ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆ ಶಿವಮೊಗ್ಗ – ಹೈದರಾಬಾದ್‌ ಮತ್ತು ಶಿವಮೊಗ್ಗ – ಚೆನ್ನೈ ಮಧ್ಯೆ ವಿಮಾನಯಾನ ಸೇವೆ ಆರಂಭಿಸುತ್ತಿದೆ. ಅ.10ರಿಂದ ಶಿವಮೊಗ್ಗದಿಂದ ಮೂರನೆ ವಿಮಾನಯಾನ ಸಂಸ್ಥೆ ಹಾರಾಟ ನಡೆಸಲಿದೆ.

✈️ ಚೆನ್ನೈಯಿಂದ ಶಿವಮೊಗ್ಗ: ಬೆಳಗ್ಗೆ 10:40ಕ್ಕೆ ಹೊರಟು, ಮಧ್ಯಾಹ್ನ 12:10ಕ್ಕೆ ತಲುಪಲಿದೆ.

✈️ ಶಿವಮೊಗ್ಗದಿಂದ ಹೈದರಾಬಾದ್: ಮಧ್ಯಾಹ್ನ 12:35ಕ್ಕೆ ಹೊರಟು, ಮಧ್ಯಾಹ್ನ 2:05ಕ್ಕೆ ತಲುಪಲಿದೆ.

✈️ ಹೈದರಾಬಾದ್‌ನಿಂದ ಶಿವಮೊಗ್ಗ: ಮಧ್ಯಾಹ್ನ 2:40ಕ್ಕೆ ಹೊರಟು, ಸಂಜೆ 4:10ಕ್ಕೆ ತಲುಪಲಿದೆ.

✈️ ಶಿವಮೊಗ್ಗದಿಂದ ಚೆನ್ನೈ: ಸಂಜೆ 4:25ಕ್ಕೆ ಹೊರಟು, ಸಂಜೆ 5:55ಕ್ಕೆ ತಲುಪಲಿದೆ.

ಈ ಹೊಸ ವಿಮಾನ ಮಾರ್ಗಗಳು ಶಿವಮೊಗ್ಗದ ಸಂಪರ್ಕವನ್ನು ಉತ್ತಮಗೊಳಿಸಿ, ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ.

error: Content is protected !!