ದಿನಾಂಕ:03.03.2024 ರ ಭಾನುವಾರದಂದು ಶಿವಮೊಗ್ಗ ಜಿಲ್ಲೆಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ 0-5 ವರ್ಷದ ಒಳಗಿನ 120626 ಮಕ್ಕಳಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಜೊತೆಗೆ ಅತೀ ಸೂಕ್ಷ ಪ್ರದೇಶಗಳೆಂದು ಗುತುತಿಸಲ್ಪಟ್ಟ ಕೊಳಚೆ ಪ್ರದೇಶ, ಅಲೆಮಾರಿ ಜನಾಂಗ, ಇಟ್ಟಿಗೆ ಬಟ್ಟಗಳು, ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರ ವಸತಿ ಪ್ರದೇಶಗಳನ್ನೊಳಗೊಂಡು ಬಸ್ಸು ನಿಲ್ದಾಣ, ರೈಲ್ವೆ ನಿಲ್ದಾಣಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 1037 ಲಸಿಕಾ ಬೂತ್‌ಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿವರು ಹಾಗೂ ಪ್ರಾಥಮಿಕ ಆರೋಗ್ಯ
ಸುರಕ್ಷ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ವ್ಯಾಕ್ಸಿನೆಟರ್‌ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಪಲ್ಸ್ ಪೋಲಿಯೋ ಲಸಿಕೆ
ನೀಡಲು ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲ, ಅಂಗನವಾಡಿಗಳಲ್ಲಿ, ಶಾಲೆಗಳಲ್ಲಿ ಲಸಿಕಾಬೂತ್‌ಗಳನ್ನು
ತೆರೆಯಲಾಗುತ್ತದೆ. ಪ್ರತಿಯೊಂದು ತಾಲ್ಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ಮತ್ತು
ಮೇಲ್ವಿಚಾರಕರನ್ನು ನೇಮಿಸಿ ಕಾರ್ಯಕ್ರಮ ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗಿದೆ. ಸಾರ್ವಜನಿಕರು ಈ ಹಿಂದೆ 5 ವರ್ಷದ ಒಳಗಿನ ಮಕ್ಕಳಿಗೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರು ಮಾರ್ಚ್ 03 ಪೋಲಿಯೋ ಭಾನುವಾರದಂದು ಪುನಃ ಪೋಲಿಯೋ ಲಸಿಕೆ ಹಾಕಿಸುವಂತೆ ಹಾಗೂ ದಿನಾಂಕ:-03.03.2024 ರಂದು ಭಾನುವಾರ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಎಲ್ಲಾ ಲಸಿಕಾ ಬೂತ್‌ಗಳಲ್ಲಿ ಪಲ್ಸ್
ಪೋಲಿಯೋ ಲಸಿಕೆಯನ್ನು O-5ವರ್ಷದ ಮಕ್ಕಳಿಗೆ ಉಚಿತವಾಗಿ ನೀಡಲಾಗುವುದು. ಸಾರ್ವಜನಿಕರು ಈ
ಲಸಿಕಾ ಬೂತ್‌ಗಳಲ್ಲಿ ದಿನಾಂಕ:03.03.2024ರ ಭಾನುವಾರ ತಮ್ಮ ೦-5ವರ್ಷದ ಎಲ್ಲಾ ಮಕ್ಕಳಿಗೆ
ಕರೆತಂದು ಪೋಲಿಯೋ ಲಸಿಕೆ ಹಾಕಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಗುರುದತ್ತ ಹೆಗಡೆರವರು
ಕೋರಿರುತ್ತಾರೆ.

error: Content is protected !!