ದ. ರಾ. ಬೇಂದ್ರೆ ಕನ್ನಡಕ್ಕೆ ಹೊಸ ಪದಗಳ ನೀಡಿದ ಗಾರುಡಿಗ
ಸರ್ ಎಂ ವಿಶ್ವೇಶ್ವರಯ್ಯನವರು ಅತ್ಯಂತ ಬಡ ಕುಟುಂಬದಿಂದ ಬಂದು ಅಸಾಮಾನ್ಯವಾದದ್ದನ್ನು ಸಾಧಿಸಿ ತೋರಿಸಿದರು ಮರಳು ಭೂಮಿಯಲ್ಲಿ ನೀರು ತುಂಬಿಸಿಕೊಟ್ಟ ಮಹಾನುಭಾವರು ಎಂದು ಭದ್ರಾವತಿಯ ಸಾಹಿತಿ ಜಿ. ವಿ. ಸಂಗಮೇಶ್ವರ ಹೇಳಿದರು
ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪುರುಷ ವಿದ್ಯಾರ್ಥಿ ನಿಲಯದಲ್ಲಿ ಈರಮ್ಮ ವೀರಭದ್ದಪ್ಪ ದತ್ತಿ, ಸರ್. ಎಂ. ವಿಶ್ವೇಶ್ವರಯ್ಯ ಅವರ ಕುರಿತು ಮಾತನಾಡುತ್ತಿದ್ದರು
ಸರ್ ಎಂ. ವಿ. ಅವರ ಸಾಧನೆ ಶೋಧನೆ ಮತ್ತು ಆಸಕ್ತಿ ಇಡೀ ದೇಶವೇ ಕೊಂಡಾಡಿದೆ.
ಕೆರೆಕಟ್ಟೆಗಳನ್ನು ಕಟ್ಟುವುದು ಹೇಗೆ? ಅದಕ್ಕೆ ನೀರು ತುಂಬಿಸುವುದು ಹೇಗೆ ಬರಡುನಾಡಿನ ಭೂಮಿಯಲ್ಲಿಯೂ ಅತ್ಯಂತ ಕಡಿಮೆ ಖರ್ಚಿನಲ್ಲಿ ನೀರು ಉಳಿಸುವುದು ಹೇಗೆ ಎಂಬುದನ್ನು ತಮ್ಮ ಪ್ರಯೋಗಾತ್ಮಕ ಚಿಂತನೆಯಿಂದಲೇ ತೋರಿಸಿಕೊಟ್ಟರು. ಬಿಜಾಪುರ ಹೈದರಾಬಾದ್ ಮುಂತಾದ ಕಡೆಗಳಲ್ಲಿ ತಮ್ಮ ಇಂಜಿನಿಯರಿಂಗ್ ವೃತ್ತಿಯನ್ನು ಮುಂದುವರಿಸಿ ತಮ್ಮ ಅಸಾಧಾರಣ ಪಾಂಡಿತ್ಯದ ಮೂಲಕ ನೀರು ಸಂಗ್ರಹಣೆ ಮತ್ತು ಸರಬರಾಜು ಮಾಡುವ ಕುರಿತು ಅದರ ವೈಶಿಷ್ಟ್ಯಗಳನ್ನು ಪರಿಚಯಿಸಿದರಲ್ಲದೆ ಸರ್ಕಾರದ ಗಮನ ಸೆಳೆದರು ಅಂದಿನ ಮೈಸೂರು ಮಹಾರಾಜರು ಇವರ ಕಾಯಕ ಪ್ರಭುತ್ವಕ್ಕೆ ಬೆರಗಾಗಿದ್ದರು, ಮೈಸೂರು ಒಳಗೊಂಡಂತೆ ದೇಶದಲ್ಲಿ ಅನೇಕ ಚೆಕ್ ಡ್ಯಾಮ್ ಗಳನ್ನು ನಿರ್ಮಿಸುವಲ್ಲಿ ಸರ್ ಎಂ. ವಿ. ತಮ್ಮ ಆಳವಾದ ಜ್ಞಾನವನ್ನು ಕಾಯಕಕ್ಕೆ ಮೀಸಲಾಗಿಟ್ಟರು ಭದ್ರಾವತಿಯ ಉಕ್ಕು ಕಾರ್ಖಾನೆಯನ್ನು ಒಳಗೊಂಡಂತೆ ಲಿಂಗನಮಕ್ಕಿ ಜಲಾಶಯವನ್ನು ನಿರ್ಮಿಸಲು ಇವರು ನೀಡಿದ ಕೊಡುಗೆ ದೊಡ್ಡದು ಎಂದರು. ಇಂದಿನ ಯುವಜನರು ಸರ್ ಎಂ. ವಿ. ಅವರ ಜ್ಞಾನ ಮತ್ತು ಬದುಕು ಮಾದರಿಯಾಗಿಟ್ಟುಕೊಂಡು ಮುನ್ನಡೆಯಬೇಕು ಎಂದರು.
