ಶಿವಮೊಗ್ಗ, ಫೆಬ್ರವರಿ 04 : ಶಿವಮೊಗ್ಗ ನಗರದ, ಶ್ರೀರಾಂಪುರ ನಗರ, ಮೊದಲ ತಿರುವಿನ ರಸ್ತೆಯ ಪಕ್ಕದಲ್ಲಿ ಕೈಚೀಲದಲ್ಲಿ ಸುಮಾರು 1 ದಿನದ ಗಂಡು ಮಗು ಪತ್ತೆಯಾಗಿದ್ದು ಸಾರ್ವಜನಿಕರು ರಕ್ಷಣೆ ಮಾಡಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಡಿಸಿಪಿಯು ಘಟಕ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ ಇಲ್ಲಿಗೆ ದಾಖಲಿಸಿರುತ್ತಾರೆ.
ಮಗುವಿನ ಮುಂದಿನ ಪುನರ್ವಸತಿ ಹಿತದೃಷ್ಠಿಯಿಂದ ಮಗುವಿನ ಸಂಬAಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಆಲ್ಕೊಳ, ಶಿವಮೊಗ್ಗ ಇವರ ಕಛೇರಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08182-295511 ಗೆ ಸಂಪರ್ಕಿಸುವAತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
