ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ದ್ವಿತೀಯ ಬಿಎ ಎರಡನೇ ಸೆಮಿಸ್ಟರ್ ಗೆ ಕನ್ನಡ ಐಚ್ಛಿಕ ಕಾವ್ಯ (ಸಾಹಿತ್ಯ ಸೌರಭ-2) ವಿಭಾಗದಲ್ಲಿ 2024 ರಿಂದ 2028 ನೇ ಸಾಲಿಗೆ ರವಿಕುಮಾರ್ ಟೆಲೆಕ್ಸ್ ಅವರ ‘ಮರಣ ಮೃದಂಗ’ ಕವಿತೆ ಆಯ್ಕೆಯಾಗಿದೆ.
ಈ ಕವಿತೆಯನ್ನು ಅವರ ‘ನಂಜಿಲ್ಲದ ಪದಗಳು’ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ರವಿಕುಮಾರ್ ಟೆಲೆಕ್ಸ್ ಅವರು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ರಾಜ್ಯಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಎರಡೂ ಕವನ ಸಂಕಲನಗಳಿಗೂ ಬಹುಮಾನ ಬಂದಿದ್ದು, ಈ ಹಿಂದೆಯೂ ಸಹ 2015- 18ನೇ ಸಾಲಿನಲ್ಲೂ ಕುವೆಂಪು ವಿವಿ ಪದವಿ ತರಗತಿಗಳ ಮೂರನೇ ಸೆಮಿಸ್ಟರ್ ಗೆ ಇವರ ‘ಅಪ್ಪ’ ಕವನ ಪಠ್ಯವಾಗಿ ಆಯ್ಕೆಯಾಗಿತ್ತು. ಟೆಲೆಕ್ಸ್ ರವಿಕುಮಾರ್ ಅವರಿಗೆ ಅವರ ಗೆಳೆಯರ ಬಳಗ ಅಭಿನಂದನೆ ಸಲ್ಲಿಸಿದೆ.

Leave a Reply

error: Content is protected !!