ಶಿವಮೊಗ್ಗ : ಏಪ್ರಿಲ್ 25 :ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಸಾಗರ ತಾಲೂಕಿನ ವಿಜಯನಗರದಲ್ಲಿರುವ ಈಜುಕೊಳದ ದುರಸ್ಥಿ ಕಾರ್ಯ ಪೂರ್ಣಗೊಂಡಿದ್ದು, ಮೇ. 01 ರಂದು ಪುನಃ ಚಾಲನೆಗೊಳ್ಳಲಿದೆ. ಮೇ. 03 ರಿಂದ 25 ರವರೆಗೆ 21 ದಿನಗಳ ಬೇಸಿಗೆಯ ವಿಶೇಷ ಈಜು ತರಬೇತಿ ಶಿಬಿರವನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಡೆಸಲಾಗುತ್ತಿದ್ದು, ಆಸಕ್ತ 5 ವರ್ಷ ಮೇಲ್ಪಟ್ಟವರಿಂದ ಅರ್ಜಿ ಆಹ್ವಾನಿಸಿದೆ.
ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಚಿಸುವ ಕ್ರೀಡಾಸಕ್ತರು ಮಾಹಿತಿಗಾಗಿ ಮೊ.ಸಂ.: 8073085412/ 9731233184/ 9008982197 ಗಳನ್ನು ಸಂಪರ್ಕಿಸುವAತೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
