ಶಿವಮೊಗ್ಗ: ಅಕ್ಟೋಬರ್ 27 ; ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2024ರ ಅನುಷ್ಠಾನದ ವಿಚಾರದಲ್ಲಿ ಅ.27 ರಂದು ಜಿಲ್ಲಾಧಿಕಾರಿಗಳು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿರುತ್ತಾರೆ.
ಶಿವಮೊಗ್ಗ ಜಿಲ್ಲೆಯ ಮತದಾರರ ಅಂಕಿ ಅಂಶಗಳು: 111-ಶಿವಮೊಗ್ಗ ಗ್ರಾಮಾಂತರ – ಮತಗಟ್ಟೆಗಳು- 249, ಪುರುಷರು -105450, ಮಹಿಳೆಯರು-107005, ಇತರೆ-4, ಒಟ್ಟು 212459. 112-ಭದ್ರಾವತಿ- ಮತಗಟ್ಟೆಗಳು- 253, ಪುರುಷರು -103026, ಮಹಿಳೆಯರು-109021, ಇತರೆ-5, ಒಟ್ಟು 212052. 113-ಶಿವಮೊಗ್ಗ – ಮತಗಟ್ಟೆಗಳು- 288, ಪುರುಷರು -128205, ಮಹಿಳೆಯರು-134285, ಇತರೆ-14, ಒಟ್ಟು 262504. 114-ತೀರ್ಥಹಳ್ಳಿ – ಮತಗಟ್ಟೆಗಳು- 258, ಪುರುಷರು -92921, ಮಹಿಳೆಯರು-95325, ಇತರೆ-0, ಒಟ್ಟು 188246. 115-ಶಿಕಾರಿಪುರ – ಮತಗಟ್ಟೆಗಳು- 235, ಪುರುಷರು -99649, ಮಹಿಳೆಯರು-99031, ಇತರೆ-2, ಒಟ್ಟು 198682. 116-ಸೊರಬ – ಮತಗಟ್ಟೆಗಳು- 239, ಪುರುಷರು -97934, ಮಹಿಳೆಯರು-96473, ಇತರೆ-0, ಒಟ್ಟು 194407. 117-ಸಾಗರ – ಮತಗಟ್ಟೆಗಳು- 271, ಪುರುಷರು -101476, ಮಹಿಳೆಯರು-103613, ಇತರೆ-1, ಒಟ್ಟು 205090. ಒಟ್ಟು ಮತಗಟ್ಟೆಗಳು- 1793, ಪುರುಷರು- 728661, ಮಹಿಳೆಯರು -744753, ಇತರೆ-26, ಒಟ್ಟು ಮತದಾರರ ಸಂಖ್ಯೆ -1473440.
ಜಿಲ್ಲೆಯಲ್ಲಿ ಒಟ್ಟು 19 ಹೊಸ ಮತಗಟ್ಟೆಗಳನ್ನು ಸೃಷ್ಠಿಸಲಾಗಿದ್ದು, 31 ಮತಗಟ್ಟೆ ಕೇಂದ್ರಗಳನ್ನು ಸ್ಥಳಾಂತರ ಮಾಡಲಾಗಿರುತ್ತದೆ ಮತ್ತು 1 ಮತಗಟ್ಟೆಯನ್ನು ವಿಲೀನಗೊಳಿಸಲಾಗಿದೆ.
ಹೊಸ ಮತಗಟ್ಟೆಗಳು:
ಶಿವಮೊಗ್ಗ ಗ್ರಾಮಾಂತರ: ಮತಗಟ್ಟೆ ಸಂಖ್ಯೆ 64- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ-ವಡೇರಕೊಪ್ಪ. ಮತಗಟ್ಟೆ ಸಂಖ್ಯೆ-83 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ- ಸಿದ್ಲಿಪುರ.
