆದ ಯತ್ನಾಳ್ ಅವರು ಪಕ್ಷದ ಚೌಕಟ್ಟನ್ನು ಬಿಟ್ಟು ಮಾತನಾಡುತ್ತಿದ್ದಾರೆ. ಅದು ಸರಿಯಲ್ಲ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ರಾಷ್ಟ್ರೀಯ ನಾಯಕರು ಅವರಿಗೆ ಅಸಮಧಾನವಿದ್ದರೆ ರಾಷ್ಟ್ರೀಯ ನಾಯಕರ ಹತ್ತಿರವೇ ಮಾತನಾಡಿ, ಉತ್ತರ ಪಡೆಯಬೇಕು. ಅದನ್ನು ಬಿಟ್ಟು ಹಾದಿಬೀದಿಯಲ್ಲಿ ಮಾತನಾಡಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಲತೇಶ್, ಚಂದ್ರಶೇಖರ್, ವಿನ್ಸಂಟ್, ಕೆ.ವಿ.ಅಣ್ಣಪ್ಪ ಇದ್ದರು.