ಜಿ. ಶರಶ್ಚಂದ್ರ ರಾನಡೆ ಅವರು ಸ್ಥಾಪಿಸಿರುವ ವರಕವಿ ಬೇಂದ್ರೆ ಸ್ಮಾರಕ ದತ್ತಿ ಆಶಯದಂತೆ ಉಪನ್ಯಾಸ ನೀಡಿದ ಪತ್ರಕರ್ತ ದೀಪಕ್ ಸಾಗರ್ ಕನ್ನಡಕ್ಕೆ ಹೊಸ ಪದಗಳನ್ನು ನೀಡಿದ ಶಬ್ದ ಗಾರುಡಿಗ ದ.ರಾ. ಬೇಂದ್ರೆ ತಮ್ಮ ಕಾವ್ಯ ಪ್ರಭೇಯ ಮೂಲಕವೇ ರಾಜ್ಯದ ಗಮನ ಸೆಳೆದರು ಉತ್ತರ ಕರ್ನಾಟಕದ ಭಾಷೆಗೆ ತಾರಾ ಮೂಲ್ಯವನ್ನು ತಮ್ಮ ಕಾವ್ಯಗಳ ಮೂಲಕ ತಂದುಕೊಟ್ಟ ಮಹಾನ್ ಕವಿ ಬೇಂದ್ರೆ, ಪ್ರಕೃತಿಯ ರಮಣೀಯತೆಯನ್ನು ಕಾವ್ಯದಲ್ಲಿ ತೆರೆದಿಡುತ್ತಲೇ ನಿಧಾನವಾಗಿ ಆಧ್ಯಾತ್ಮದೊಡೆಗೆ ತಮ್ಮ ಕವನಗಳನ್ನು ಕೊಂಡೊಯ್ಯುತ್ತಾರೆ ಇವರಿಗೆ ಯೋಗಿ ಅರವಿಂದರ ಪ್ರಭಾವ ಎಚ್ಚೆತ್ತು, ಸಂಖ್ಯಾ ಶಾಸ್ತ್ರವನ್ನು ಅಭ್ಯಾಸ ಮಾಡಿಕೊಂಡಿದ್ದ ಬೇಂದ್ರೆಯವರು ಅವುಗಳನ್ನು ಬಳಸಿಕೊಂಡು ಪದ್ಯಗಳನ್ನು ರಚಿಸುತ್ತಾರೆ ದೇಶದ ಇತಿಹಾಸದಲ್ಲಿ ಕವಿ ಬರೆದ ಪದ್ಯಕ್ಕೆ ಜೈಲು ವಾಸ ಅನುಭವಿಸಿದ್ದು ಬಹಳ ಅಪರೂಪ ಬೇಂದ್ರೆ ಅವರು ಬರೆದ ನರಬಲಿ ಪದ್ಯದ ವಿರುದ್ಧ ಬ್ರಿಟೀಷರು 9 ತಿಂಗಳುಗಳ ಕಾಲ ಅವರನ್ನು ಹಿಂಡಲಗಾ ಜೈಲಿನಲ್ಲಿ ಇಡುತ್ತಾರೆ ಅಲ್ಲದೆ ಅವರಿಗೆ ಸರ್ಕಾರಿ ನೌಕರಿಯನ್ನು ನೀಡದಂತೆ ತಾಕಿತು ಮಾಡುತ್ತಾರೆ ಬದುಕಿನಲ್ಲಿ ಎಲ್ಲಾ ಕಷ್ಟಗಳನ್ನು ಅನುಭವಿಸಿ ಬೇಂದ್ರೆ ತಮ್ಮ ಕಾವ್ಯ ಪ್ರಭೇಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಅತ್ಯಂತ ಎತ್ತರದಲ್ಲಿ ನಿಲ್ಲುತ್ತಾರೆ. ತಮ್ಮ ಪದ್ಯಗಳನ್ನು ವಿಶಿಷ್ಟ ಶೈಲಿಯಲ್ಲಿ ಓದುತ್ತಲೇ ಅವರು ಎಲ್ಲರ ಗಮನ ಸೆಳೆದಿದ್ದರು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೇಂದ್ರೆ ಕಾರ್ಯನಿರ್ವಹಿಸಿದ್ದರು ಎಂಬುದು ಜಿಲ್ಲೆಯ ಹೆಮ್ಮೆ, ಹಲವು ಹಾಡಬೇಕಾದ ಗೀತೆಗಳ ಮೇಲೆ ಮಾತ್ರ ಸಾಹಿತ್ಯ ಪ್ರೇಮಿಗಳಾದ ನಾವು