ಶಿವಮೊಗ್ಗ: – ಮತಗಟ್ಟೆ ಸಂಖ್ಯೆ-6- ಆಕ್ಸಫರ್ಡ್ ಆಂಗ್ಲಶಾಲೆ, ಬಸವೇಶ್ವರನಗರ, ಕೊಠಡಿ ಸಂ.:12, ಶಿವಮೊಗ್ಗ. ಮತಗಟ್ಟೆ ಸಂಖ್ಯೆ-18- ಸ.ಕಿ.ಪ್ರಾ.ಶಾ. ತಾವರೆಚಟ್ನಹಳ್ಳಿ (ಎಡಭಾಗ), ಮತಗಟ್ಟೆ ಸಂಖ್ಯೆ-102-ವಿಕಾಸ ಕಿರಿಯ ಪ್ರಾಥಮಿಕ ಶಾಲೆ-ಆಲ್ಕೊಳ (ಎಡಭಾಗ), ಮತಗಟ್ಟೆ ಸಂಖ್ಯೆ-188- ಅಲ್ ಅಹಮ್ಮದ್ ಬಿಡ್ ಕಾಲೇಜು, ಬಲಭಾಗ, ಕೊ.ಸಂ.: 01, ಆರ್.ಎಂ.ಎಲ್. ನಗರ. ಮೊದಲ ಹಂತ 12ನೇ ತಿರುವು, ಶಿವಮೊಗ್ಗ. ಮತಗಟ್ಟೆ ಸಂಖ್ಯೆ-225-ಜಂಟಿ ನಿರ್ದೇಶಕರ ಕಚೇರಿ, ವಾಣಿಜ್ಯ ತೆರಿಗೆ ಇಲಾಖೆ, ಆಡಳಿತ ಶಾಖೆ, ಗೋಪಾಲಗೌಡ ಬಡಾವಣೆ, ಕೊ.ಸಂ.:02. ಮತಗಟ್ಟೆ ಸಂಖ್ಯೆ271-ಸ.ಕ.ಹಿ.ಪ್ರಾ.ಶಾಲೆ, ನ್ಯೂ ಮಂಡ್ಲಿ, ಶಿವಮೊಗ್ಗ (ಕೊ.ಸಂ.:3).
ಶಿಕಾರಿಪುರ: – ಮತಗಟ್ಟೆ ಸಂಖ್ಯೆ-55, ಸ.ಕಿ.ಪ್ರಾ.ಶಾ-ಹಳೇಮುತ್ತಗಿ. ಮತಗಟ್ಟೆ ಸಂಖ್ಯೆ-70 ಸರ್ಕಾರಿ ಬಾಲಕ ಶಾಲೆ ಕೊ.ಸಂ.: 3- ಶಿರಾಳಕೊಪ್ಪ. ಮತಗಟ್ಟೆ ಸಂಖ್ಯೆ134-ಸ.ಕಿ.ಪ್ರಾ.ಶಾ. ಬಲಭಾಗ, ಕೊ.ಸಂ.:02, ಆಶ್ರಯ ಲೇಔಟ್-ಶಿಕಾರಿಪುರ.
ಸಾಗರ: ಮತಗಟ್ಟೆ ಸಂಖ್ಯೆ 21-ಸ.ಕಿ.ಪ್ರಾ.ಶಾ-ಲಾವಿಗ್ಗೆರೆ. ಮತಗಟ್ಟೆ ಸಂಖ್ಯೆ 36-ಸ.ಕಿ.ಪ್ರಾ.ಶಾ. ಡ್ಯಾಂಹೊಸೂರು (ಬೋಳನಕಟ್ಟೆ). ಮತಗಟ್ಟೆ ಸಂಖ್ಯೆ109-ಸ.ಕಿ.ಪ್ರಾ.ಶಾ-ಕೊಪ್ಪ. ಮತಗಟ್ಟೆ ಸಂಖ್ಯೆ-138-ಸ.ಕಿ.ಪ್ರಾ.ಶಾ. ಕಾಸ್ಪಾಡಿ. ಮತಗಟ್ಟೆ ಸಂಖ್ಯೆ-47, ಸ.ಕಿ.ಪ್ರಾ.ಶಾ. ಕೊ.ಸಂ.: 2, ಸ್ಯಾಂಡಲ್ವುಡ್ ಕಾಂಪ್ಲೆಕ್ಸ್, ಸಾಗರ. ಮತಗಟ್ಟೆ ಸಂಖ್ಯೆ-60-ಸ.ಪ್ರೌ.ಶಾ. ಸುಭಾಷ್‍ನಗರ, ಕೊ.ಸಂ.:4, ಸಾಗರ. ಮತಗಟ್ಟೆ ಸಂಖ್ಯೆ-74-ಸ.ಉರ್ದು ಹಿ.ಪ್ರಾ.ಶಾಲೆ-ಗಾಂಧಿನಗರ, ಸಾಗರ. ಮತಗಟ್ಟೆ ಸಂಖ್ಯೆ-90 ಇಂದಿರಾಗಾಂಧಿ ಮಹಿಳಾ ಕಾಲೇಜು, ಕೊ.ಸಂ.;3, ಸಾಗರ.
