ಶಿವಮೊಗ್ಗ, ಡಿಸೆಂಬರ್ 11, : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲ್ಪಡುತ್ತಿರುವ ಕ್ರೀಡಾಶಾಲೆ/ಕ್ರೀಡಾನಿಲಯಗಳಿಗೆ 2024-25ನೇ ಸಾಲಿನ ಪ್ರವೇಶಕ್ಕೆ ತಾಲ್ಲೂಕುಗಳ ಮಟ್ಟದಲ್ಲಿ ಆಯ್ಕೆ ನಡೆಸಲಾಗುವುದು.
ಅಥ್ಲೆಟಿಕ್ಸ್, ಹಾಕಿ, ಫುಟ್‍ಬಾಲ್, ಕುಸ್ತಿ ಕ್ರೀಡೆಗಳಿಗೆ ವಿವಿಧ ಮಟ್ಟಗಳಲ್ಲಿ ಆಯ್ಕೆಯನ್ನು ನಡೆಸಬೇಕಾಗಿದ್ದು ಇಲಾಖೆ ನಿರ್ದೇಶಕರ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಆಯ್ಕೆಯನ್ನು ಈ ಕೆಳಗೆ ನಮೂದಿಸಿರುವ ದಿನಾಂಕ ಮತ್ತು ಸ್ಥಳಗಳಲ್ಲಿ ಏರ್ಪಡಿಸಲಾಗಿರುತ್ತದೆ.
ಆಯ್ಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ಶಾಲಾ ಮುಖ್ಯಸ್ಥರಿಂದ ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೂ ವ್ಯಾಸಂಗ ಮಾಡುತ್ತಿರುವ ತರಗತಿಯ ವಿವರಗಳನ್ನೊಳಗೊಂಡ ದೃಢೀಕರಣ ಪತ್ರವನ್ನು ಆಯ್ಕೆಯ ದಿನದಂದು ತಮ್ಮೊಂದಿಗೆ ಕಡ್ಡಾಯವಾಗಿ ತರತಕ್ಕದ್ದು.
ಡಿ.18 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ತೀರ್ಥಹಳ್ಳಿ, ಡಿ.20 ರಂದು ಸಾಗರ ತಾಲ್ಲೂಕು ಕ್ರೀಡಾಂಗಣ, ಡಿ.22 ರಂದು ಹೊಸನಗರ ತಾಲ್ಲೂಕು ಕ್ರೀಡಾಂಗಣ, ಡಿ.26 ರಂದು ಸ.ಪ.ಪೂ ಕಾಲೇಜು ಆನವಟ್ಟಿ, ಡಿ.28 ರಂದು ಶಿಕಾರಿಪುರ ತಾಲ್ಲೂಕು ಕ್ರೀಡಾಂಗಣ, ಡಿ.29 ರಂದು ಕನಕ ಮಂಟಪ ಮೈದಾನ ಮತ್ತು ಡಿ.30 ರಂದು ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಪ್ರಾರಂಭವಾಗುತ್ತದೆ. ಆಯಾ ತಾಲ್ಲೂಕಿನ ಬಾಲಕ, ಬಾಲಕಿಯರು ಭಾಗವಹಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ನಿಗದಿತ ಅರ್ಜಿ ನಮೂನೆಗಾಗಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಮತ್ತು ತರಬೇತುದಾರರಾದ ಬಾಳಪ್ಪ ಮಾನೆ ಮೊ.ನಂ:9880653266, ಪಿ.ವಿ ನಾಗರಾಜ್ ಮೊ.ನಂ:9964599936 ಇವರನ್ನು ಸಂಪರ್ಕಿಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.