ಮನಸ್ಸನ್ನು ಕೇಂದ್ರೀಕರಿಸುತಿದ್ದೇವೆ ಹೊರತು, ಹಾಡಿನ ಹಂಗಿಲ್ಲದ ಕವಿತೆಗಳನ್ನು ಕೂಡ ಓದುವ ಪರಿಪಾಠ ಬೆಳೆಸಿಕೊಳ್ಳೋಣ ಎಂದ ಅವರು ನಾದಲೀಲೆ, ಬಾಲ ಬೋಧೆ, ಬಹತ್ತರ, ಗರಿ, ನಾಕುತಂತಿ, ಮುಂತಾದ ಕವನ ಸಂಕಲನಗಳ ಕವಿತೆಗಳನ್ನು ವಾಚಿಸಿದರು.
ಗಾಯಕಿ ಸಹನಾ ಜಿ ಭಟ್ ವರಕವಿ ಬೇಂದ್ರೆಯವರ ಗೀತ ಗಾಯನ ನಡೆಸಿಕೊಟ್ಟು ಬೇಂದ್ರೆಯವರ ಭಾವಗೀತೆ ಲೋಕವನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ರಾಜಾಶ್ರಯ ದಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ದತ್ತಿ ನಿಧಿಗಳನ್ನು ಹೊಂದಿರುವ ನಮ್ಮ ಪರಿಷತ್ತಿನಲ್ಲಿ ಸಾಕಷ್ಟು ಸಾಹಿತ್ಯ ಆಸಕ್ತರು ಸಾಹಿತಿಗಳು ದತಿನಿಧಿ ಇಟ್ಟಿದ್ದಾರೆ. ದತ್ತಿನಿಧಿಯ ಉಪನ್ಯಾಸಗಳ ಮೂಲಕ ಕನ್ನಡದ ಸಾಹಿತ್ಯ ಜಗತ್ತಿನ ಮಹತ್ವವನ್ನು ಹೊಸ ತಲೆಮಾರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.
ಕನ್ನಡ ಸಾಹಿತ್ಯವನ್ನು ಗಂಭೀರವಾಗಿ ಓದುವ ಅರ್ಥ ಮಾಡಿಕೊಳ್ಳುವ ಪರಿಪಾಠ ಹೆಚ್ಚಬೇಕಿದೆ. ಪರಿಷತ್ತು ಸಾಹಿತ್ಯದ ಕಾರ್ಯಕ್ರಮಗಳನ್ನು ನಡೆಸುವವರ ಜೊತೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟು ಕಥೆಯ ಕಾವ್ಯ ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಮಜಲುಗಳನ್ನು ಯುವ ಜನತೆಗೆ ಪರಿಚಯಿಸುವ ಅಧ್ಯಯನ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ತನ್ಮೂಲಕ ಹೊಸ ತಲೆಮಾರಿನ ಬರಹಗಾರರು ಸೃಷ್ಟಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜಪ್ಪ ಎಸ್. ಎಚ್. ಅವರು ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಎಂ. ಎಂ. ಸ್ವಾಮಿ ಉಪಸ್ಥಿತರಿದ್ದರು.