ಶಿವಮೊಗ್ಗ :- ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ಮಾಜಿ ಜಿ.ಪಂ. ಸದಸ್ಯೆ ಹಾಗೂ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಕುಮಾರಿ ಹೇಳಿದ್ದಾರೆ. ಚುನಾಯಿತ ಸರ್ಕಾರವನ್ನು ಬೀಳಿಸುವ ಹುನ್ನಾರವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಬಡವರ ಬಂದುವಾಗಿ ಅನೇಕ ಕಾರ್ಯಕ್ರಮ ಗಳನ್ನು ನೀಡುವ ಮೂಲಕ ಬಡಜನರಿಗೆ ನೆರವಾಗಿದ್ದಾರೆ. ಅವರ ಎಲ್ಲಾ ಭಾಗ್ಯ ಯೋಜನೆಗಳು ಅತ್ಯಂತ ಜನಪ್ರಿಯ ವಾಗಿವೆ. ಕಾಂಗ್ರೆಸ್ ಸರ್ಕಾರವನ್ನು ಗಟ್ಟಿಗೊಳಿಸುವ ನಿಟ್ಟಿನತ್ತ ಸಾಗಿವೆ. ಇದನ್ನು ಸಹಿಸದ ಬೀಜೇಪಿಗರು, ಸಿದ್ದ ರಾಮಯ್ಯ ಅವರ ವಿರುದ್ದ ಈ ಕಳಂಕ ಬರುವ ರೀತಿಯಲ್ಲಿ ರಾಜ್ಯಪಾಲರ ಭವನವನ್ನು ದುರುಪಯೋಗ ಪಡಿಸಿಕೊಂಡು ಸಂಕಷ್ಟಕ್ಕೆ ಕಾರಣರಾಗಿದ್ದಾರೆ ಎಂದಿದ್ದಾರೆ.
ಸಿದ್ದರಾಯ್ಯನವರು ತಮ್ಮ ಇಡೀ ಜೀವನದುದ್ದಕ್ಕೂ ಕಳಂಕ ರಹಿತರಾಗಿ ಇದ್ದವರು. ಎರಡು ಭಾರಿ ಮುಖ್ಯಮಂತ್ರಿ ಆದರೂ ಕೂಡ ಯಾವುದೇ ಆಸ್ತಿಯನ್ನು ಅವರು ಮಾಡಿಲ್ಲ ಹಾಗೆ ನೋಡಿದರೆ, ಬಿಜೆಪಿಯ ಒಬ್ಬ ಶಾಸಕನಿಂದ ಹಿಡಿದು ಮಂತ್ರಿಗಳು, ಮಾಜಿ ಮುಖ್ಯಮಂತ್ರಿ ಗಳು ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ. ಅವರ ಮುಂದೆ ಇವರ ಆಸ್ತಿಗಳು ಶೂನ್ಯ ಎಂದಿದ್ದಾರೆ.
ಕಾಲ ಬದಲಾವಣೆ ಆಗುತ್ತಲೇ ಇರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ಎದುರಿಸಲು ಸಿದ್ದರಾಗಿದ್ದಾರೆ. ಅವರು ನಿಷ್ಕಲ್ಮಶವಾಗಿ ಹೊರ ಬರುತ್ತಾರೆ. ಸತ್ಯಕ್ಕೆ ಎಂದಿದ್ದರು ಜಯ ಸಿಕ್ಕೇ ಸಿಗುತ್ತದೆ.
ಬಿಜೆಪಿಯ ಕೆಲ ನಾಯಕರುಗಳಿಗೆ ಬೇಕಾಗಿರುವುದು ರಾಜಕೀಯವಷ್ಟೆ, ಸಿದ್ದರಾಮಯ್ಯನವರನ್ನು ಅತ್ಯಂತ ಪ್ರೀತಿಸುವವರೂ ಕೂಡ ರಾಜಕಾರಣ ಕ್ಕಾಗಿ ದ್ವೇಶ ಮಾಡುತ್ತಿದ್ದಾರೆ. ಇದು ನಿಜಕ್ಕೂ ವಿಷಾಧದ ಸಂಗತಿಯಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಪ್ರಭಾವ ದಿನ ದಿನಕ್ಕೆ ಕುಸಿಯುತ್ತಿದೆ. ಇದನ್ನು ಪ್ರಧಾನಿ ಮೋದಿಯವರು ಸೇರಿದಂತೆ ಬಿಜೆಪಿ ನಾಯಕರು ಗಮನಿಸುತ್ತಿದ್ದಾರೆ. ಹೇಗಾದರೂ ಮಾಡಿ ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಹುನ್ನಾರ ಮಾಡುತ್ತಿದ್ದಾರೆ. ಈ ಹುನ್ನಾರ ಸಫಲವಾಗುವುದಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ರಾಜನಾಮೆ ಕೊಡುವ ಅಗತ್ಯವಿಲ್ಲ. ಅವರು ಬಡವರ ಕಣ್ಮಣಿಯಾಗಿಯೇ ಉಳಿಯಬೇಕು. ಖಂಡಿತ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಅನಿತಾ ಕುಮಾರಿ ತಿಳಿಸಿದ್ದಾರೆ.