ಸ್ಥಳಾಂತರಗೊಂಡ ಮತಗಟ್ಟೆ ಕೇಂದ್ರಗಳು;
ಶಿವಮೊಗ್ಗ ಗ್ರಾಮಾಂತರ: ಮತಗಟ್ಟೆ ಸಂಖ್ಯೆ 141 ಸ.ಹಿ.ಪ್ರಾ.ಶಾಲೆ ಕೊ.ಸಂ.: 2 ಮಲವಗೊಪ್ಪ ಮತಗಟ್ಟೆಯನ್ನು ಭದ್ರಾಕಾಡಾ ಕಚೇರಿ ಕೊ.ಸಂ.: 1, ಮಲವಗೊಪ್ಪಕ್ಕೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂಖ್ಯೆ 141 -ಸ.ಕಿ.ಪ್ರಾ.ಶಾ. ಕೊ.ಸಂ.: 4 ಮಲವಗೊಪ್ಪ ತಾಂಡ ಮತಗಟ್ಟೆಯನ್ನು ಮಲಗೊಪ್ಪ ಸ.ಹಿ.ಪ್ರಾ.ಶಾಲೆ ಕೊ.ಸಂ.: 2ಕ್ಕೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.;143 ಸ.ಕಿ.ಪ್ರಾ.ಶಾ ಕೊ.ಸಂ.:1, ಮಲಗೊಪ್ಪ ತಾಂಡ ಮತಗಟ್ಟೆಯನ್ನು ಮಲವಗೊಪ್ಪ ಸ.ಹಿ.ಪ್ರಾ.ಶಾ, ಕೊ.ಸಂ.: 1ಕ್ಕೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 144ರ ಮಲವಗೊಪ್ಪ ಸ.ಹಿ.ಪ್ರಾ.ಶಾ ಕೊ.ಸಂ.: 1 ರ ಮತಗಟ್ಟೆಯನ್ನು ಭದ್ರಾಕಾಡಾ ಕಚೇರಿ ಕೊ.ಸಂ.: 2, ಮಲವಗೊಪ್ಪಕ್ಕೆ ಸ್ಥಳಾಂತರಿಸಲಾಗಿದೆ
ಭದ್ರಾವತಿ: ಮತಗಟ್ಟೆ ಸಂ.: 22 ಬಿಳಕಿ ಸ.ಕಿ.ಪ್ರಾ.ಶಾಲೆ ಮತಗಟ್ಟೆಯನ್ನು ಬಿಳಕಿ ಗ್ರಾಮ ಪಂಚಾಯತಿ ಕಚೇರಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: z, ಸ.ಕ.ಹಿ.ಪ್ರಾ.ಗಂಡುಮಕ್ಕಳ ಶಾಲೆ, ಬಿ.ಹೆಚ್.ರಸ್ತೆ, ಲೋಯರ್ ಹುತ್ತ ಭದ್ರಾವತಿ ಮತಗಟ್ಟೆಯನ್ನು ಸ.ಕ.ಹಿ.ಪ್ರಾ.ಶಾ.ಲೋಯರ್ ಹುತ್ತಾ ಭದ್ರಾವತಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 99 ಸಮಾಜ ಕಲ್ಯಾಣ ಇಲಾಖೆಯ ವಿದ್ಯಾಥಿ ನಿಲಯ, ಹೊಸಮನೆ ಮುಖ್ಯರಸ್ತೆ, ಹಳೇಟೌನ್, ಭದ್ರಾವತಿಯ ಮತಗಟ್ಟೆಯನ್ನು ಸ.ಮಾದರಿ ತಮಿಳು ಹಿ.ಪ್ರಾ.ಶಾ. ಮುಂದಿನ ಕಟ್ಟಡ, ಹೊಸಮನೆ ಮುಖ್ಯರಸ್ತೆ, ಹಳೆಟೌನ್, ಭದ್ರಾವತಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 135 ಶ್ರೀ ರಾಮ ಐಟಿಐ ಕೊ.ಸಂ.: 1, ಹುತ್ತಾ ಕಾಲೋನಿ, ಭದ್ರಾವತಿ ಮತಗಟ್ಟೆಯನ್ನು ಸ.ಪ್ರೌ.ಶಾ. (ಪೂರ್ವ) ಕೊ.ಸಂ.: 2, ಹುತ್ತಾ ಕಾಲೋನಿ, ಭದ್ರಾವತಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 137 ಶ್ರೀ ರಾಮ ಐಟಿಐ ಕೊ.