ಸ್ವಸಹಾಯ ಸಂಘದವರು ತಯಾರು ಮಾಡುವ ತೊಡೆದೇವು ಆಹಾರ ಪದಾರ್ಥಕ್ಕೆ ರಾಜ್ಯದಲ್ಲಡೆ ಬಹು ಬೇಡಿಕೆ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾಲ್ವೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಳಿ ಎನ್ನುವ ಗ್ರಾಮದಲ್ಲಿ ಲಕ್ಷ್ಮಿ ಸ್ವಸಹಾಯ ಸಂಘಟನೆ ಅತ್ಯಂತ ಉತ್ತಮವಾಗಿ ಕೆಲಸ ಮಾಡುತ್ತಿದೆ

ಅಕ್ಕಿ ಮತ್ತು ಬೆಲ್ಲ ,ಸಿರಿಧಾನ್ಯ ಮತ್ತು ಬೆಲ್ಲ ಬಳಸಿ ಇವುಗಳಲ್ಲಿ ತಯಾರಾಗುವ ತೊಡದೇವು ಎನ್ನುವ ಖಾದ್ಯವನ್ನು ತಯಾರಿಸುತ್ತಿದ್ದಾರೆ ಇದು ಅತ್ಯಂತ ಜನಪ್ರಿಯಗೊಳುತ್ತಿರುವುದಲ್ಲದೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಜೀವನೋಪಾಯ ಯೋಜನೆಯಲ್ಲಿ (ಸಂಜೀವಿನಿ) ನೆರವು ಪಡೆದು ಈ ಖಾದ್ಯವನ್ನು ತಯಾರಿಸುತ್ತಿದ್ದಾರೆ. ಇದರ ಫಲಾನುಭವಿ ಪ್ರತಿಮಾ

ಮಹಿಳೆಯರ ಗುಂಪು ಕಟ್ಟಿಕೊಂಡು ಅವರ ಸಹಕಾರದಿಂದ ಈ ಖಾದ್ಯವನ್ನು ತಯಾರಿಸುತ್ತಿದ್ದಾರೆ

ಪ್ರತಿಮಾ ರಾಷ್ಟ್ರೀಯ ಮಹಿಳಾ ಜೀವನೋಪಾಯ ಯೋಜನೆ ಫಲಾನುಭವಿ ಮಾತನಾಡಿ
ನಾವು ನಮ್ಮ ಲಕ್ಷ್ಮೀ ಸ್ವಸಹಾಯ ಗುಂಪಿನಿಂದ ತೊಡದೇವು ಎನ್ನುವ ಖಾದ್ಯ ತಯಾರಿಸುತ್ತಿದ್ದೇವೆ ಇದರಲ್ಲಿ ನಮಗೆ ಉತ್ತಮ ಲಾಭವಾಗುತ್ತದೆ, ಹೋಳಿಗೆ ತಿನ್ನುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಆಗಬಹುದು ಆದರೆ ತೊಡದೇವು ಸಿಹಿ ಖಾದ್ಯವಾದರೂ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದೆ, ಕೆಡದೆ ಒಂದು ತಿಂಗಳ ಕಾಲ ಹಾಗೆ ಇಟ್ಟು ತಿನ್ನಬಹುದಾಗಿದೆ ಕೇಂದ್ರ ಸರ್ಕಾರದ ಯೋಜನೆಯಲ್ಲಿ ನಮ್ಮ ಗುಂಪಿಗೆ 40,000 ಸಹಕಾರ ನೀಡಿದ್ದಾರೆ ಇದರಿಂದ ನಮಗೆ ಮೂಲ ಬಂಡವಾಳ ದೊರೆತು ಮಾರುಕಟ್ಟೆಗೆ ಸಹಕಾರಿಯಾಗಿದೆ.

