ಶಿವಮೊಗ್ಗ : ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದ ಸ್ತ್ರೀ ಸಮಾನತೆಯ ಅವಶ್ಯಕತೆಯನ್ನು ಎತ್ತಿ ಹಿಡಿದಿದ್ದು ಕನ್ನಡ ಸಾಹಿತ್ಯ ಎಂದು ಸಾಹಿತಿ ಪ್ರೊ.ಸಬಿತಾ ಬನ್ನಾಡಿ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶುಕ್ರವಾರ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರೊ.ಎಂ.ಬಿ. ನಟರಾಜ್ ಅವರು ನೀಡಿರುವ ಶಾಂತವೇರಿ ಗೋಪಾಲಗೌಡರ ದತ್ತಿ ಅಂಗವಾಗಿ ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಕುರಿತು ಮಾತನಾಡಿದರು.
ಎಷ್ಟೋ ಬಾರಿ ಮನಸ್ಸಿಗೆ ಬೇಕಾದ್ದನ್ನು ಸಮಾಜ ತಲುಪಿಸಲಿಲ್ಲ. ನಮಗೆ ಬೇಡವಾದ ಅನೇಕ ವಿಚಾರಗಳನ್ನು ಮನಸ್ಸಿಗೆ ತುರುಕಲಾಗುತ್ತಿದೆ. ತಪ್ಪು ಕಲ್ಪನೆಗಳಿಂದಾಗಿ ಸ್ತ್ರೀ ಸಮಾನತೆ ನಿರ್ಲಕ್ಷ್ಯಗೊಳ್ಳುತ್ತಿದ್ದು, ಅನುಮಾನ ಅಪನಂಬಿಕೆಗಳಿಂದ ದೂರ ಮಾಡಲು ಸಾಹಿತ್ಯದಿಂದ ಮಾತ್ರ ಸಾಧ್ಯವಾಗಲಿದೆ.
ಜೈವಿಕವಾಗಿ ಹೆಣ್ಣು ಗಂಡು ಬೇರೆಯಾದರೂ ಅರಿವು ಪಡೆಯಲು ಎನ್ನುವ ಶರಣರ ವಚನಗಳನ್ನು ಉಲ್ಲೇಖ ಮಾಡಿ ಅರಿವಿಗೆ ಬೇರೆ ಬೇರೆ ಶಾಖೆಗಳಿಲ್ಲ. ಹಸಿವು, ಭಾವನೆ ಒಂದೇ ಎಂದು ಅರ್ಥ ಮಾಡಿಸುವಲ್ಲಿ ವಿಫಲರಾಗಿದ್ದೇವೆ. ಅದು ಅರ್ಥವಾದರೆ ಅದೇ ಸಂವೇದನೆ ಎಂದು ವಿವರಿಸಿದರು.