ಸಂ.: 2, ಹುತ್ತಾ ಕಾಲೋನಿ, ಭದ್ರಾವತಿ ಮತಗಟ್ಟೆಯನ್ನು ಸ.ಪ್ರೌ.ಶಾ. (ಪಶ್ಚಿಮ) ಕೊ.ಸಂ.: 3, ಹುತ್ತಾ ಕಾಲೋನಿ, ಭದ್ರಾವತಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 138 ಶ್ರೀ ರಾಮ ಐಟಿಐ ಕೊ.ಸಂ.: 3, ಹುತ್ತಾ ಕಾಲೋನಿ, ಭದ್ರಾವತಿ ಮತಗಟ್ಟೆಯನ್ನು ಸ.ಪ್ರೌ.ಶಾ. (ಪಶ್ಚಿಮ) ಕೊ.ಸಂ.: 4, ಹುತ್ತಾ ಕಾಲೋನಿ, ಭದ್ರಾವತಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 159 ರ ಡಿ.ಹೆಚ್.ಎಸ್. ಇಂಡಸ್ಟ್ರೀಯಲ್ ಟ್ರೈನಿಂಗ್ ಸೆಂಟರ್, ಲಯನ್ ಕ್ಲಬ್ ಹತ್ತಿರ, ಉಂಬ್ಳೇಬೈಲು ರಸ್ತೆ, ನ್ಯೂಟೌನ್, ಭದ್ರಾವತಿ ಮತಗಟ್ಟೆಯನ್ನು ಸ.ಹೆಣ್ಣುಮಕ್ಕಳ ಪಿ.ಯು.ಕಾಲೇಜ್, ಹಳೆ ಕಟ್ಟಡ, (ಪೂರ್ವ) ಉಂಬ್ಳೇಬೈಲು ರಸ್ತೆ, ನ್ಯೂಟೌನ್, ಭದ್ರಾವತಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 187 ಸ.ಉರ್ದು ಹಿ.ಪ್ರಾ.ಶಾ. ಕೊ.ಸಂ.: 3, (ಪೂರ್ವ) ಬೊಮ್ಮನಕಟ್ಟೆ ಮತಗಟ್ಟೆಯನ್ನು ಸರ್.ಎಂ.ವಿ. ಸೈನ್ಸ್ ಕಾಲೇಜ್ (ಪೂರ್ವ) ಬೊಮ್ಮನಕಟ್ಟೆ, ಭದ್ರಾವತಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.:188 ಸ.ಉರ್ದು ಹಿ.ಪ್ರಾ.ಶಾ. ಕೊ.ಸಂ.: 1, (ಪೂರ್ವ) ಬೊಮ್ಮನಕಟ್ಟೆ ಮತಗಟ್ಟೆಯನ್ನು ಸರ್.ಎಂ.ವಿ. ಸೈನ್ಸ್ ಕಾಲೇಜ್ (ಪಶ್ಚಿಮ) ಬೊಮ್ಮನಕಟ್ಟೆ, ಭದ್ರಾವತಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 189 ಸ.ಉರ್ದು ಹಿ.ಪ್ರಾ.ಶಾ., ಕೊ.ಸಂ.: 2, (ಪೂರ್ವ) ಬೊಮ್ಮನಕಟ್ಟೆ ಮತಗಟ್ಟೆಯನ್ನು ಸರ್.ಎಂ.ವಿ. ಸೈನ್ಸ್ ಕಾಲೇಜ್ (ಉತ್ತರ) ಬೊಮ್ಮನಕಟ್ಟೆ, ಭದ್ರಾವತಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 190 ಸ.ಉರ್ದು ಹಿ.ಪ್ರಾ.ಶಾ. ಕೊ.ಸಂ.: 1, (ಉತ್ತರ) ಬೊಮ್ಮನಕಟ್ಟೆ ಮತಗಟ್ಟೆಯನ್ನು ಸರ್.ಎಂ.ವಿ. ಸೈನ್ಸ್ ಕಾಲೇಜ್ (ದಕ್ಷಿಣ) ಬೊಮ್ಮನಕಟ್ಟೆ, ಭದ್ರಾವತಿಗೆ ಸ್ಥಳಾಂತರಿಸಲಾಗಿದೆ.
