“ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಅಭ್ಯಾಸಗಳು ಹಾಗೂ ಕಲುಷಿತ ಆಹಾರಗಳು ಜನಜೀವನದ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತಿವೆ. ಜನಸಾಮಾನ್ಯರು ಆರೋಗ್ಯಕರ ಆಹಾರ ಪದ್ಧತಿ ಹಾಗೂ ಆಯುರ್ವೇದ ಶೈಲಿಯ ಸಹಜ ಪದ್ಶತಿಗಳನ್ನು ಅನುಸರಿಸುವ ಮೂಲಕ ಸ್ವಸ್ಥ ಬದುಕು ಬಾಳಬೇಕು” ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶ್ರೀಮತಿ ಶಾರದಾ ಪೂರ್ಯಾ ನಾಯ್ಕ್ ಅವರು ಅಭಿಪ್ರಾಯಪಟ್ಟರು. ಮಂಡಘಟ್ಟ ಪಂಚಾಯ್ತಿ ವ್ಯಾಪ್ತಿಯ ಕಾಚಿಕೊಪ್ಪ ಗ್ರಾಮದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿಶೇಷ ವಾರ್ಷಿಕ ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಇಂತಹಾ ಶಿಬಿರಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ, ಗ್ರಾಮಸ್ಥರಿಗೂ ಅನುಕೂಲಕರ” ಎಂದು ತಿಳಿಸಿದರು. ಶಿಬಿರದ ಅಂಗವಾಗಿ ಗ್ರಾಮಸ್ಥರಿಗೆ ಶಿವಮೊಗ್ಗದ ಸರ್ಕಾರಿ ಆಯುರ್ವೇದ ಮತ್ತು ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಏರ್ಪಡಿಸಲಾಗಿತ್ತು. 150ಕ್ಕೂ ಹೆಚ್ಚಿನ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು.


ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ.ಪ್ರಶಾಂತ್, ಡಾ.ಆಶಾ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಸಂಜೆಯ ಕಾರ್ಯಕ್ರಮದಲ್ಲಿ ಡಾ.ಪ್ರಶಾಂತ್ ಬಾಗಲಕೋಟೆಯವರು “ಅಗೋಚರ ಕೆಚ್ಚಲುಬಾವು ಪತ್ತೆ ಹಚ್ಚುವ ಹಾಗೂ ಕಲಬೆರಕೆ ಕಂಡು ಹಿಡಿಯುವ ಕ್ರಮಗಳ” ಕುರಿತು ಪ್ರಾತ್ಯಕ್ಷತೆ ನೀಡಿದರು. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ತಜ್ಞರಾದ ಡಾ.ಪ್ರದೀಪ್ ಗೋಪಕಲಿ ಹಾಗೂ ಡಾ.ದಿನೇಶ್ ರವರು ಕ್ರಮವಾಗಿ “ಹವಾಮಾನ ಬದಲಾವಣೆ ಹಾಗೂ ಕೃಷಿ” ಮತ್ತು “ಬೀಜೋತ್ಪಾದನೆ” ಕುರಿತು ಮಾಹಿತಿ ನೀಡಿದರು. ಗ್ರಾಮದ ಮುಖಂಡರಾದ ಶ್ರೀಮತಿ ಕಮಲಾಕ್ಷಿ, ಶ್ರೀಮತಿ ದೀಪಾ, ಶ್ರೀಮತಿ ಮಮತಾ, ಶ್ರೀ ಕರಿಬಸಪ್ಪ, ಶ್ರೀ ಮಹೇಶ್ವರಪ್ಪ, ಶ್ರೀ ನಾಗರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು. ಪಶುವೈದ್ಯಕೀಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಡಾ.ಹರೀಶ್ ಎಂ ಮತ್ತು ಡಾ.ರವಿಕುಮಾರ್.ಪಿಇಡೀ ದಿನದ ಕಾರ್ಯಕ್ರಮವನ್ನು ಸಂಘಟಿಸಿದರು.

error: Content is protected !!