ಪ್ರಭಾವತಿ ಸ್ವಸಹಾಯ ಸಂಘದ ಸದಸ್ಯೆ ಮಾತನಾಡಿ

ತೊಡೆದೇವು ತಯಾರಿಸುವ ಕಾಯಕ ಅತ್ಯಂತ ಉಪಯುಕ್ತವಾಗಿದ್ದು ಲಾಭ ತರುವಂತದ್ದಾಗಿದೆ ನಮ್ಮ ಪುಟ್ಟ ಗ್ರಾಮದಲ್ಲಿ ಪ್ರತಿಭಾ ನಡೆಸುತ್ತಿರುವ ಪ್ರಯತ್ನ
ಎಲ್ಲರಿಗೂ ಮಾರ್ಗಸೂಚಿಯಾಗಿದೆ ತೊಡದೇವು ಎನ್ನುವ ಖಾದ್ಯ ಸಿದ್ದಾಪುರ ಸೇರಿಸಿ ಸಾಗರ ಹೊಸನಗರ ಮುಂತಾದ ಭಾಗಗಳಲ್ಲಿ ಅತ್ಯಂತ ಪ್ರಚಲಿತವಾಗಿದೆ ಆದರೆ ಇದನ್ನು ತಯಾರಿಸುವ ರೀತಿಯ ಬೇರೆ ಮಡಿಕೆಯನ್ನು ತಿರುಗ ಮುರುಗ ಮಾಡಿ ಅದರ ಒಳಗೆ ಶಾಖ ಕೊಟ್ಟು ಅಕ್ಕಿ ಮತ್ತು ಜೋನಿ ಬೆಲ್ಲವನ್ನು ಒಂದು ಹದಕ್ಕೆ ಬೆರಸಿ ತೆಳುವಾಗಿ ದೋಸೆಯ ರೀತಿಯಲ್ಲಿ ಇದನ್ನು ತೆಗೆಯಲಾಗುತ್ತದೆ ನಂತರ ಇದು ಗಟ್ಟಿಯಾಗುತ್ತದೆ ತೆಳ್ಳಗಿರುವ ಇರುವ ಸಿಹಿ ಇರುವ ಈ ಖಾದ್ಯ ತಿನ್ನಲು ಬಲು ರುಚಿ ಕಳೆದ 11 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಕೊಂಡಿರುವ ಪ್ರತಿಮಾ ಸರ್ಕಾರದ ಸಹಕಾರವನ್ನು ಪಡೆದು ಯಶಸ್ಸಿನತ್ತ ಹೆಜ್ಜೆ ಇಟ್ಟಿದ್ದಾರೆ
ಇತ್ತೀಚೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ತೊಡದೇವು ಕೂಡ ಬಿಡುಗಡೆ ಮಾಡಿದರು
ಮದುವೆ ಸಮಾರಂಭಗಳಿಗೆ ಹೋಟೆಲಗಳಲ್ಲಿ ಈ ಖಾದ್ಯ ಬಹು ಬೇಡಿಕೆಯನ್ನು ಹೊಂದುತ್ತಿದ್ದು ಬೇರೆ ರಾಜ್ಯಗಳಿಗೂ ರವಾಲೆಯಾಗುತ್ತಿರುವುದು ಸಂಘಟನೆ ಹೆಗ್ಗಳಿಕೆಯಾಗಿದೆ

ನಂದಿನಿ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಶಿವಮೊಗ್ಗ ಮಾಹಿತಿ ನೀಡಿ

ರಾಷ್ಟ್ರೀಯ ಜೀವನೋಪಾಯ ಯೋಜನೆಯಿಂದ ಮಹಿಳೆಯರ ಆರ್ಥಿಕ ಪ್ರಗತಿಗೆ ತುಂಬಾ ಸಹಕಾರಿಯಾಗಿದ್ದು ನಮ್ಮಲ್ಲಿ ಯೋಜನೆ ಉತ್ತಮ ಫಲವಂತಿಕೆಯನ್ನು ಕಂಡಿದೆ ಬರುವ ದಿನಗಳಲ್ಲಿ ತೊಡದೇವು ತಯಾರಿಸುವ ಕಾರ್ಯಕ್ಕೆ ಇನ್ನಷ್ಟು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

error: Content is protected !!