ಶಿವಮೊಗ್ಗ ಮತಗಟ್ಟೆ ಸಂ. 138 ಸ.ಹಿ.ಪ್ರಾ.ಶಾ-ಪುರಲೆ ಮತಗಟ್ಟೆಯನ್ನು ಪುರಲೆ ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 207 ಉನ್ನತೀಕರಿಸಿದ ಸ.ಹಿ.ಪ್ರಾ.ಶಾ., ಕೊ.ಸಂ.: 1, ಗಾಡಿಕೊಪ್ಪ, ಶಿವಮೊಗ್ಗ ಮತಗಟ್ಟೆಯನ್ನು ಸ.ಮ.ವ.ಪಾ.ಕಾಲೇಜು ಮತ್ತು ಟೆಕ್ನಿಕಲ್ ಎಜುಕೇಷನ್ ಡಿಪಾರ್ಟ್‍ಮೆಂಟ್, ಗೋಪಾಳ, ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 208 ಉನ್ನತೀಕರಿಸಿದ ಸ.ಹಿ.ಪ್ರಾ.ಶಾ., ಕೊ.ಸಂ.: 2, ಗಾಡಿಕೊಪ್ಪ, ಶಿವಮೊಗ್ಗ ಮತಗಟ್ಟೆಯನ್ನು ಸ.ಮ.ವ.ಪಾ.ಕಾಲೇಜು ಮತ್ತು ಟೆಕ್ನಿಕಲ್ ಎಜುಕೇಷನ್ ಡಿಪಾರ್ಟ್‍ಮೆಂಟ್, ಗೋಪಾಳ, ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.:214 ಗೋಪಾಳ ಅಂಗನವಾಡಿ ಕೇಂದ್ರ ಮತಗಟ್ಟೆಯನ್ನು ಪೌರಕಾರ್ಮಿಕ ವಿಶ್ರಾಂತಿಗೃಹ, ಕೆಹೆಚ್‍ಬಿ, ಶಿವಮೊಗ್ಗ ಸಿಟಿ ಕಾರ್ಪೋರೇಷನ್, ಗೋಪಾಳಕ್ಕೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 254 ಸ.ಕಿ.ಪ್ರಾ.ಶಾ, ತುಂಗಾನಗರ ಕೊ.ಸಂ.:01 ಮತಗಟ್ಟೆಯನ್ನು ಸ.ಉರ್ದು ಕಿ.ಪ್ರಾ.ಶಾ ತುಂಗಾನಗರ, ಶಿವಮೊಗ್ಗ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 258 ಸ.ಉ.ಹಿ. ಪ್ರಾ.ಶಾ. ಕೊ.ಸಂ.:01 ಟಿಪ್ಪುನಗರ 7ನೇ ಕ್ರಾಸ್, ಶಿವಮೊಗ್ಗ ಮತಗಟ್ಟೆಯನ್ನು ಅಲ್ ಹಬೀಬ್ ಇಂಗ್ಲೀಷ್ ಕಿ/ಹಿ. ಪ್ರಾ. ಮತ್ತು ಪ್ರೌ.ಶಾ. ಟಿಪ್ಪುನಗರ, ಶಿವಮೊಗ್ಗ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 259 ಸ.ಉ.ಹಿ. ಪ್ರಾ.ಶಾ. ಕೊ.ಸಂ.:02 ಟಿಪ್ಪುನಗರ 7ನೇ ಕ್ರಾಸ್, ಶಿವಮೊಗ್ಗ ಮತಗಟ್ಟೆಯನ್ನು ಅಲ್ ಹಬೀಬ್ ಇಂಗ್ಲೀಷ್ ಕಿ/ಹಿ. ಪ್ರಾ. ಮತ್ತು ಪ್ರೌ.ಶಾ. ಟಿಪ್ಪುನಗರ, ಶಿವಮೊಗ್ಗ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 266 ಸ.