ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನಂ ಇದರ ಶ್ರೀ ಶ್ರೀ ಅಭಿನವ ಶಂಕರಭಾರತಿ ಮಹಾಸ್ವಾಮೀಜಿ ಅವರು “ಪ್ರತಿಯೊಬ್ಬರ ಜೀವನದಲ್ಲಿ ಅವರವರ ಭಾವನೆಗೆ ತಕ್ಕಂತೆ ಪ್ರತಿಫಲ ದೊರಕುತ್ತದೆ. ನಾವು ಪಠಿಸುವ ಮಂತ್ರದಲ್ಲಿ, ತೀರ್ಥದಲ್ಲಿ, ದೇವರಲ್ಲಿ ಗುರುವಿನಲ್ಲಿ ಭಕ್ತಿಯಿಂದ ಶ್ರಧ್ಧೆಯಿಂದ ಪ್ರತಿನಿತ್ಯ ಆರಾಧನೆ ಮಾಡಬೇಕು. ಪ್ರತಿಯೊಬ್ಬರಿಗೂ ಅವರ ಜೀವನದ ದೈಹಿಕ, ಮಾನಸಿಕ ತೊಂದರೆಗಳಿಗೆ ಅವರ ಮನಸ್ಸಿನ ಭಾವನೆಗಳೆ ಔಷಧಿಯಾಗಿರುತ್ತವೆ. ನಾವು ನೋಡಿ ಅನುಕರಣೆ ಮಾಡಿ ಕಲಿಯುತ್ತೇವೆ. ಯಾರಾದರೂ ಉಪದೇಶ ಕೇಳಿದರೆ ಮಾತ್ರ ಕೊಡಬೇಕು. ಇಲ್ಲದಿದ್ದರೆ ನೀಡಬಾರದು” ಎಂದರು. ಮಕ್ಕಳಿಗೆ “ಸರಸ್ವತಿ ನಮಸ್ತ್ಯ್ಯುಭ್ಯಂ ವರದೇ ಕಾಮರೂಪಿಣೀ ವಿದ್ಯಾರಂಭಂ ಕರಿಶ್ಯಾಮಿ ಸಿದ್ಧಿರ್ಭವತು ಮೇ ಸದಾ” ಎಂಬ ಮಂತ್ರ ಪಠಿಸುವುದನ್ನು ಸಾಮೂಹಿಕವಾಗಿ ಹೇಳಿಕೊಟ್ಟು ಅದರ ಮಹತ್ವ ತಿಳಿಯಪಡಿಸಿದರು.
ಡಾ. ಪಿ ನಾರಾಯಣಅವರು ಮಾತನಾಡಿ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯುಬೆಳ್ಳಿ ಹಬ್ಬದ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಶಾಲೆ ನಡೆದು ಬಂದ ದಾರಿಯನ್ನು ದಾಖಲೆ ಮತ್ತು ಸಚಿತ್ರಪೂರಕವಾಗಿ ಪಿಪಿಟಿ ಮೂಲಕ ಶಾಲೆ ಪ್ರಾರಂಭವಾಗಲು ಕಾರಣರಾದ ಎಲ್ಲ ಸಂಸ್ಥಾಪಕರನ್ನು ನೆನೆದು ಅಭಿನಂದಿಸಿದರು. ಹಾಗೂ ‘ಪ್ರತಿಭಾವಂತ ಮಕ್ಕಳ ಭವಿಷ್ಯ ರೂಪಿಸುವುದೇ ಜ್ಞಾನದೀಪ ಶಾಲೆಯ ಮುಖ್ಯ ಉದ್ದೇಶವಾಗಿದೆ’ ಎಂಬುದನ್ನು ಸವಿಸ್ತಾರವಾಗಿ ಪ್ರಸ್ತುತಪಡಿಸಿದರು
ಜ್ಞಾನದೀಪ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ತಲವಾನೆ ಪ್ರಕಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಜ್ಞಾನದೀಪ ಹಬ್ಬದ ವಿಶೇಷತೆಯನ್ನು ಕುರಿತು ಮಾತನಾಡಿ ನೆರೆದ ಮಕ್ಕಳಿಗೆ ಶಾಲೆ ಪ್ರಾಂಭದಿಂದ ಇಂದಿನವರೆಗೆ ಬೆಳೆದು ಹೆಮ್ಮರವಾಗಿರುವುದಕ್ಕೆ ಕಾರಣ ಶಾಲೆಯ ಶಿಕ್ಷಕರು, ಅವರೇÀ ಶಾಲೆಯನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದರು.
ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶ್ರೀಕಾಂತ್ ಎಂ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆಗೆ ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿದರು
ಜ್ಞಾನದೀಪ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ನೀಲಕಂಠಮೂರ್ತಿ ಬಿ ಎಲ್. ಖಜಾಂಚಿಗಳಾದ ಡಾ. ಶ್ರೀಧರ್, ಶ್ರೀ ಅರಬಿಂದೋ ಪದವಿಪೂರ್ವ ಕಾಲೇಜಿನ ಪ್ರಾಂಶೂಪಾಲರಾದ ಡಾ. ಕೆ ನಾಹರಾಜ್, ಕಾನೂನು ಸಲಹೆಗಾರರಾದ ಶ್ರೀಯುತ ರಾಜೇಶ್ ಎನ್ ಶಾಸ್ರೀಯವರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ನಿರೂಪಿಸಿ, ಶ್ರೀಕಾಂತ ಗೋಸಾವಿ ವಂದಿಸಿದರು.
