ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಇರುವಕ್ಕಿ, ಶಿವಮೊಗ್ಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಅಜೋಲ್ಲಾ ಕೃಷಿಯ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು.
ಅಜೋಲ್ಲಾ ಕೃಷಿಯು ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ನೀಡುವ ಆಕರ್ಷಿಕ ಪದ್ಧತಿಯಾಗಿದೆ,ಇದರ ಮಹತ್ವವನ್ನು ಸ್ಥಳೀಯ ರೈತರಿಗೆ ವಿದ್ಯಾರ್ಥಿಗಳು ಕಿರುನಾಟಕದ್ದ ಮೂಲಕ ತಿಳಿಸಿದರು ಹಾಗೂ ಅಜೋಲ್ಲಾ ಬೆಳೆಯುವ ವಿಧಾನ, ಅದರ ಆರೋಗ್ಯಕರ ಉಪಯೋಗಗಳು, ಮಣ್ಣಿನ ನೈಸರ್ಗಿಕ ಪೋಷಕಾಂಶ ವೃದ್ದಿ ಮತ್ತು ಬಹುಮುಖ್ಯವಾಗಿ ಜಾನುವಾರುಗಳಿಗೆ ಪೌಷ್ಟಿಕ ಆಹಾರವಾಗಿ ಬಳಸುವುದನ್ನು ಹೇಳಿಕೊಟ್ಟರು. ಈ ವೇಳೆ ಪ್ರಾರಂಭದಿಂದ ಕೊನೆಯವರೆಗೂ ಅಜೋಲ್ಲಾ ತಯಾರಿಕಾ ವಿಧಾನವನ್ನು ತೋರಿಸಿಕೊಟ್ಟರು.
ಸ್ಥಳೀಯ ರೈತರು ಅಜೋಲ್ಲಾ ಕೃಷಿಯ ಅನೇಕ ಉಪಯೋಗಗಳನ್ನು ಬದ್ದವಾಗಿ ಕೇಳಿ ಕಲಿತು, ಈ ವಿಧಾನವನ್ನು ತಾವು ದೈನಂದಿನ ಕೃಷಿಯಲ್ಲಿ ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ.ಅಜೋಲ್ಲಾವನ್ನು ಕೃಷಿ, ಪಶುಪಾಲನೆ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಕುರಿ ಸಾಕಾಣಿಕೆ, ಆಡು ಸಾಕಾಣಿಕೆ, ಮೊಲ ಸಾಕಾಣಿಕೆ ಮುಂತಾದ ಕೆಲಸಗಳಿಗೆ ಬಳಸಲಾಗುತ್ತದೆ. ಅಜೋಲ್ಲಾವನ್ನು ಹಿಂಡಿ ಬೂಸ ಹಾಗೂ ಮೇವಿನ ಜೊತೆಗೆ ಜಾನುವಾರುಗಳಿಗೆ ದಿನಕ್ಕೆ ೧ ಕೆಜಿ ಕೊಡಬೇಕು. ಹೀಗೆ ಕೊಡುವುದರಿಂದ ಹಾಲಿನ ಇಳುವರಿ 15 -20% ಹೆಚ್ಚಾಗುತ್ತದೆ, ಕೊಬ್ಬಿನ ಅಂಶ ಹಾಗೂ ಎಸ್. ಎನ್. ಎಫ್. ಅಂಶವು ಹೆಚ್ಚಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.ಅಜೋಲ್ಲಾ ಜಾನುವಾರುಗಳಿಗೆ ಆಹಾರವಾಗಿ ಖರ್ಚು ಕಡಿಮೆ ಮಾಡುವಲ್ಲಿ ಸಹಾಯಕ ಎಂದು ರೈತರು ಅಭಿಪ್ರಾಯಪಟ್ಟರು.

error: Content is protected !!