ಉ.ಹಿ. ಪ್ರಾ.ಶಾ. ಕೊ.ಸಂ.:01 ನ್ಯೂಮಂಡ್ಲಿ, ಶಿವಮೊಗ್ಗ ಮತಗಟ್ಟೆಯನ್ನು ಸ.ಹಿ.ಪ್ರಾ.ಶಾ., ನ್ಯೂಮಂಡ್ಲಿ, ಶಿವಮೊಗ್ಗ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 267 ಸ.ಉ.ಹಿ. ಪ್ರಾ.ಶಾ. ಕೊ.ಸಂ.:02 ನ್ಯೂಮಂಡ್ಲಿ, ಶಿವಮೊಗ್ಗ ಮತಗಟ್ಟೆಯನ್ನು ಸ.ಹಿ.ಪ್ರಾ.ಶಾ., ನ್ಯೂಮಂಡ್ಲಿ, ಶಿವಮೊಗ್ಗ ಇಲ್ಲಿಗೆ ಸ್ಥಳಾಂತರಿಸಲಾಗಿದೆ.
ತೀರ್ಥಹಳ್ಳಿ ಮತಗಟ್ಟೆ ಸಂ.: 45 ಸ.ಕಿ.ಪ್ರಾ.ಶಾ. ತೊಗರೆ ಮತಗಟ್ಟೆಯನ್ನು ಸ.ಅಂಗನವಾಡಿ ಕೇಂದ್ರ, ತೊಗರೆಗೆ ಸ್ಥಳಾಂತರಿಸಲಾಗಿದೆ.
ಶಿಕಾರಿಪುರ ಮತಗಟ್ಟೆ ಸಂ.: 91 ಸ.ಕಿ.ಪ್ರಾ.ಶಾ., ಜಕನಹಳ್ಳಿ ಮತಗಟ್ಟೆಯನ್ನು ಸ.ಕಿ.ಪ್ರಾ.ಶಾ. ಹೊಸ ಕಟ್ಟಡ, ಜಕನಹಳ್ಳಿಗೆ ಸ್ಥಳಾಂತರಿಸಲಾಗಿದೆ.
ಸೊರಬ ಮತಗಟ್ಟೆ ಸಂ.: 69 ಸ.ಹಿ.ಪ್ರಾ.ಶಾ. ಚಿಕ್ಕದಗೊಡು ಹಳೆ ಕಟ್ಟಡದಿಂದ ಸ.ಹಿ.ಪ್ರಾ.ಶಾ., ಚಿಕ್ಕದಗೊಡು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 131 ಸ.ಹಿ.ಪ್ರಾ.ಶಾ., ಕುಮ್ಮುರು ಹಳೆಕಟ್ಟಡದಿಂದ ಸ.ಹಿ.ಪ್ರಾ.ಶಾ., ಕುಮ್ಮುರು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.: 176 ಸ.ಕಿ.ಪ್ರಾ.ಶಾ., ಕುಂಬಟ್ಟಿ ಹಳೆಕಟ್ಟಡದಿಂದ ಸ.ಕಿ.ಪ್ರಾ.ಶಾ., ಕುಂಬಟ್ಟಿ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸಾಗರ ಮತಗಟ್ಟೆ ಸಂ.: 99 ಸ.ಹಿ.ಪ್ರಾ.ಶಾ., ಬ್ರಹ್ಮನ ಮಂಚಾಲೆಯಿಂದ ಸ.ಹಿ.ಪ್ರಾ.ಶಾ., ಬ್ರಹ್ಮನಮಂಚಾಲೆ (ಬೊಮ್ಮತ್ತಿ)ಗೆ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂ.:160 ಸರ್ಕಾರಿ ಸಮುದಾಯ ಭವನ, ಗ್ರಾ.ಪಂ. ಆವಿನಹಳ್ಳಿ ಯಿಂದ ಸ.ಪ.ಪೂ.ಕಾಲೇಜು, ಆವಿನಹಳ್ಳಿ ಪ್ರೌ.ಶಾ. ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ.
ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಸಂ.: 15, ಸ.ಕಿ.ಪ್ರಾ.ಶಾ. ಕೊಳಚಗಾರು ಮತಕೇಂದ್ರವನ್ನು ಮತಗಟ್ಟೆ ಸಂ.: 14 ಸ.ಹಿ.ಪ್ರಾ.ಶಾ., ಇಡುವಾಣಿ ಮತಕೇಂದ್ರದೊಂದಿಗೆ ವಿಲೀನಗೊಳಿಸಲಾಗಿದೆ.
ಭಾರತ ಚುನಾವಣಾ ಆಯೋಗವು ಅ.16ರಲ್ಲಿ ಮತದಾರರ ಪಟ್ಟಿ ಸಂಕ್ಷಿಪ್ತ ವಿಶೇಷ ಪರಿಷ್ಕರಣೆ ಮಾಡಿದ್ದು, ಪಟ್ಟಿಯನ್ನು ಅ.27 ರಂದು ಪ್ರಕಟಣೆ ಮಾಡಿದೆ. ಈ ಕುರಿತು ಆಕ್ಷೇಪಣೆಯನ್ನು ಡಿ.09ರೊಳಗೆ ಸಲ್ಲಿಸುವುದು. ಈ ಬಗ್ಗೆ ನ.18 ಮತ್ತು 19, ಡಿ.02 ಮತ್ತು 03 ರಂದು ವಿಶೇಷ ಅಭಿಯಾನವನ್ನು ನಿಗಧಿಪಡಿಸಲಾಗಿದೆ. ಡಿ.26ರಂದು ಆಕ್ಷೇಪಣೆಯನ್ನು ಇತ್ಯರ್ಥಗೊಳಿಸಲಾಗುವುದು. 2024ರ ಜನವರಿ 01 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಆಯೋಗದ ಅನುಮತಿಯನ್ನು ಪಡೆಯುವುದು ಹಾಗೂ ಡಾಟಾಬೇಸ್ ಆಫ್ ಡೇಟ್ ಕಾರ್ಯ ಮತ್ತು ಪೂರಕ ಮತದಾರರ ಪಟ್ಟಿ ಮುದ್ರಣ ಮಾಡುವುದು. 2024ರ ಜನವರಿ 05 ರಂದು ಅಂತಿಮ ಮತದಾರರ ಪಟ್ಟೆಯನ್ನು ಪ್ರಕಟಣೆ ಮಾಡಲಾಗುವುದು.
ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು ಸೇರ್ಪಡೆ, ತಿದ್ದುಪಡಿ ಅಥವಾ ಕೈಬಿಟ್ಟಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಡಿ.09ರೊಳಗೆ ವಿಧಾನಸಭಾ ಕ್ಷೇತ್ರವಾರು ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ಸಂಪರ್ಕಿಸಿ ಸಲ್ಲಿಸುವುದು. ಅಥವಾ ಮತದಾರರೇ ನೇರವಾಗಿ http://www.nvsp.in ಅಥವಾ http://voterportal.eci.gov.in ಅಥವಾ Voter helpline App ಗಳ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿ ಹಾಗೂ ಆಕ್ಷೇಪಣೆಯನ್ನು ಸಲ್ಲಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಎಲ್ಲಾ 7 ತಾಲೂಕುಗಳ ತಾಲೂಕು ಕಚೇರಿ ಮತದಾರರ ಸಹಾಯಕ ನೋಂದಣಾಧಿಕಾರಿಗಳನ್ನು ಸಂಪರ್ಕಿಸುವುದು.

error: Content is protected !!